ಬೆಂಗಳೂರು: ತಮ್ಮ ಮತಬ್ಯಾಂಕಿಗಾಗಿ ಕರ್ನಾಟಕ ಸುರಕ್ಷತೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಕ್ಷೇಪಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ದೇಶ ಸುರಕ್ಷತೆಗೆ ಶ್ರಮಿಸುವ ನರೇಂದ್ರ ಮೋದಿಜೀ ಮತ್ತು ದೇಶವಿರೋಧಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ನಡುವೆ ಒಬ್ಬರನ್ನು ಕರ್ನಾಟಕದ ಮತದಾರರು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಪ್ರಲ್ಹಾದ್ ಜೋಷಿಯವರಿಗೆ ನೀಡಿದ ಪ್ರತಿಮತವು ಮೋದಿಯವರ ಕೈಗಳನ್ನು ಬಲಪಡಿಸಲಿದೆ ಹಾಗೂ ನಕ್ಸಲ್‍ವಾದ, ಆತಂಕವಾದವನ್ನು ಅಂತ್ಯಗೊಳಿಸಲಿದೆ; ಹಾಗೂ ಭಾರತವನ್ನು ವಿಶ್ವದ ಮೂರನೇ ಆರ್ಥಿಕÀ ಶಕ್ತಿಯಾಗಿ ಮಾರ್ಪಡಿಸಲಿದೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಎಲ್ಲ 28 ಕ್ಷೇತ್ರಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸಿ ಎಂದು ವಿನಂತಿಸಿದರು.
ಕಾಶ್ಮೀರವೇ ಇರಲಿ, ಕನ್ಯಾಕುಮಾರಿ, ಬಂಗಾಲ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಕರ್ನಾಟಕ ಸೇರಿ ಎಲ್ಲೆಡೆ ಮೋದಿ ಮೋದಿ ಎಂಬ ಘೋಷಣೆ ಕೇಳಿಸುತ್ತಿದೆ. ದೇಶದ ನಾಲ್ಕೂ ದಿಕ್ಕಿನಲ್ಲಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ದೃಢಸಂಕಲ್ಪ ಕೇಳಿಸುತ್ತಿದೆ. ನಾನು ಇಲ್ಲಿ ಪ್ರಲ್ಹಾದ್ ಜೋಷಿ ಅವರನ್ನು ಗೆಲ್ಲಿಸಲು ಮನವಿ ಮಾಡಲು ಬಂದಿಲ್ಲ. ಜೋಷಿಯವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಬೇಕು. ಮುಂದಿನ ಬಾರಿ ಅವರ ವಿರುದ್ಧ ಯಾರೂ ಸ್ಪರ್ಧಾಕಣಕ್ಕೆ ಇಳಿಯದಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು.
ಕಾಶ್ಮೀರ ನಮ್ಮದಲ್ಲವೇ ಎಂದು ಪ್ರಶ್ನಿಸಿದ ಅವರು, ಖರ್ಗೆಯವರು ನಮಗೆ ಕಾಶ್ಮೀರದ ಜೊತೆಗೇನು ಸಂಬಂಧ ಎನ್ನುತ್ತಾರೆ. ಆದರೆ, ಇಲ್ಲಿನ ಜನತೆ ಕಾಶ್ಮೀರಕ್ಕಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರಿದ್ದಾರೆ ಎಂದು ಹೇಳಿದರು. 370ನೇ ವಿಧಿ ರದ್ದು ಮಾಡಬೇಕಿತ್ತಲ್ಲವೇ ಎಂದು ಕೇಳಿದರು. ಕಾಂಗ್ರೆಸ್ ಪಕ್ಷವು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇóಷ ಸ್ಥಾನಮಾನವನ್ನು ಮೋದಿಜೀ ಅವರು ರದ್ದು ಮಾಡಿದ್ದಾರೆ ಎಂದು ತಿಳಿಸಿದರು.
ರಾಹುಲ್ ಬಾಬಾ ಅವರು ಸಂಸತ್ತಿನಲ್ಲಿ ಆಗ ಮಾತನಾಡಿದ್ದರು. ಅವರು ಸಂಸತ್ತಿನಲ್ಲಿ ಮಾತನಾಡದೇ ಇದ್ದರೆ ಕಾಂಗ್ರೆಸ್ ಪಕ್ಷಕ್ಕೆ ಒಳಿತಾಗುತ್ತದೆ ಎಂದು ನನಗೆ ಅನಿಸಿದ್ದಿದೆ ಎಂದು ತಿಳಿಸಿದರು. 370 ನೇ ವಿಧಿ ರದ್ದು ಮಾಡಿದರೆ ರಕ್ತದ ನದಿ ಹರಿಯುತ್ತದೆ ಎಂದಿದ್ದರು. 5 ವರ್ಷ ಕಳೆದರೂ ಏನೂ ಆಗಿಲ್ಲ ಎಂದು ನುಡಿದರು. ಮೋದಿಜೀ ಅವರು ದೇಶವನ್ನು ಬಾಧಿಸುತ್ತಿದ್ದ ಭಯೋತ್ಪಾದಕತೆಯಿಂದ ಮುಕ್ತಿ ಕೊಟ್ಟಿದ್ದಾರೆ ಎಂದು ತಿಳಿಸಿದರು. ಮನಮೋಹನ್ ಸಿಂಗ್ ಆಡಳಿತದಲ್ಲಿ ನುಸುಳುಕೋರರು ಹೆಚ್ಚಾಗಿದ್ದರು. ಮೋದಿಜೀ ಅವರ ಆಡಳಿತದಲ್ಲಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಆತಂಕವಾದಿಗಳಿಗೆ ಪಾಠ ಕಲಿಸಿದ್ದಾರೆ ಎಂದರು.
ಚುನಾವಣೆ ಗೆಲ್ಲಲು ಕಾಂಗ್ರೆಸ್ ಪಕ್ಷವು ಎಸ್‍ಡಿಪಿಐ ನೆರವು ಪಡೆದಿದೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಫೋಟ ಆಗಿದೆ. ಇದನ್ನು ಸಿಲಿಂಡರ್ ಸ್ಫೋಟ ಎಂದು ಬಿಂಬಿಸಲು ಮುಂದಾದರು. ಎನ್‍ಐಎ ತನಿಖೆ ಆದ ಬಳಿಕ ಇದು ಭಾರತ ವಿರೋಧಿಗಳ ದುಷ್ಕøತ್ಯ ಎಂದು ಗೊತ್ತಾಗಿದೆ ಎಂದು ವಿವರಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ನಡುವೆ ಆಂತರಿಕ ಸಮರ ನಡೆದಿದೆ ಎಂದ ಅವರು, ಜೆಡಿಎಸ್‍ನ ಮುಖಂಡ ರೇವಣ್ಣ ಅವರ ಪುತ್ರನ ಸಿ.ಡಿ. ವಿಚಾರವನ್ನೂ ಪ್ರಸ್ತಾಪಿಸಿದರು. ಮಹಿಳಾ ಅತ್ಯಾಚಾರಿಗಳ ಜೊತೆ ಬಿಜೆಪಿ ನಿಲ್ಲುವುದಿಲ್ಲ ಎಂದು ಅವರು ಪ್ರಕಟಿಸಿದರು. ಕಾಂಗ್ರೆಸ್ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು. ಅವರಿಗೆ ಪರಾರಿಯಾಗಲು ಅವಕಾಶ ಕೊಡಬಾರದಿತ್ತು ಎಂದು ತಿಳಿಸಿದರು. ಇಂಥವರಿಗೆ ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತಿಳಿಸಿದರು.
ನೇಹಾ ಹಿರೇಮಠ ಅವರ ಹತ್ಯೆಗೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು. ಕರ್ನಾಟಕದ ಬಾಲಕಿಯರಿಗೆ ಸುರಕ್ಷತೆ ನೀಡಲು ಇವರಿಂದ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಲಾಗುತ್ತದೆ. ಇದು ವಿಡಿಯೋದಲ್ಲಿ ತಮಗೆ ಕೇಳಿಸಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಟೀಕಿಸಿದರು. ಕೇಳಿಸದೆ ಇದ್ದರೆ ಕಿವಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸವಾಲು ಹಾಕಿದರು.
ಒಂದೆಡೆ ಬಿಸಿಲು ಹೆಚ್ಚಾದಂತೆ ವಿದೇಶಕ್ಕೆ ತೆರಳಿ ರಜಾಕಾಲ ಅನುಭವಿಸುವ ಸೋದರ- ಸೋದರಿ ಇದ್ದಾರೆ. ಅವರನ್ನು ನಿಮಗೆ ಗೊತ್ತಿದೆಯಲ್ಲವೇ ಎಂದು ಪ್ರಶ್ನಿಸಿದರು. ಇನ್ನೊಂದೆಡೆ ದೀಪಾವಳಿಗೂ ರಜೆ ಪಡೆಯದೆ, ಸೈನಿಕರ ಜೊತೆ ದೀಪಾವಳಿ ಆಚರಿಸುವ ಮೋದಿಯವರು ಇದ್ದಾರೆ. ಪಿಎಫ್‍ಐ ಮೇಲೆ ನಿರ್ಬಂಧ ಹೇರಿದ ಮೋದಿಯವರ ಪಕ್ಷ ಒಂದೆಡೆ ಇದ್ದರೆ, ಎಸ್‍ಡಿಪಿಐಯ ಸಮರ್ಥನೆ ಪಡೆದ ಕಾಂಗ್ರೆಸ್ ಪಕ್ಷ ಇನ್ನೊಂದೆಡೆ ಇದೆ ಎಂದು ವಿವರಿಸಿದರು.
