Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಮನ್ ಮುಲ್ ಅಧಿಕಾರಿ ಆತ್ಮಹತ್ಯೆ

19/02/2026 10:05 PM

‘ಬಾಡಿಗೆ ಒಪ್ಪಂದ’ ಕೇವಲ 11 ತಿಂಗಳಿಗೆ ಮಾತ್ರ ಯಾಕೆ ಮಾಡಲಾಗುತ್ತದೆ ಗೊತ್ತಾ.? ನಿಜವಾದ ರಹಸ್ಯವಿದು!

19/02/2026 10:00 PM

ಮಾರುಕಟ್ಟೆ ಕುಸಿಯುವ ಹಂತ ಸನ್ನಿತ! ಅಪಾರ ಸಂಪತ್ತು ಸಂಗ್ರಹಕ್ಕೆ ಇದು ಒಳ್ಳೆಯ ಅವಕಾಶ! ‘ಕಿಯೋಸಾಕಿ’ ಶಾಕಿಂಗ್ ಭವಿಷ್ಯ!

19/02/2026 9:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು: ಸುನೀಲ್ ಕುಮಾರ್ ವಿಶ್ವಾಸ
KARNATAKA

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು: ಸುನೀಲ್ ಕುಮಾರ್ ವಿಶ್ವಾಸ

By kannadanewsnow0911/05/2024 4:27 PM

ಬೆಂಗಳೂರು: ಒಟ್ಟಾರೆ ಜನಾಭಿಪ್ರಾಯ, ಜನರ ಸ್ಪಂದನ, 3 ಸುತ್ತಿನಲ್ಲಿ ಮನೆ ಮನೆ ಪ್ರಚಾರದ ಕಾರ್ಯದ ಆಧಾರದಲ್ಲಿ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ಉತ್ಸಾಹದಲ್ಲಿ ನಾವಿದ್ದೇವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪುವಂಥ ಪ್ರಯತ್ನ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು. 3 ರೀತಿಯ ಸಾರ್ವಜನಿಕ ಸಂಪರ್ಕವನ್ನು ಯಶಸ್ವಿಯಾಗಿ ಮಾಡಿದ್ದೇವೆ. ದೊಡ್ಡ ದೊಡ್ಡ ಸಾರ್ವಜನಿಕ ಸಭೆ, ರೋಡ್ ಷೋ, ಮನೆಯಂಗಳದ ಸಭೆಗಳ ಮೂಲಕ ಸಾರ್ವಜನಿಕರನ್ನು ತಲುಪಿ ನಮ್ಮ ವಿಷಯವನ್ನು ತಿಳಿಸಲಾಗಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಜೀ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೇರಿದಂತೆ 14 ಜನ ರಾಷ್ಟ್ರೀಯ ಪ್ರಮುಖರು ಕರ್ನಾಟಕದಲ್ಲಿ 79 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. 39 ಕಡೆಗಳಲ್ಲಿ ರೋಡ್ ಷೋಗಳು ನಡೆದಿವೆ. ರಾಜ್ಯದ ಮುಖಂಡರಾದ ಯಡಿಯೂರಪ್ಪ, ವಿಜಯೇಂದ್ರ ಮತ್ತು ಅಶೋಕ್ ಅವರು ಸೇರಿದಂತೆ ಸುಮಾರು 30 ಜನ ರಾಜ್ಯದ ಪ್ರಮುಖರು 557 ಸಭೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 139 ಕಡೆಗಳಲ್ಲಿ ರಾಜ್ಯ ನಾಯಕರು ರೋಡ್ ಷೋ ನಡೆಸಿದ್ದಾರೆ ಎಂದು ವಿವರಿಸಿದರು.

ಒಟ್ಟು 650ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು, 180ಕ್ಕೂ ಹೆಚ್ಚು ರೋಡ್ ಷೋಗಳನ್ನು ಮಾಡಿದ್ದು, ಮತದಾರರನ್ನು ಸಂಪರ್ಕಿಸುವ ಯಶಸ್ವಿ ಪ್ರಯತ್ನ ಆಗಿದೆ ಎಂದು ತಿಳಿಸಿದರು. ಸಣ್ಣ ಸಭೆಗಳು, ಕಾಂಗ್ರೆಸ್ ಅಪಪ್ರಚಾರ, ಡೇಂಜರ್ ಕಾಂಗ್ರೆಸ್ ಎಂದು ತಿಳಿಸಲು ‘ಮನೆಯಂಗಳದಲ್ಲಿ ಸಭೆ’ ಎಂಬ ಕರೆ ಕೊಡಲಾಗಿದ್ದು, 50-75 ಜನರನ್ನು ಒಳಗೊಂಡ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣ ಸಣ್ಣ ಸಭೆಗಳು ಎಲ್ಲ ಬೂತ್‍ಗಳಲ್ಲಿ ಮಾಡಿರುವುದು ಈ ಚುನಾವಣೆಯ ವಿಶೇಷ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯ ಸಂಚಾಲಕರು, ಪ್ರಭಾರಿಗಳು, ನಮ್ಮೆಲ್ಲ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಪ್ರಮುಖರ ಜೊತೆಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅವಲೋಕನ ಸಭೆಯು ಇವತ್ತು ಬೆಂಗಳೂರಿನಲ್ಲಿ ನಡೆದಿದೆ. ಕಳೆದ 40 ದಿನಗಳ ಅವಧಿಯಲ್ಲಿ ಚುನಾವಣೆ ನಿಮಿತ್ತ ನಡೆದ ಹತ್ತಾರು ವಿಚಾರಗಳ ಅವಲೋಕನ ಮಾಡಿದ್ದೇವೆ ಎಂದು ವಿವರಿಸಿದರು.

