Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

28/03/2026 10:10 PM
liver

ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!

28/03/2026 10:01 PM

‘ಮುಖೇಶ್ ಅಂಬಾನಿ’ ಮನೆಯಲ್ಲಿ ಒಂದೇ ಒಂದು ‘AC’ ಕೂಡ ಇಲ್ಲ ; ಯಾಕೆ ಗೊತ್ತಾ?

28/03/2026 9:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಧಿಕಾರದ ದರ್ಪ- ಅಮಲನ್ನು ಇಳಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ: ಬಿವೈ ವಿಜಯೇಂದ್ರ
KARNATAKA

ಅಧಿಕಾರದ ದರ್ಪ- ಅಮಲನ್ನು ಇಳಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ: ಬಿವೈ ವಿಜಯೇಂದ್ರ

By kannadanewsnow0903/04/2025 8:09 PM

ಬೆಂಗಳೂರು: ಈ ಸರಕಾರಕ್ಕೆ ಬಡವರೂ ಬೇಡ; ರೈತರೂ ಬೇಡ. ರಾಜ್ಯದಲ್ಲಿ ಯಾವ ಸಮಾಜಕ್ಕೂ ನ್ಯಾಯ ಕೊಡುವ ಕಾಳಜಿ ಇಲ್ಲದ ಸರಕಾರ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಬಿಜೆಪಿಯ ಅಹೋರಾತ್ರಿ ಧರಣಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರವು ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ ಎಂದು ಅವರು ಆಕ್ಷೇಪಿಸಿದರು. ಜನಪರ ಕಾಳಜಿ ಇದ್ದಲ್ಲಿ ಈ ರೀತಿ ಬೆಲೆ ಏರಿಕೆ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯನವರೇ ನಿಮ್ಮ ಸರಕಾರ ಅಧಿಕಾರದ ಅಮಲಿನಲ್ಲಿದೆ. ಈ ಅಧಿಕಾರದ ದರ್ಪ- ಅಮಲನ್ನು ಇಳಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂದು ಎಚ್ಚರಿಸಿದರು. ನಿಮ್ಮ ಅಧಿಕಾರದ ಸೊಕ್ಕನ್ನು ಇಳಿಸುವ ಶಕ್ತಿ ಬಿಜೆಪಿಗೆ ಇದೆ. ನಿಮ್ಮ ದರ್ಪ ಇಳಿಸುವ ಶಕ್ತಿ ಈ ನಾಡಿನ ಮತದಾರರಿಗೆ ಇದೆ ಎಂದು ತಿಳಿಸಿದರು.

ಇಟ್ಟ ಗುರಿ, ಮುಂದಿಟ್ಟ ಹೆಜ್ಜೆ ಹಿಂದೆ ಸರಿಸುವ ಪ್ರಶ್ನೆಯೇ ಇಲ್ಲ; ನಿನ್ನೆಯಿಂದ ಪ್ರಾರಂಭವಾದ ಅಹೋರಾತ್ರಿ ಧರಣಿ ಇವತ್ತಿಗೆ ಮುಕ್ತಾಯವಾಗುತ್ತಿಲ್ಲ. ಏ. 5ರಂದು ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಹೋರಾಟ ನಡೆಯಲಿದೆ. ಏ.7ರಿಂದ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಈ ಭ್ರಷ್ಟ, ದುಷ್ಟ ಬಡವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆಯನ್ನು ಮೈಸೂರಿನಿಂದ ಆರಂಭಿಸುತ್ತೇವೆ ಎಂದು ತಿಳಿಸಿದರು.

ಪಪ್ರತಿ ಜಿಲ್ಲೆಗೂ ಬರಲಿದ್ದೇವೆ. ನಾಡಿನ ಜನತೆ, ಬಡವರ, ರೈತರ ಧ್ವನಿ ಆಗುವ ಹಾಗೂ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಸಹಕರಿಸಲು ವಿನಂತಿಸಿದರು.

ಸಿದ್ದರಾಮಯ್ಯರಿಗೆ ನಟ್ಟು, ಬೋಲ್ಟ್ ಟೈಟ್ ಮಾಡಿದ್ದೀರಾ..

