ಬೆಂಗಳೂರು: ಜರ್ಮನಿಯ ಫೆಡರಲ್ ಚಾನ್ಸಲರ್ ರಾಜ್ಯ ಭೇಟಿಯು ಖಾಸಗಿ ಕಾರ್ಯಕ್ರಮವಾಗಿದೆ. ಇದರಲ್ಲೂ ಬಿಜೆಪಿಯ ರಾಜಕೀಯ ನಾಚಿಕೆಗೇಡಿತನ ಎಂಬುದಾಗಿ ಸಚಿವ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜರ್ಮನಿಯ ಫೆಡರಲ್ ಚಾನ್ಸಲರ್ ಗೌರವಾನ್ವಿತ ಶ್ರೀ ಫ್ರಿಡ್ರಿಕ್ ಮೆರ್ಝ್ ಅವರ ರಾಜ್ಯ ಭೇಟಿ ಸಂಪೂರ್ಣವಾಗಿ ಖಾಸಗಿ ಹಾಗೂ ಪೂರ್ವನಿಗದಿಯಾಗಿತ್ತು. ಜರ್ಮನಿ ಮೂಲದ ಬಾಷ್ (Bosch) ಕಂಪೆನಿ ಮತ್ತು ಐಐಎಸ್‌ಸಿ (IISc)ಗೆ ಭೇಟಿ ನೀಡುವುದಷ್ಟೇ ಅವರ ಉದ್ದೇಶವಾಗಿತ್ತು. ರಾಜ್ಯ ಸರ್ಕಾರದೊಂದಿಗೆ ಯಾವುದೇ ಅಧಿಕೃತ ಸಭೆ, ಮಾತುಕತೆಗಳೇ ಇರಲಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಅಧಿಕೃತ ಕಾರ್ಯಕ್ರಮಗಳೇ ಇಲ್ಲದಿದ್ದಾಗ ಮುಖ್ಯಮಂತ್ರಿ ಅವರ ಹಾಜರಾತಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂತಹ ಕಾರ್ಯಕ್ರಮಗಳು ಇದ್ದಿದ್ದರೆ, ಮಾನ್ಯ ಮುಖ್ಯಮಂತ್ರಿಗಳೇ ಸ್ವತಃ ಅವರನ್ನು ಸ್ವಾಗತಿಸುತ್ತಿದ್ದರು ಎಂಬ ಸತ್ಯವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆಯಂತೆ, ಸರ್ಕಾರದ ಪರವಾಗಿ ಶಿಷ್ಟಾಚಾರದಂತೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಸ್ವಾಗತ-ಬೀಳ್ಕೊಡುಗೆ ನೆರವೇರಿಸಲಾಯಿತು ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಅತಿಥಿಯೊಬ್ಬರು ಖಾಸಗಿ ಭೇಟಿಯನ್ನೂ ರಾಜಕೀಯ ಲಾಭಕ್ಕಾಗಿ ಬಳಸಲು ಯತ್ನಿಸುವ ಬಿಜೆಪಿಯ ನಡೆ ಖಂಡನೀಯ. ರಾಜ್ಯದ ಗೌರವದ ವಿಚಾರದಲ್ಲಿ ರಾಜಕೀಯ ಮಾಡುವುದು ನಾಚಿಕೆಗೇಡಿತನ. ಕರ್ನಾಟಕ ಇದನ್ನು ಒಪ್ಪುವುದಿಲ್ಲ ಎಂದಿದ್ದಾರೆ.
BIG NEWS: ‘ನಗರಸಭೆ ಪೌರಾಯುಕ್ತೆ’ಗೆ ಅಶ್ಲೀಲವಾಗಿ ನಿಂದಿಸಿದ ‘ಕಾಂಗ್ರೆಸ್ ಮುಖಂಡ’: ಆಡಿಯೋ ವೈರಲ್ | Watch Video








