ಶಿವಮೊಗ್ಗ : ಒಂದು ಕಡೆ ಪರಿಸರ ನಾಶವಾಗುತ್ತದೆ ಪಂಪ್ಡ್ ಸ್ಟೋರೇಜ್ ಬೇಡ ಎನ್ನುವ ಬಿಜೆಪಿಯವರು, ಅರಣ್ಯ ಉಳಿಸಲು ಪ್ರಯತ್ನಿಸುವ ಅರಣ್ಯ ಇಲಾಖೆ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಇಂತಹ ಇಬ್ಬಗೆ ನೀತಿ ಸರಿಯಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗದ ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಮಾಡಲೇ ಬೇಕಾದರೆ ಹಲವು ಮಾರ್ಗಗಳಿವೆ. ಪರಿಸರ ಅರಣ್ಯವನ್ನು ಮುಂದಿಟ್ಟುಕೊoಡು ರಾಜಕೀಯ ಮಾಡುವುದು ಕೆಲವರ ಚಾಳಿಯಾಗಿದೆ. ಬೇಸೂರು ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಅರಣ್ಯ ಇಲಾಖೆ ಟ್ರಂಚ್ ಹೊಡೆಯಲು ಹೋದಾಗ ಬಿಜೆಪಿಯ ಕೆಲವು ಮುಖಂಡರು ತಡೆದಿದ್ದಾರೆ. ಅರಣ್ಯ ಇಲಾಖೆ ತನ್ನ ಜಾಗವನ್ನು ಬಂದೋಬಸ್ತು ಮಾಡಿಕೊಳ್ಳಲು ಅಡ್ಡಿಪಡಿಸುವುದು ಸರಿಯಲ್ಲ. ಹೊಸದಾಗಿ ಒತ್ತುವರಿಗೆ ಅವಕಾಶ ಇಲ್ಲ. ಹಿಂದಿನಿoದಲೂ ಸಾಗುವಳಿ ಮಾಡಿಕೊಂಡ ಬಂದವರಿಗೆ ಅರಣ್ಯ ಇಲಾಖೆ ಯಾವುದೇ ತೊಂದರೆ ಕೊಡುವುದಿಲ್ಲ. ಯಡಮನೆ, ನಾಡಕಲಸಿ, ಬೇಸೂರು ಇನ್ನಿತರೆ ಕಡೆಗಳಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದ್ದು ನನ್ನ ಗಮನಕ್ಕೆ ಬಂದ ತಕ್ಷಣ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಲಾಗಾಯ್ತಿನಿಂದ ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ತೊಂದರೆ ಕೊಟ್ಟರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ ಎಂದು ಹೇಳಿದರು.
ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿದೆ. ಅರಣ್ಯ ಉಳಿಸಿ ಕೊಳ್ಳಲು ಸಂಘಟಿತ ಪ್ರಯತ್ನವೂ ಅಗತ್ಯವಾಗಿದೆ. ಪದೇಪದೇ ಅರಣ್ಯ ಒತ್ತುವರಿ ಮಾಡಿದರೆ ಇಲಾಖೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಅರಣ್ಯ ರಕ್ಷಣೆ ದೃಷ್ಟಿಯಿಂದ ಟ್ರಂಚ್ ಹೊಡೆಯಲು ಬರುವ ಇಲಾಖೆಗೆ ಯಾರೂ ತೊಂದರೆ ಕೊಡಬಾರದು. ರೆವಿನ್ಯೂ ಜಾಗವಾದರೆ ತೆರವು ಮಾಡುವುದಿಲ್ಲ. ಅರಣ್ಯ ಒತ್ತುವರಿ ಮಾಡಿದರೆ ಬಿಡುವುದಿಲ್ಲ. ಸರ್ಕಾರ ಅರಣ್ಯ ರಕ್ಷಣೆಗೆ ಕೆಲವು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜನ್ಮದಿನಕ್ಕೆ ಶುಭಾಶಯ ಕೋರುವ ಹಿನ್ನೆಲೆಯಲ್ಲಿ ಶಾಸಕರು ಒಂದೆ ಕಡೆ ಸೇರಿದರೆ ತಪ್ಪೇನು. ನನ್ನ ಜನ್ಮದಿನಕ್ಕೆ ಶುಭಾಶಯ ಕೋರಲು ಅನೇಕ ಪ್ರಮುಖರು ಬಂದಿದ್ದರು. ಹುಟ್ಟುಹಬ್ಬಕ್ಕೆ ಶುಭ ಕೋರಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಡಾ. ಪರಮೇಶ್ವರ್, ಜಾರಕಿಹೊಳಿ ಕಡೆಯವರು ಬರುತ್ತಾರೆ. ಅದನ್ನು ರಾಜಕೀಯವಾಗಿ ಬಿಂಬಿಸುವುದು ಸರಿಯಲ್ಲ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
BREAKING: 15 ಭಾರತೀಯ ಸಿಬ್ಬಂದಿಗಳಿದ್ದ ಯುಎಸ್ ನಿರ್ಬಂಧಿತ ತೈಲ ಟ್ಯಾಂಕರ್ ಮೇಲೆ ಓಮನ್ ಕರಾವಳಿಯಲ್ಲಿ ದಾಳಿ
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ
ಖಮೇನಿ ನಿಧನದ ನಂತ್ರ ಇರಾನ್ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅರಾಫಿ ನೇಮಕ | Ayatollah Arafi