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಪಕ್ಷದಲ್ಲಿರುವ ಸಿದ್ದರಾಮಯ್ಯರಿಗೆ ನಟ್ಟು, ಬೋಲ್ಟ್ ಟೈಟ್ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಯಾವಾಗ ಮಾಡುತ್ತೀರಿ ಎಂದು ವ್ಯಂಗ್ಯವಾಗಿ ಕೇಳಿದರು.

ನೀವು ನಟ್ಟು, ಬೋಲ್ಟ್ ಬಿಚ್ತೀರಾ? ಟೈಟ್ ಮಾಡುತ್ತೀರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮುಖ್ಯಮಂತ್ರಿಗಳೇ, ನಿಮ್ಮದು ಟೈಟ್ ಆಗ್ತ ಇಲ್ಲ; ಲೂಸ್ ಆಗ್ತ ಇದೆ ಎಂದು ತಿಳಿಸಿದರು.

ನೀವು ಗ್ಯಾರಂಟಿಗಳನ್ನೂ ಸರಿಯಾಗಿ ತಲುಪಿಸಿಲ್ಲ; ಬೆಲೆ ಏರಿಕೆ ಮಾಡಿದ್ದು ದುಡ್ಡು ಹೊಡೆಯಲಿಕ್ಕೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು. ಸತ್ಯ ಒಪ್ಪಿಕೊಂಡರೆ ನಿಮ್ಮ ಶಿಕ್ಷೆ ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.

‘ರಾಜ್ಯ ಸರ್ಕಾರಿ ನೌಕರ’ರಿಗೆ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಕುರಿತು ಮಹತ್ವದ ಮಾಹಿತಿ

ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸಿದವರಿಗೆ BMRCL ಶಾಕ್: 6 ತಿಂಗಳಲ್ಲಿ 27,000 ಪ್ರಕರಣ ದಾಖಲು

Share. Facebook Twitter LinkedIn WhatsApp Email

Related Posts

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

28/03/2026 10:10 PM1 Min Read

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು: MLC ಬಲ್ಕಿಶ್ ಬಾನು

28/03/2026 9:46 PM2 Mins Read

ಬೀದರ್ ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳ: ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ

28/03/2026 9:40 PM1 Min Read
Recent News

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

28/03/2026 10:10 PM
liver

ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!

28/03/2026 10:01 PM

‘ಮುಖೇಶ್ ಅಂಬಾನಿ’ ಮನೆಯಲ್ಲಿ ಒಂದೇ ಒಂದು ‘AC’ ಕೂಡ ಇಲ್ಲ ; ಯಾಕೆ ಗೊತ್ತಾ?

28/03/2026 9:47 PM

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು: MLC ಬಲ್ಕಿಶ್ ಬಾನು

28/03/2026 9:46 PM
State News
KARNATAKA

ಹಿರಿಯರ ಆದರ್ಶದ ಹಾದಿಯಲ್ಲಿ ಮಾರಿಕಾಂಬಾ ತಾಯಿ ಸೇವೆ ಮಾಡಿ: ನೂತನ ಸಮಿತಿಗೆ ಹರತಾಳು ಹಾಲಪ್ಪ ಕಿವಿಮಾತು

By kannadanewsnow0928/03/2026 10:10 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರದ ಪ್ರತಿಷ್ಠಿತ ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಇಂದು ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ…

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು: MLC ಬಲ್ಕಿಶ್ ಬಾನು

28/03/2026 9:46 PM

ಬೀದರ್ ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳ: ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ

28/03/2026 9:40 PM

‘ಸಾಗರ ಮಾರಿಕಾಂಬಾ ದೇವಿ ನ್ಯಾಸ’ಕ್ಕೆ ನೂತನ ಸಾರಥ್ಯ: ನಾಗರಾಜ್, ಆನಂದ್ ನೇತೃತ್ವದಲ್ಲಿ ಅಭಿವೃದ್ಧಿಯ ಹೊಸ ಸಂಕಲ್ಪ!

28/03/2026 9:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.