ಬೆಂಗಳೂರು : ಮಹಾನ್ ನಾಯಕರೊಬ್ಬರು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳಿಸಲು 1,000 ಕೋಟಿ ರೂ. ತೆಗೆದಿಟ್ಟಿದ್ದಾರೆ ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ಟ್ವೀಟರ್ ನಲ್ಲಿ ವ್ಯಂಗ್ಯ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಮತ್ತು ಕಪ್ಪು ಹಣ ಹೋರಾಟದ ನಾಟಕ ಎಂದು ಕಿಡಿಕಾರಿದ್ದು, ಕಪ್ಪು ಕಾಂಚಾಣ ಕುಣಿಯುತ್ತಿತ್ತು, ಆಪರೇಷನ್ ಕಮಲ ಮಾಡುತಲಿತ್ತೋ ಎಂದು ವ್ಯಂಗ್ಯವಾಡಿದೆ.
ಕಪ್ಪು ಕಾಂಚಾಣ ಕುಣಿಯುತ್ತಿತ್ತು
“ವಿರೋಧ ಪಕ್ಷದವರ ಬೆದರಿಸುತ್ತಿತ್ತು”
ಕಪ್ಪು ಕಾಂಚಾಣ…
ಕಪ್ಪು ಕಾಂಚಾಣ ಕುಣಿಯುತ್ತಿತ್ತು
ಆದರೂ “ಇಡಿ ಸುಮ್ಮನೆ ಕೂತಿತ್ತು”
ಕಪ್ಪು ಕಾಂಚಾಣ…
ಕಪ್ಪು ಕಾಂಚಾಣ ಕುಣಿಯುತ್ತಿತ್ತು
“ಆಪರೇಷನ್ ಕಮಲ ಮಾಡುತಲಿತ್ತೋ”
ಕಪ್ಪು ಕಾಂಚಾಣ… ಎಂದು ಪದ್ಯದ ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ.