ಬೆಂಗಳೂರು: ಆರ್ಟಿಕಲ್ 371ಜೆ ತಿರಸ್ಕರಿಸಿದ್ದ ಬಿಜೆಪಿಯವರಿಗೆ ಈಗ ಕಲ್ಯಾಣ ಕರ್ನಾಟಕದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಯವರಿಗೆ ನನ್ನ ಮಾತು ಸಮಸ್ಯೆಯಾಗಿ ಕಾಡುತ್ತಿದೆಯೇ? ಅಥವಾ ನಾನು ಮಾತಾಡುವುದೇ ಸಮಸ್ಯೆಯಾಗಿ ಕಾಣುತ್ತಿದೆಯೇ? ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮಾನ್ಯ ಆರ್.ಅಶೋಕ್ ಅವರೇ, ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾತಾನಾಡಲು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಅರ್ಹತೆಯೂ ಇಲ್ಲ, ನೈತಿಕತೆಯೂ ಇಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿರೋಧಿಗಳು ಯಾರು ಎನ್ನುವುದನ್ನು ನಾನು ಹೇಳಬೇಕಿಲ್ಲ, ಅಡ್ವಾಣಿಯವರ ಈ ಪತ್ರವೇ ಹೇಳುತ್ತದೆ. ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದಿದ್ದು ಐತಿಹಾಸಿಕ ಸತ್ಯ ಎಂದು ಹೇಳಿದ್ದಾರೆ.
ಇಂದು ನೀವು ಅನುದಾನದ ಬಗ್ಗೆ ಮಾತನಾಡುತ್ತಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಆರ್ಟಿಕಲ್ 371ಜೆ, ಆದರೆ ಹಿಂದೆ ನಿಮ್ಮ ಬಿಜೆಪಿ ಸರ್ಕಾರ ಈ ವಿಶೇಷ ಸ್ಥಾನಮಾನವನ್ನು ತಿರಸ್ಕರಿಸಿತ್ತು, ದಶಕ ಕಳೆದರೂ ಬಿಜೆಪಿ ಆರ್ಟಿಕಲ್ 371ಜೆ ತಿರಸ್ಕರಿಸಿದ್ದಕ್ಕೆ ಸ್ಪಷ್ಟ ಕಾರಣಗಳನ್ನು ಕೊಟ್ಟಿಲ್ಲ,
ಅಶೋಕ್ ಸರ್, ಈಗ ನೀವಾದರೂ ಆರ್ಟಿಕಲ್ 371ಜೆ ತಿರಸ್ಕಾರಕ್ಕೆ ಕಾರಣಗಳನ್ನು ಕೊಡಿ ಅಂತ ಒತ್ತಾಯಿಸಿದ್ದಾರೆ.
ಹಿಂದುಳಿದ ಪ್ರದೇಶದ ಜನರ ಏಳಿಗೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು ಈಗ ನಮಗೆ ಪಾಠ ಮಾಡುವ ಅಗತ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಕೆಕೆಆರ್ ಡಿಬಿಯಲ್ಲಿ ಹಗರಣ ನಡೆಸುವ ಮೂಲಕ ಕಲ್ಯಾಣ ಕರ್ನಾಟಕದ ವಿರೋಧಿಯಾಗಿತ್ತು ಎನ್ನುವುದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಕೆಕೆಆರ್ ಡಿಬಿ ಹಗರಣವನ್ನು ನೀವು ಮರೆಮಾಚಿರಬಹುದು, ಆದರೆ ಜನತೆ ಮರೆತಿಲ್ಲ, ನಮ್ಮ ಸರ್ಕಾರವೂ ಮರೆತಿಲ್ಲ, ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಸರ್ಕಾರ ಮಾಡಿದ ಲೂಟಿಯ ದ್ರೋಹದ ಬಗ್ಗೆ ತನಿಖೆ ನಡೆಯುತ್ತಿದೆ. ಭ್ರಷ್ಟರಿಗೆ ಶಿಕ್ಷೆಯೂ ಆಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ಕೊನೆಯ ಮಾತು – ಎಲ್ಲಾ ಇಲಾಖೆಯಲ್ಲೂ, ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುತ್ತೇನೆ ಎಂದು ಹೇಳುವ ಬಿಜೆಪಿಗರೇ, ಮುಖ್ಯಮಂತ್ರಿಗಳು ನನ್ನನ್ನು ಸರ್ಕಾರದ ವಕ್ತಾರನಾಗಿ ನೇಮಿಸಿದ್ದಾರೆ, ನಿಮ್ಮ ಸುಳ್ಳುಗಳನ್ನು ಬೇಧಿಸುವುದು ನನ್ನ ಜವಾಬ್ದಾರಿಯಾಗಿದೆ. ಬಿಜೆಪಿಯವರಿಗೆ ನಾನು ಆಡುವ ಮಾತಿನಲ್ಲಿ ಸಮಸ್ಯೆ ಕಾಣುತ್ತಿದೆಯೇ ಅಥವಾ ನಾನು ಮಾತಾಡುವುದೇ ಸಮಸ್ಯೆಯಾಗಿ ಕಾಡುತ್ತಿದೆಯೇ? ಬಿಜೆಪಿಗರು ನನ್ನನ್ನು “ಬಡವ ನೀ ಮಡಗಿದಂಗೆ ಇರು“ ಎಂಬ ರೀತಿಯಲ್ಲಿ ಕಾಣಲು ಬಯಸುತ್ತಿದ್ದಾರೆಯೇ? ನನ್ನ ಬಗ್ಗೆ ಇಷ್ಟೊಂದು ಅಸಹನೆ ಏಕೆ? ಎಂದು ಕೇಳಿದ್ದಾರೆ.
ಮಾನ್ಯ @RAshokaBJP ಅವರೇ,
ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾತಾನಾಡಲು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಅರ್ಹತೆಯೂ ಇಲ್ಲ, ನೈತಿಕತೆಯೂ ಇಲ್ಲ.ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿರೋಧಿಗಳು ಯಾರು ಎನ್ನುವುದನ್ನು ನಾನು ಹೇಳಬೇಕಿಲ್ಲ, ಅಡ್ವಾಣಿಯವರ ಈ ಪತ್ರವೇ ಹೇಳುತ್ತದೆ.
ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದಿದ್ದು ಐತಿಹಾಸಿಕ ಸತ್ಯ.… https://t.co/tcNj5W7N71 pic.twitter.com/UIYK1dY75q— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 27, 2025
GOOD NEWS: ಕರುನಾಡಿನಲ್ಲಿ ‘ನೀರಿಗಿಲ್ಲ ಬರ’: ಮೈದುಂಬಿ ನಿಂತಿವೆ ರಾಜ್ಯದ ‘ಜಲಾಶಯ’ಗಳು
BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ನೋಂದಣಿ ಕುರಿತು ಇಲ್ಲಿದೆ ಮಾಹಿತಿ