Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ‘CET’ ಪರೀಕ್ಷೆ ಬರೆಯಲು ತೆರಳುವಾಗ ಅಪಘಾತ : ಸಿಮೆಂಟ್ ಲಾರಿ ಹರಿದು ಗರ್ಭಿಣಿ ಸಾವು!

08/02/2026 5:31 PM

ಚಿಕ್ಕಮಗಳೂರಲ್ಲಿ ಭೀಕರ ಅಪಘಾತ : ಸ್ಕೂಟಿಗೆ ಆಟೋ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಸಾವು!

08/02/2026 5:13 PM

BREAKING : ಬೆಂಗಳೂರಿನಲ್ಲಿ ಘೋರ ಘಟನೆ : ಮೀನು ಹಿಡಿಯಲು ಹೋಗಿ ಬಾಲಕ ಸೇರಿ ಇಬ್ಬರು ನೀರುಪಾಲು!

08/02/2026 5:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಪಾಲರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ, ಘೇರಾವ್ ಆಂದೋಲನಕ್ಕೆ ಕರೆ
KARNATAKA

ರಾಜ್ಯಪಾಲರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ, ಘೇರಾವ್ ಆಂದೋಲನಕ್ಕೆ ಕರೆ

By kannadanewsnow0903/09/2024 4:54 PM

ಬೆಂಗಳೂರು: ರಾಜ್ಯಪಾಲರ ವಿರುದ್ಧ ವಿವಿಧ ಪ್ರಗತಿಪರ ಮುಖಂಡರು ಸಿಡಿದೆದ್ದಿದ್ದಾರೆ. ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಂತ ರಾಜ್ಯಪಾಲರ ನಡೆಯನ್ನು ಖಂಡಿಸಿ, ಅವರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನಕ್ಕೆ ನಿರ್ಧರಿಸಿದ್ದಾರೆ. ಇದಲ್ಲರೇ ರಾಜ್ಯಪಾಲರ ನಡೆದೆ ಘೇರಾವ್ ಆಂದೋಲನಕ್ಕೂ ಕರೆ ನೀಡಿರುವುದಾಗಿ ಪ್ರಗತಿಪರ ಚಿಂತಕರು, ಮುಖಂಡರು ತಿಳಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಪ್ರಗತಿಪರ ಚಿತಂಕರರು, ಕರ್ನಾಟಕದ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲಟ್ ಅವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಜಾತಿವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್‌ ಪಕ್ಷಗಳ ಕಛೇರಿಯನ್ನಾಗಿ ರಾಜಭವನವನ್ನು ಪರಿವರ್ತಿಸಿಕೊಂಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ-ಷಡ್ಯಂತ್ರಗಳ ಭಾಗವಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕ ಲೋಕಾಯುಕ್ತ, ಎಸ್.ಐ.ಟಿ ಮುಂತಾದ ತನಿಖಾ ಸಂಸ್ಥೆಗಳು ಪ್ರಾಥಮಿಕ ತನಿಖೆ ಮಾಡಿ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಮೇಲ್ನೋಟಕ್ಕೆ ಸಾಬೀತಾದ ಪ್ರಮುಖ ಪ್ರಕರಣಗಳಾದ ಕುಮಾರಸ್ವಾಮಿಯವರ ಗಣಿ ಹಗರಣ, ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿಯವರ ಭೀಕರ ಆಸ್ತಿ ಗಳಿಕೆ, ನಿರಾಣಿಯವರ ಭ್ರಷ್ಟಾಚಾರಗಳ ಕುರಿತು ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಈ ರಾಜ್ಯಪಾಲರು ಆ ಕೋರಿಕೆಗಳನ್ನು ಕಸದ ಬಗೆ ಎಸೆದು ಪಕ್ಷಪಾತ ಮಾಡಿದ್ದಾರೆ. ಇದುವರೆಗೆ ಒಬ್ಬರ ಮೇಲೂ ವಿಚಾರಣೆಗೆ ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯಪಾಲರ ನೋಟಿಸ್ ಕುರಿತು ಸಚಿವ ಸಂಪುಟ ಚರ್ಚೆ ಮಾಡಿ ನೋಟೀಸನ್ನು ಕೂಡಲೆ ವಿತ್ ಡ್ರಾ ಮಾಡುವಂತೆ ನಿರ್ಣಯ ಮಾಡಿ ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಸಹ ದೀರ್ಘವಾದ ಪ್ರತಿಕ್ರಿಯೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಇದ್ಯಾವುದನ್ನೂ ಪರಿಗಣಿಸದ ಈ ರಾಜ್ಯಪಾಲರು ರಾಜ್ಯದ ಜನನಾಯಕರಾದ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಬೇಕು ಎಂದು ತೀರ್ಮಾನಿಸಿದ್ದಾರೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇತ್ತೀಚೆಗೆ ಹೈ-ಕೋರ್ಟನ ನ್ಯಾಯಾಧೀಶರು ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರಾ? ಯಾವುದಾದರೂ ದಾಖಲೆಗಳು ಇವೆಯಾ ಎಂದು ಕೇಳಿದರೆ ವಿರೋಧಿಗಳ ಬಳಿ ಉತ್ತರವೆ ಇರಲಿಲ್ಲ. ಪಿತೂರಿ ಮಾಡಿದ್ದಾರೆ ಎಂದರು. ಯಾವ ಪಿತೂರಿ ಎಂಬ ಕುರಿತು ಯಾವುದೇ ಮಾತಿಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿದೆಯಾ? ಮುಡಾದ ಒಟ್ಟು 150 ನಿವೇಶನಗಳಲ್ಲಿ 14 ನಿವೇಶನಗಳು ಪಾರ್ವತಿ ಸಿದ್ದರಾಮಯ್ಯ ಅವರಿಗೆ ಹಂಚಿಕೆ ಆಗಿವೆ. ಉಳಿಕೆ ನಿವೇಶನಗಳು ಯಾರಿಗೆ ಹಂಚಿಕೆ ಆಗಿವೆ? ಅವುಗಳ ಬಗ್ಗೆ ಮಾಹಿತಿ ಇದೆಯಾ? ಎಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ ಎದುರುದಾರರ ಬಳಿ ಉತ್ತರವಿಲ್ಲ. ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ತೀರ್ಪಿನಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ಗೆ ಅನುಮತಿಯು “Impugned sanction” ಎಂದು ನಮೂದಿಸಲಾಗಿದೆ. ಅಷ್ಟರ ಮಟ್ಟಿಗೆ ರಾಜ್ಯಪಾಲರಿಗೆ ಮುಖಭಂಗವಾಗಿದೆ. ರಾಜ್ಯಪಾಲರು ಮಾಡಿರುವ ಎಡವಟ್ಟಿನಿಂದಾಗಿ ನ್ಯಾಯಾಲಯದ ಸಮಯ, ಹಣ ಎಲ್ಲವೂ ವ್ಯಯವಾಗುತ್ತಿದೆ. ಸದರಿ ರಾಜ್ಯಪಾಲರ ನಿರಂತರವಾಗಿ ಕರ್ನಾಟಕದ ವಿರೋಧಿಯಾಗಿ ವರ್ತಿಸುತ್ತಾ ಬರುತ್ತಿದ್ದಾರೆ. ರಾಜ್ಯ ಸರ್ಕಾರದ 11 ಮಸೂದೆಗಳನ್ನು ಅನುಮೋದನೆ ನೀಡದೆ ಇತ್ತಿಚೆಗೆ ವಾಪಸು ಕಳಿಸಿದ್ದಾರೆ. ಜನತೆ ಆಯ್ಕೆ ಮಾಡಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಇವರು ಷಡ್ಯಂತರ ಮಾಡುತ್ತಿರುವಂತಿದೆ ಎಂದಿದ್ದಾರೆ.

ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೆ ವಾಪಸ್ಸು ಕರೆಸಿಕೊಳ್ಳಬೇಕು. ಶ್ರೀ ಸಿದ್ದರಾಮಯ್ಯರವರ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು. ಪ್ರಜಾಪ್ರಭುತ್ವ, ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆಯನ್ನು ಕಾಪಾಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಪಿತೂರಿಯ ಭಾಗವಾಗಿರುವ ರಾಜ್ಯಪಾಲರು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹೀಗಾಗಿ ರಾಜ್ಯಪಾಲ ತೊಲಗಿಸಿ, ಕರ್ನಾಟಕ ಸಂರಕ್ಷಿಸಿ” ಆಂದೋಲನಕ್ಕೆ ಕರೆ ನೀಡುತ್ತಿದ್ದೇವೆ. ಕಪ್ಪುಬಟ್ಟೆ ಪ್ರದರ್ಶನ ಚಳುವಳಿ, ಫೇರಾವ್ ಆಂದೋಲನಕ್ಕೆ ಕರೆ ಕೊಡುತ್ತಿದ್ದೇವೆ. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ನಾಡಿನ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಬಂಧುಗಳು, ವಿದ್ಯಾರ್ಥಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

ಈ ಅಭಿಯಾನದಲ್ಲಿ ಕೆ.ಎಂ ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಆದರ್ಶ ಯಲ್ಲಪ್ಪ, ಅನಂತನಾಯ್ಕ.ಎನ್, ನಾಥ್ ಪೂಜಾರಿ, ಮಹಮದ್ ಹೀ‌ ಲಟ್ಟಗೇರೆ, ಅನಿಲ್ ರೆಡ್ಡಿ, ಸತೀಶ್‌ ಜಿ.ಕೆ, ಡಾ. ಶಿವರಾಮ್ ಸಿಂಧಗಿ, ಮೆಡಲ್ ಮುನಿ ಚಂದ್ರು ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಲಿದ್ದಾರೆ.