ವಿಧಾನಪರಿಷತ್ ಚುನಾವಣೆ- ಶೀಘ್ರವೇ ಅಭ್ಯರ್ಥಿಗಳ ವಿವರ

ನಾಡಿದ್ದು 3ರಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿ ತಯಾರಿ ಪ್ರಕ್ರಿಯೆಗಳನ್ನು ಇವತ್ತು ಆರಂಭಿಸಲಿದ್ದೇವೆ. ವಿಧಾನಪರಿಷತ್ತಿನ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ಪದವೀಧರರು, ಶಿಕ್ಷಕರ ಕ್ಷೇತ್ರದಲ್ಲಿ ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆ ಮುಗಿದು ಸ್ಥಳೀಯ ಮಟ್ಟದಲ್ಲಿ ಮತದಾರರ ಸಂಪರ್ಕ ಕಾರ್ಯ ನಡೆಯುತ್ತಿದೆ. ನಾಳೆ ಬೆಳಿಗ್ಗೆಯೊಳಗೆ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಪ್ರಕಟಿಸಲಿದೆ ಎಂದು ವಿ.ಸುನೀಲ್ ಕುಮಾರ್ ಅವರು ತಿಳಿಸಿದರು.
ಈ ಚುನಾವಣೆಯನ್ನೂ ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇವತ್ತು ಈ ಸಂಬಂಧ ಸುದೀರ್ಘವಾದ ಸಭೆ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು.

ಜೆಡಿಎಸ್ ಜೊತೆ ಹೊಂದಾಣಿಕೆ ಕೊರತೆ ಆಗಿಲ್ಲ. ಜೆಡಿಎಸ್ ಸ್ಪರ್ಧಿಸಿದ 3 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನಮ್ಮ ಕಾರ್ಯಕರ್ತರು ಚುನಾವಣಾ ಕಾರ್ಯಕ್ಕೆ ಧುಮುಕಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಸಹಕಾರ ನಮಗೆ ಸಹಕಾರ ಕೊಟ್ಟಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಕಾಂಗ್ರೆಸ್ ಸರಕಾರವು ಅವರದೇ ಭಾರದಲ್ಲಿ ಕುಸಿದು ಬೀಳಲಿದೆ.. ಕಾಂಗ್ರೆಸ್ ಸರಕಾರವು ಅವರದೇ ಭಾರದಲ್ಲಿ ಕುಸಿದು ಬೀಳಲಿದೆ ಎಂದು ವಿ.ಸುನೀಲ್ ಕುಮಾರ್ ಅವರು ತಿಳಿಸಿದರು.

ನಾಯಕತ್ವಕ್ಕಾಗಿ 4 ರೀತಿಯ ಪೈಪೋಟಿ ಕಾಂಗ್ರೆಸ್ ಪಕ್ಷದಲ್ಲಿದೆ. ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಮಾಡಿದ ಭಾಷಣ ಇದಕ್ಕೆ ಜ್ವಲಂತ ಉದಾಹರಣೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ತಮ್ಮ ಕುರ್ಚಿ ಮೇಲೆ ಅಪಾಯ ಇದೆ ಎಂದು ಅವರು ತಿಳಿಸಿದ್ದಾರೆ. ಒಕ್ಕಲಿಗರು ಸಿಎಂ ಆಗುವುದಾಗಿ ಡಿ.ಕೆ.ಶಿವಕುಮಾರ್ ಅವರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾರಕಿಹೊಳಿಯವರು ಗುಪ್ತಗಾಮಿನಿ ರೂಪದಲ್ಲಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಪರಮೇಶ್ವರ್ ಅವರು ಕೂಡ ಈ ನಿಟ್ಟಿನಲ್ಲಿ ಬೇರೆ ಬೇರೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಚುನಾವಣೆ ಘೋಷಣೆ ಆದ ದಿನದಿಂದ ಚುನಾವಣೆ ಮುಗಿಯುವ ತನಕ 152 ದೂರುಗಳನ್ನು ಚುನಾವಣಾ ಆಯೋಗಕ್ಕೆ ನಾವು ಕೊಟ್ಟಿದ್ದೇವೆ. ಆಡಳಿತ ಯಂತ್ರದ ಸಂಪೂರ್ಣ ದುರುಪಯೋಗವನ್ನು ಕಾಂಗ್ರೆಸ್ ಸಹಜವಾಗಿ ಕರ್ನಾಟಕದಲ್ಲಿ ಮಾಡಿದೆ. ಎಲ್ಲ ಜಿಲ್ಲೆ- ತಾಲ್ಲೂಕುಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬೆದರಿಸುವ, ಹೆದರಿಸುವ ತಂತ್ರವನ್ನು ಮತ್ತು ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹಾಕುವ ವ್ಯಾಪಕ ದೌರ್ಜನ್ಯದ ಕಾರ್ಯವನ್ನು ಆಡಳಿತ ಪಕ್ಷ ಮಾಡಿದೆ. ಇವುಗಳ ವಿರುದ್ಧ ಸ್ಥಳೀಯವಾಗಿ ದೂರು ಕೊಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್, ಪಕ್ಷದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