ರಾಮಮಂದಿರ ನಿರ್ಮಾಣ ಆಗಬೇಕಿತ್ತೇ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷವು ಮಂದಿರದ ವಿಚಾರವನ್ನು ವಿಳಂಬ ಮಾಡುತ್ತಲೇ ಬಂತು. ಮೋದಿಯವರು ಕೇಸು ಗೆದ್ದು, ಭೂಮಿಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಿದರು. ರಾಹುಲ್ ಬಾಬಾ, ಸೋನಿಯಾ ಗಾಂಧಿ, ಖರ್ಗೆಯವರಿಗೆ ಆಮಂತ್ರಣಪತ್ರ ಇದ್ದರೂ ಅವರು ಗೈರುಹಾಜರಾದರು. ಮತಬ್ಯಾಂಕ್‍ಗಾಗಿ ಈ ನಿರ್ಧಾರ ಮಾಡಿದ್ದಾರೆ. ಇವರಿಗೆ ಮತ ಕೊಡಲು ಸಾಧ್ಯವೇ ಎಂದು ಕೇಳಿದರು.
ಜಾತಿವಾದ, ಕುಟುಂಬವಾದ, ಭ್ರಷ್ಟಾಚಾರ, ತುಷ್ಟೀಕರಣದ ರಾಜಕೀಯ ಕಾಂಗ್ರೆಸ್ಸಿನದು. ಆದರೆ, ಮೋದಿಯವರು ವಿಕಾಸದ ರಾಜನೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದರು. ಬಿಜೆಪಿ ಸರಕಾರವು ಕೋವಿಡ್ ಲಸಿಕೆ, ಶೌಚಾಲಯಗಳ ನಿರ್ಮಾಣ, ಮನೆಗಳ ನಿರ್ಮಾಣ ಮಾಡಿ ನೀಡಿದ್ದನ್ನು ನೆನಪಿಸಿದರು.
2024ರ ಚುನಾವಣೆಯು ಐತಿಹಾಸಿಕ ಚುನಾವಣೆ. ಒಂದೆಡೆ 12 ಲಕ್ಷ ಕೋಟಿಯ ಹಗರಣಗಳ, ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷ ಇದೆ. ಇನ್ನೊಂದೆಡೆ 23 ವರ್ಷ ಸಿಎಂ, ಪ್ರಧಾನಿ ಆಗಿದ್ದರೂ ಒಂದೇ ಒಂದು ಪೈಸೆಯ ಭ್ರಷ್ಟಾಚಾರದ ಆರೋಪ ಇಲ್ಲದ ಪ್ರಾಮಾಣಿಕರಾದ ನರೇಂದ್ರ ಮೋದಿಯವರು ಇದ್ದಾರೆ ಎಂದು ವಿಶ್ಲೇಷಿಸಿದರು.
ಮುಂದಿನ 5 ವರ್ಷಗಳ ಕಾಲ ಇವರಿಬ್ಬರ ನಡುವೆ ಯಾರಿಗೆ ಅಧಿಕಾರ ಎಂಬುದನ್ನು ಆಯ್ಕೆ ನಡೆಸಬೇಕಿದೆ ಎಂದು ತಿಳಿಸಿದರು.
ತಾಯಿ ಭುವನೇಶ್ವರಿ, ಸಿದ್ಧಾರೂಢ ಸ್ವಾಮಿ, ಮೂರುಸಾವಿರ ಮಠ, ಮುರುಘಾಮಠ, ಕನಕದಾಸರಿಗೆ ನಮಿಸಿ ಭಾಷಣ ಆರಂಭಿಸಿದರು. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರನ್ನು ಸ್ಮರಿಸಿದರು. ಇದು ಸಂಗೀತದ ಬಹುದೊಡ್ಡ ಕ್ಷೇತ್ರ ಎಂದು ನೆನಪಿಸಿಕೊಂಡರು.
ಕೇಂದ್ರ ಸಚಿವ ಮತ್ತು ಅಭ್ಯರ್ಥಿ ಪ್ರಲ್ಹಾದ್ ಜೋಷಿ, ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಧಾರವಾಡ ಲೋಕಸಭಾ ಪ್ರಭಾರಿ ಕೆ.ಎಸ್.ನವೀನ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಭಾಗ ಪ್ರಭಾರಿ ಲಿಂಗರಾಜ್ ಪಾಟೀಲ್, ಸಂಸದರು, ಶಾಸಕರು, ಪಕ್ಷದ ರಾಜ್ಯ, ಜಿಲ್ಲಾ ಪ್ರಮುಖರು ಭಾಗವಹಿಸಿದ್ದರು.
‘ಸಿಂಬಲ್ ಲೋಡಿಂಗ್ ಯೂನಿಟ್’ ಸಂಗ್ರಹ, ನಿರ್ವಹಣೆಗೆ ಹೊಸ ‘ಪ್ರೊಟೋಕಾಲ್’ ಹೊರಡಿಸಿದ ಚುನಾವಣಾ ಆಯೋಗ
ಮೇ.7ರಂದು ‘ಲೋಕಸಭಾ ಚುನಾವಣೆ’ಗೆ ಎರಡನೇ ಹಂತದ ಮತದಾನ: ‘ವೇತನ ಸಹಿತ ರಜೆ’ ಘೋಷಣೆ