ಬೆಂಗಳೂರು: ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶನ ಮೆರವಣಿಗೆ ಕಾರ್ಯಕ್ರಮದ ಡಿ.ಜೆ.ಗೆ ಸರ್ಕಾರ ಅನುಮತಿ ನೀಡಬೇಕೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮನವಿ ಮಾಡಿದ್ದಾರೆ. ಡಿಜೆ ವ್ಯವಸ್ಥೆ ಮಾಡಿರುವ ವಾಹನಕ್ಕೆ ನೀರು ಸುರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಚಿತ್ರದುರ್ಗದಲ್ಲಿ ಗಣೇಶನ ಮೆರವಣಿಗೆ ಡಿ.ಜೆ.ಯೊಂದಿಗೆ ಹೋಗಲು ಯೋಜನೆ ಮಾಡಿದ್ದೇವೆ. ಆದರೆ, ಹಿಂದೂ ಕಾರ್ಯಕರ್ತರಿಗೆ ಅನುಮತಿ ನೀಡುವುದಿಲ್ಲ ಎಂದು ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ ಎಂದು ಆಕ್ಷೇಪಿಸಿದರು. ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಮದ್ದೂರಿನಲ್ಲಿ ಡಿ.ಜೆ.ಗೆ ಅನುಮತಿ ನೀಡಿದ ಹಾಗೆ ಚಿತ್ರದುರ್ಗ ಜಿಲ್ಲೆಯಲ್ಲೂ ಡಿ.ಜೆ.ಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗದಲ್ಲಿ ಸೆ.13 ರಂದು ಗಣಪತಿ ವಿಸರ್ಜನೆ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ಸರ್ಕಾರ ಡಿ.ಜೆ. ಬಳಸಲು ಅನುಮತಿ ನೀಡುತ್ತಿಲ್ಲ. ಚಿತ್ರದುರ್ಗದ ಬಿಜೆಪಿ ಕಾರ್ಯಕರ್ತರು ಡಿ.ಜೆ. ವ್ಯವಸ್ಥೆ ಮಾಡಿರುವ ವಾಹನಕ್ಕೆ ಪೊಲೀಸ್ ಅಧಿಕಾರಿಗಳು ನೀರನ್ನು ಸುರಿದಿದ್ದಾರೆ ಎಂದು ಆಕ್ಷೇಪಿಸಿದರು. ಡಿಜೆ ವಾಹನಕ್ಕೆ ಪೊಲೀಸ್ ಅಧಿಕಾರಿಗಳು ಏಕೆ ನೀರನ್ನು ಹಾಕಿದ್ದಾರೆ ಎಂದು ಪ್ರಶ್ನಿಸಿದರು. ಡಿಜೆ ವಾಹನಕ್ಕೆ ನೀರನ್ನು ಹಾಕಿದವರ ಮೇಲೆ ಕ್ರಮ ಕೈಗೊಳ್ಳಲು ಅವರು ಆಗ್ರಹಿಸಿದರು.
ಚಿತ್ರದುರ್ಗದಲ್ಲಿ ಗಣೇಶನ ವಿಸರ್ಜನೆಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಸರ್ಕಾರ ಡಿ.ಜೆ.ಗೆ ಅನುಮತಿ ನೀಡದೇ ಇರುವುದನ್ನು ಬಿಜೆಪಿ ಸಹಿಸುವುದಿಲ್ಲ. ಬಿಜೆಪಿ ಕಾರ್ಯಕರ್ತರು ಮತ್ತು ಭಕ್ತಾದಿಗಳು ಭಾಗವಹಿಸುವ ಕಾರಣ ಹಿಂದೂ ಕಾರ್ಯಕ್ರಮದ ಡಿ.ಜೆ.ಗೆ ಸರ್ಕಾರ ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಧರ್ಮಸ್ಥಳ ಕೇಸ್: ಸೆ.16ಕ್ಕೆ ಬುರುಡೆ ಚಿನ್ನಯ್ಯ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
Good News: ಇನ್ಮುಂದೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 19 ನಿಮಿಷಕ್ಕೊಂದು ರೈಲು ಸಂಚಾರ | Namma Metro