ಬೆಂಗಳೂರು: ನಿನ್ನೆ ನಗರದ ಹೆಬ್ಬಾಳ ಫ್ಲೈಓವರ್ ಬಳಿಯ ಎಸ್ಟೀಮ್ ಮಾಲ್ ಬಳಿಯಲ್ಲಿ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಹಲವು ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೇ ವಾಹನಗಳು ಜಖಂ ಕೂಡ ಆಗಿದ್ದವು. ಈ ಘಟನೆಗೆ ಕಾರಣವಾದಂತ ಚಾಲಕನನ್ನು ಅಮಾನತುಗೊಳಿಸಿ ಸಂಸ್ಥೆ ಆದೇಶಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ದಿನಾಂಕ 12.08.2024 ರಂದು ಘಟಕ 25 ಕ್ಕೆ ಸೇರಿದ ವಾಹನ ಸಂಖ್ಯೆ ಕೆಎ 57 ಎಫ್ 1797 ರ ವಾಹನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್ಎಸ್ಆರ್ ಲೇಔಟ್ ಕಡೆಗೆ ಹೋಗುತ್ತಿರಬೇಕಾದರೆ ಸಮಯ 9.25 ರಲ್ಲಿ ಎಸ್ಟೀಮ್ ಮಾಲ್ ಬಳಿ ಬಸ್ಸಿನ ಮುಂದಿನ ಭಾಗದಿಂದ ಕಾರಿನ ಹಿಂದಿನ ಭಾಗಕ್ಕೆ ಡಿಕ್ಕಿ ಆದ ಪರಿಣಾಮ ಕಾರು ಮುಂದೆ ಚಲಿಸಿ ಅದರ ಮುಂದೆ ಇದ್ದಂತಹ ಇನ್ನು ಎರಡು ಕಾರುಗಳಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿರುತ್ತದೆ. ಈ ಅಪಘಾತದಿಂದ ದ್ವಿಚಕ್ರ ವಾಹನ ಓರ್ವ ಸವಾರನ ಕಾಲಿಗೆ ಪೆಟ್ಟಾಗಿರುತ್ತದೆ ಮತ್ತು ಘಟನೆಯಲ್ಲಿ ಯಾವುದೇ ರೀತಿಯ ಸಾವು-ನೋವು ಸಂಭವಿಸಿರುವುದಿಲ್ಲ ಎಂದಿದೆ.
ಸಂಸ್ಥೆಯ ಅಧಿಕಾರಿಗಳು ಅಪಘಾತಕ್ಕೆ ಸಂಬಂಧಪಟ್ಟ ಎಲ್ಲಾ ಅಂಶಗಳನ್ನು ಕೂಲಂಕೂಷವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದ ಚಾಲಕರಾದ ರಾಜಕುಮಾರ್, ಬಿಲ್ಲೆ ಸಂಖ್ಯೆ 20617, ಘಟಕ 25 ಎಚ್ಎಸ್ಆರ್ ಲೇಔಟ್ ರವರನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ತಿಳಿಸಿದೆ.
ಡೋಪಿಂಗ್ ನಿಯಮ ಉಲ್ಲಂಘನೆ: ಪ್ಯಾರಾಲಿಂಪಿಯನ್ ಪ್ರಮೋದ್ ಭಗತ್ ಗೆ 18 ತಿಂಗಳು ನಿಷೇಧ
BREAKING : ನಟ ದರ್ಶನ್ ಸೇರಿದಂತೆ 6 ಆರೋಪಿಗಳ ಬಟ್ಟೆ ಮೇಲೆ ರೇಣುಕಾ ಸ್ವಾಮಿಯ ರಕ್ತದ ಕಲೆ ಪತ್ತೆ!