BIG NEWS: ನಿಗದಿಗಿಂತ ‘ಹೆಚ್ಚಿನ ಫೀಸ್’ ತಗೊಂಡ್ರೆ ‘ಶಾಲಾ ಮಾನ್ಯತೆ’ ರದ್ದು: ಸಚಿವ ಮಧು ಬಂಗಾರಪ್ಪ ಖಡಕ್ ಎಚ್ಚರಿಕೆ

‘ತಾಯಿಯಾಗುವುದು’ ಸಹಜ ವಿದ್ಯಮಾನ : ಉದ್ಯೋಗಿಗೆ ಹೆರಿಗೆ ಬಾಕಿ ಪಾವತಿಸಲು ಕೋರ್ಟ್ ಆದೇಶ

Share. Facebook Twitter LinkedIn WhatsApp Email

Related Posts

BREAKING: ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಮನ್ ಮುಲ್ ಅಧಿಕಾರಿ ಆತ್ಮಹತ್ಯೆ

19/02/2026 10:05 PM1 Min Read

BREAKING: ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ನಟ ದರ್ಶನ್ ಬಲಗೈಬಂಟ ನಾಗರಾಜ್ ಗೆ ಜಾಮೀನು ಮಂಜೂರು

19/02/2026 9:09 PM1 Min Read

ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

19/02/2026 8:51 PM2 Mins Read
Recent News

BREAKING: ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಮನ್ ಮುಲ್ ಅಧಿಕಾರಿ ಆತ್ಮಹತ್ಯೆ

19/02/2026 10:05 PM

‘ಬಾಡಿಗೆ ಒಪ್ಪಂದ’ ಕೇವಲ 11 ತಿಂಗಳಿಗೆ ಮಾತ್ರ ಯಾಕೆ ಮಾಡಲಾಗುತ್ತದೆ ಗೊತ್ತಾ.? ನಿಜವಾದ ರಹಸ್ಯವಿದು!

19/02/2026 10:00 PM

ಮಾರುಕಟ್ಟೆ ಕುಸಿಯುವ ಹಂತ ಸನ್ನಿತ! ಅಪಾರ ಸಂಪತ್ತು ಸಂಗ್ರಹಕ್ಕೆ ಇದು ಒಳ್ಳೆಯ ಅವಕಾಶ! ‘ಕಿಯೋಸಾಕಿ’ ಶಾಕಿಂಗ್ ಭವಿಷ್ಯ!

19/02/2026 9:33 PM

ತಾಯಿಯಿಂದ ಅವಳಿ ಶಿಶುಗಳು ಬೇರ್ಪಡುವುದು ‘ಅತ್ಯುನ್ನತ ಕ್ರೌರ್ಯ’: ಸುಪ್ರೀಂ ಕೋರ್ಟ್

19/02/2026 9:18 PM
State News
KARNATAKA

BREAKING: ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಮನ್ ಮುಲ್ ಅಧಿಕಾರಿ ಆತ್ಮಹತ್ಯೆ

By kannadanewsnow0919/02/2026 10:05 PM KARNATAKA 1 Min Read

ಮಂಡ್ಯ : ಮದ್ದೂರು ತಾಲೂಕಿನ ಮನ್ ಮುಲ್ ಮೇಗಾ ಡೈರಿಯ ಉಪ ವ್ಯವಸ್ಥಾಪಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ಸಂಜೆ…

BREAKING: ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ನಟ ದರ್ಶನ್ ಬಲಗೈಬಂಟ ನಾಗರಾಜ್ ಗೆ ಜಾಮೀನು ಮಂಜೂರು

19/02/2026 9:09 PM

ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

19/02/2026 8:51 PM

BREAKING: ಆನ್ ಲೈನ್ ಬೆಟ್ಟಿಂಗ್ ಕೇಸಲ್ಲಿ ಇಡಿಯಿಂದ ಬಂಧನದ ಭೀತಿ: ಕೆಸಿ ವೀರೇಂದ್ರ ಪಪ್ಪಿ ಸಹೋದರ, ಸಂಬಂಧಿಗೆ ನಿರೀಕ್ಷಣಾ ಜಾಮೀನು

19/02/2026 8:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.