ಮೈಸೂರು: ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವಂತ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ನಾಮಪತ್ರ ಹಿಂಪಡೆಯೋ ಮಾತೇ ಇಲ್ಲ ಎಂಬುದಾಗಿ ಬಂಡಾಯದ ಭಾವುಟ ಹಾರಿಸಿದ್ದಾರೆ.
ಇಂದು ನೈರುತ್ಯ ಪದವೀಧರರ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಶಾಸಕ ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು.
ನೈರುತ್ಯ ಪದವೀಧರರ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲಾಯಿತು. pic.twitter.com/m8ugSuCKJ8
— K Raghupathi Bhat (Modi Ka Parivar) (@RaghupathiBhat) May 16, 2024
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಜೆಪಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಸಿದ ಮೇಲೆ ಹಿಂತೆಗೆಯೋ ಮಾತೇ ಇಲ್ಲ ಎಂದರು.
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ರೆ ನನ್ನ ಆಕ್ಷೇಪ ಇರಲಿಲ್ಲ. ನಾನು ನಾಮಪತ್ರ ಕೂಟ ಸಲ್ಲಿಸುತ್ತಿರಲಿಲ್ಲ. ಆದ್ರೇ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದರು.
ಈ ಮೊದಲು ನನಗೆ ಟಿಕೆಟ್ ಕೈ ತಪ್ಪಿದಾಗ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿತ್ತು. ಆದರೇ ನಾನು ಅದಕ್ಕೆ ಒಪ್ಪಿ ಹೋಗಿರಲಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿಯಲ್ಲೇ ಉಳಿದಿದ್ದೇನೆ ಎಂದರು.
ನಮ್ಮ ಪಕ್ಷದ ಯಾವ ನಾಯಕರ ವಿರುದ್ಧವೂ ನಾನು ಆರೋಪ ಮಾಡುತ್ತಿಲ್ಲ. ನಾಮಪತ್ರ ವಾಪಾಸ್ ತೆಗೆದುಕೊಳ್ಳದಿದ್ದರೇ ಉಚ್ಚಾಟನೆ ಮಾಡುತ್ತಾರೆ. ಇದನ್ನು ಯೋಚನೆ ಮಾಡಿಯೇ ನಾನು ನಾಮಪತ್ರ ಸಲ್ಲಿಸಿದ್ದೇನೆ. ಈಗಲೂ ನನಗೆ ಟಿಕೆಟ್ ಯಡಿಯೂರಪ್ಪ ತಪ್ಪಿಸಿದ್ದಾರೆ ಎಂದು ಹೇಳುವುದಿಲ್ಲ ಎಂದರು.
ಬೆಂಗಳೂರಲ್ಲಿ ‘ಡೆಂಗ್ಯೂ ನಿಯಂತ್ರಣ’ಕ್ಕೆ ಮುನ್ನೆಚ್ಚರಿಕೆ ವಹಿಸಲಾಗಿದೆ: ‘ಬಿಬಿಎಂಪಿ ವಿಶೇಷ ಆಯುಕ್ತ’ರ ಮಾಹಿತಿ
‘ಆಧಾರ್ ಕಾರ್ಡ್’ ನವೀಕರಿಸಲು ಈ ದಿನವೇ ಲಾಸ್ಟ್ ಡೇಟ್ : ಈ ಸರಳ ರೀತಿಯಲ್ಲಿ ‘ಅಪ್ ಡೇಟ್’ ಮಾಡಿಸಿಕೊಳ್ಳಿ