ಭ್ರಷ್ಟಾಚಾರ ಪ್ರಕರಣ: ಆರ್.ಜಿ.ಕಾರ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ 8 ದಿನ ಸಿಬಿಐ ಕಸ್ಟಡಿಗೆ

ಮುಡಾ ಹಗರಣ: ಸಿಎಂ ಪತ್ನಿಗೆ 50:50 ಸೈಟ್ ಹಂಚಿಕೆ ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡ ‘ರಾಜ್ಯ ಸರ್ಕಾರ’

BREAKING: ‘ಶಿವಮೊಗ್ಗ ಜಿಲ್ಲೆ’ಯಾಧ್ಯಂತ ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ‘DJ ಬಳಕೆ’ಗೆ ನಿಷೇಧ ಹೇರಿ ‘DC ಆದೇಶ’

BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ‘CET’ ಪರೀಕ್ಷೆ ಬರೆಯಲು ತೆರಳುವಾಗ ಅಪಘಾತ : ಸಿಮೆಂಟ್ ಲಾರಿ ಹರಿದು ಗರ್ಭಿಣಿ ಸಾವು!

08/02/2026 5:31 PM1 Min Read

ಚಿಕ್ಕಮಗಳೂರಲ್ಲಿ ಭೀಕರ ಅಪಘಾತ : ಸ್ಕೂಟಿಗೆ ಆಟೋ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಸಾವು!

08/02/2026 5:13 PM1 Min Read

BREAKING : ಬೆಂಗಳೂರಿನಲ್ಲಿ ಘೋರ ಘಟನೆ : ಮೀನು ಹಿಡಿಯಲು ಹೋಗಿ ಬಾಲಕ ಸೇರಿ ಇಬ್ಬರು ನೀರುಪಾಲು!

08/02/2026 5:01 PM1 Min Read
Recent News

ಬೆಂಗಳೂರಲ್ಲಿ ‘CET’ ಪರೀಕ್ಷೆ ಬರೆಯಲು ತೆರಳುವಾಗ ಅಪಘಾತ : ಸಿಮೆಂಟ್ ಲಾರಿ ಹರಿದು ಗರ್ಭಿಣಿ ಸಾವು!

08/02/2026 5:31 PM

ಚಿಕ್ಕಮಗಳೂರಲ್ಲಿ ಭೀಕರ ಅಪಘಾತ : ಸ್ಕೂಟಿಗೆ ಆಟೋ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಸಾವು!

08/02/2026 5:13 PM

BREAKING : ಬೆಂಗಳೂರಿನಲ್ಲಿ ಘೋರ ಘಟನೆ : ಮೀನು ಹಿಡಿಯಲು ಹೋಗಿ ಬಾಲಕ ಸೇರಿ ಇಬ್ಬರು ನೀರುಪಾಲು!

08/02/2026 5:01 PM

BIG NEWS : ಮುಂದುವರಿದ ಯತೀಂದ್ರ ಹಸ್ತಕ್ಷೇಪ : ಗೃಹ ಸಚಿವ ಪರಮೇಶ್ವರ್ ಮುಂದೇನೆ ತನ್ವೀರ್ ಸೇಠ್ ಅಸಮಾಧಾನ!

08/02/2026 4:32 PM
State News
KARNATAKA

ಬೆಂಗಳೂರಲ್ಲಿ ‘CET’ ಪರೀಕ್ಷೆ ಬರೆಯಲು ತೆರಳುವಾಗ ಅಪಘಾತ : ಸಿಮೆಂಟ್ ಲಾರಿ ಹರಿದು ಗರ್ಭಿಣಿ ಸಾವು!

By kannadanewsnow0508/02/2026 5:31 PM KARNATAKA 1 Min Read

ಬೆಂಗಳೂರು : ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಿಂದ ಸ್ಕೂಟಿಯಲ್ಲಿ ತೆರಳುತ್ತಿದ್ದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಬಾಗಲೂರಿನ ಗುಂಡಪ್ಪ ಕ್ರಾಸ್ ಬಳಿ…

ಚಿಕ್ಕಮಗಳೂರಲ್ಲಿ ಭೀಕರ ಅಪಘಾತ : ಸ್ಕೂಟಿಗೆ ಆಟೋ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಸಾವು!

08/02/2026 5:13 PM

BREAKING : ಬೆಂಗಳೂರಿನಲ್ಲಿ ಘೋರ ಘಟನೆ : ಮೀನು ಹಿಡಿಯಲು ಹೋಗಿ ಬಾಲಕ ಸೇರಿ ಇಬ್ಬರು ನೀರುಪಾಲು!

08/02/2026 5:01 PM

BIG NEWS : ಮುಂದುವರಿದ ಯತೀಂದ್ರ ಹಸ್ತಕ್ಷೇಪ : ಗೃಹ ಸಚಿವ ಪರಮೇಶ್ವರ್ ಮುಂದೇನೆ ತನ್ವೀರ್ ಸೇಠ್ ಅಸಮಾಧಾನ!

08/02/2026 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.