ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಎಂಟಿಸಿಯಿಂದ 1,027 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಮೂಲಕ ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಮುನ್ನುಡಿಯನ್ನೇ ಬಿಎಂಟಿಸಿ ಬರೆದಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಒಂಬತ್ತು ಮೀಟರ್ ಉದ್ದದ 90 ಹವಾನಿಯಂತ್ರಣ ರಹಿತ ಇವಿ ಬಸ್‌ಗಳು ಮೆಟ್ರೋ ಫೀಡರ್ ಸೇವೆ ನೀಡುತ್ತಿವೆ.
ಫೇಮ್–2 ಯೋಜನೆಯಡಿಯಲ್ಲಿ 12 ಮೀಟರ್ ಉದ್ದದ 300 ಹವಾನಿಯಂತ್ರಣ ರಹಿತ ಇವಿ ಬಸ್‌ಗಳು ಬೆಂಗಳೂರು ನಗರ ಪ್ರದೇಶದಲ್ಲಿ ಸಂಚರಿಸುತ್ತಿವೆ. ಫೇಮ್–3 ಯೋಜನೆಯಡಿಯಲ್ಲಿ 637 ಹವಾನಿಯಂತ್ರಿತ ರಹಿತ ಇವಿ ಬಸ್‌ಗಳನ್ನು ಪರಿಚಯಿಸಲಾಗಿದೆ.
ನವೆಂಬರ್ ಅಂತ್ಯದ ವೇಳೆಗೆ ಇನ್ನೂ 287 ಇವಿ ಬಸ್‌ಗಳು ಕಾರ್ಯಚರಣೆ ನಡೆಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಟ್ಟು 760 ಇವಿ ಬಸ್‌ಗಳು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.
ಇವಿ ಬಸ್‌ಗಳ ಬಳಕೆಯಿಂದ ನಗರದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿದೆ. ಸದ್ಯ ನಗರದಲ್ಲಿ ಒಂದು ಸಾವಿರ ಇವಿ ಬಸ್‌ಗಳು ಸಂಚರಿಸುತ್ತಿದ್ದು, ಇದರಿಂದ ಬಿಎಂಟಿಸಿಗೆ ಪ್ರತಿದಿನ 51 ಸಾವಿರ ಲೀಟರ್ ಡಿಸೆಲ್ ಉಳಿತಾಯವಾಗುತ್ತಿದೆ. ಹಳೆ ಡೀಸೆಲ್ ಬಸ್‌ಗಳಿಗೆ ಹೋಲಿಸಿದರೆ ಇವಿ ಬಸ್‌ಗಳಿಂದ ಶಬ್ದ ಮಾಲಿನ್ಯ ಕಡಿಮೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿದೆ ಇಂದಿನ ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಾಧ್ಯಸ್ಥ ಸಭೆಯ ಪ್ರಮುಖ ಹೈಲೈಟ್ಸ್
‘ಖಲಿಸ್ತಾನಿ ಭಯೋತ್ಪಾದಕ’ ಪನ್ನುನಿ ಹತ್ಯೆ ಯತ್ನ: ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿ ಮಾಡಿದ ಅಮೆರಿಕ ಕೋರ್ಟ್