ಬೆಂಗಳೂರು: ದೇಶದಲ್ಲೇ ಇದೇ ಮೊದಲು ಎನ್ನುವಂತೆ ನಮ್ಮ ಮೆಟ್ರೋ ಕಾಮಗಾರಿ ವೇಳೆಯಲ್ಲಿ ಬಿಎಂಆರ್ ಸಿಎಲ್ ಮಹತ್ವದ ಸಾಧನೆ ಮಾಡಿದೆ. ಅದೇ ಬಾಕ್ಸ್ ಆಕಾರದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಯನ್ನು ಯಶಸ್ವಿಯಾಗಿ ನಡೆಸಿದ್ದಾಗಿದೆ.
ಈ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ಹಂಚಿಕೊಂಡಿದ್ದು, ಹೊಸ ತಂತ್ರಜ್ಞಾನ ಬಳಸಿ ವೃತ್ತಾಕಾರದ ಮಾರ್ಗವಾಗಿ ಅಂಡರ್ ಗ್ರೌಂಡ್ ಕಾಮಾಗಿರಿ ಮಾಡಿ ಯಶಸ್ವಿಯಾಗಿದ್ದೆವು. ಈಗ ಬಾಕ್ಸ್ ಆಕಾರದಲ್ಲಿ ಕಾಮಾಗಿರಿ ಮಾಡಿ ಸಕ್ಸಸ್ ಆಗಿದ್ದೇವೆ ಅಂತ ಹೇಳಿದೆ.
ಇದೇ ಮೊದಲ ಬಾರಿಗೆ ಬಿಎಂಆರ್ ಸಿಎಲ್ ಸುಮಾರು 77 ಮೀಟರ್ ಉದ್ದದ ಒಆರ್ ಆರ್ ನ ಕೆಳಗಿರುವ ಸುರಂಗ ಕಾಮಗಾರಿಗಾಗಿ ಬಾಕ್ಸ್ ಪುಷಿಂಗ್ ತಂತ್ರಜ್ಞಾನವನ್ನು ಬಳಸಿದೆ. ಇದನ್ನು ನಾಗವಾರ ಯುಜಿ ನಿಲ್ದಾಣದ ದಕ್ಷಿಣ ಭಾಗದಲ್ಲಿ ಸರ್ವಿಸ್ ರಸ್ತೆ ಮತ್ತು ಒಆರ್ ಆರ್ ನ ಫ್ಲೈಓವರ್ ಕೆಳಗೆ ಮಾಡಲಾಗುತ್ತದೆ. ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದಿದೆ.
For the first time BMRCL has used Box Pushing technology for the tunnel work below ORR for a length of about 77m. This is done on the southside of Nagawara UG station below the service road and the flyover of ORR. The work has been successfully completed. pic.twitter.com/V4dNvkG0c7
— Srivas Rajagopalan (@srivasrbmrccoi1) May 29, 2024
ಇನ್ನು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿ.ಮೀ. ಉದ್ದದ ಹೊಸ ಮಾರ್ಗವನ್ನು ಮಾರ್ಚ್ 2025ರ ಒಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಕಾರ್ಯಾಚರಣೆ ಜಾಲವು 117 ಕಿ.ಮೀಗೆ ವಿಸ್ತರಣೆಗೊಂಡಂತೆ ಆಗಲಿದೆ.
Kerala Viral Video: ಕೇರಳದಲ್ಲಿ ‘KSRTC ಬಸ್’ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ: ವೀಡಿಯೋ ವೈರಲ್