Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ : ಬೀದಿ ನಾಯಿ ಕಚ್ಚಿ `ರೇಬಿಸಿ’ನಿಂದ 5 ವರ್ಷದ ಬಾಲಕಿ ಸಾವು.!

24/12/2025 8:09 AM

Shocking: ಗಡ್ಡ ಬಿಟ್ಟಿದ್ದಕ್ಕೆ ಪರೀಕ್ಷೆಯಿಂದ ಹೊರಕ್ಕೆ! ನರ್ಸಿಂಗ್ ವಿದ್ಯಾರ್ಥಿಗೆ ಎದುರಾದ ವಿಚಿತ್ರ ಸಂಕಷ್ಟ !

24/12/2025 8:00 AM

SHOCKING : ದೆಹಲಿ-ಮೀರತ್ ರೈಲಿನಲ್ಲೇ ಯುವಕ-ಯುವತಿ `ಸೆಕ್ಸ್’ : ವಿಡಿಯೋ ವೈರಲ್ | WATCH VIDEO

24/12/2025 7:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಮ ಮೆಟ್ರೋ ದರ ಇಳಿಕೆ ಮಾಡದಿದ್ದರೇ ಉಗ್ರ ಹೋರಾಟ: BMRCLಗೆ ಬಿಜೆಪಿ ಎಚ್ಚರಿಕೆ
KARNATAKA

ನಮ್ಮ ಮೆಟ್ರೋ ದರ ಇಳಿಕೆ ಮಾಡದಿದ್ದರೇ ಉಗ್ರ ಹೋರಾಟ: BMRCLಗೆ ಬಿಜೆಪಿ ಎಚ್ಚರಿಕೆ

By kannadanewsnow0910/02/2025 3:33 PM

ಬೆಂಗಳೂರು: ಇಂದಿನಿಂದ ಜಾರಿಗೆ ಬರುವಂತೆ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲಾಗಿತ್ತು. ಶೇ.47ರಷ್ಟು ದರವನ್ನು ಹೆಚ್ಚಳ ಮಾಡಿದ್ದರಿಂದ ಪ್ರಯಾಣಿಕರಿಗೆ ಭಾರಿ ಹೊರೆಯಾದಂತೆ ಆಗಿದೆ. ಈ ದರವನ್ನು ಇಳಿಕೆ ಮಾಡದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಬೆಂಗಳೂರು ನಗರ ಘಟಕವು ಬಿಎಂಆರ್ ಸಿಎಲ್ ಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ.

ಇಂದು ಬಿಎಂಆರ್ ಸಿಎಲ್ ಗೆ ಪತ್ರ ಬರೆದಿರುವಂತ ಬೆಂಗಳೂರು ನಗರ ಬಿಜೆಪಿ ಘಟಕವು, ಮೆಟ್ರೋ ರೈಲು ಸಂಚಾರ ದರವನ್ನು ತೀವ್ರವಾಗಿ ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ನಗರದ ಜನತೆಗೆ ಬಹು ದೊಡ್ಡ ಆಘಾತವನ್ನು ನೀಡಿದೆ. ಬೆಂಗಳೂರು ನಗರದ ನಾಗರಿಕರ ಮೇಲೆ ಒಂದಾದ ಮೇಲೆ ಒಂದು ದರ ಏರಿಕೆಯ ಗದಾ ಪ್ರಹಾರ ರಾಜ್ಯ ಸರ್ಕಾರ ಮಾಡುತ್ತಿರುವುದು ಇವರ ಜನವಿರೋಧಿ ನೀತಿಯನ್ನು ಬಯಲು ಮಾಡಿದೆ ಎಂಬುದಾಗಿ ಕಿಡಿಕಾರಿದೆ.

ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜನತೆಯು ಕೇವಲ ವಿವಿಧ ಸೇವೆಗಳ ದರ ಏರಿಕೆಯನ್ನು ಕಾಣುತ್ತಿದ್ದಾರೆಯೇ ವಿನಹ ಸೇವೆಯ ಗುಣಮಟ್ಟದಲ್ಲಿ ಮಾತ್ರ ಏರಿಕೆ ಕಾಣಲು ಸಾಧ್ಯವೇ ಆಗಿಲ್ಲ. ಸರ್ಕಾರ, ಸಾರಿಗೆ ದರ, ಪೆಟ್ರೋಲ್ ಡೀಸೆಲ್ ದರ, ಹೊಸ ವಾಹನ ಖರೀದಿಯ ಮೇಲೆ 1,000 ರೂ ಹೊಸ ಸೆಸ್ ಹೀಗೆ ಹತ್ತಾರು ಬೆಲೆಗಳನ್ನು ಹೆಚ್ಚಳ ಮಾಡಿ ನಗರದ ಜನರ ಜೀವನವನ್ನು ದುಸ್ತರ ಮಾಡಿದ್ದಾರೆ. ಈಗ ಮೆಟ್ರೊ ದರವು ಗಗನಕ್ಕೇರಿಸಿದ್ದಾರೆ ಎಂದು ಕಿಡಿಕಾರಿದೆ.

ಸಾಮೂಹಿಕ ಸಾರಿಗೆಯ ಜೀವನಾಡಿಯಾದ ಮೆಟ್ರೊ ರೈಲು ಸೇವೆಯ ದರವನ್ನು ಒಮ್ಮೆಗೆ ಶೇಕಡಾ 46ರಿಂದ 50ರಷ್ಟು ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡಿರುವುದು ಅಧಿಕಾರಸ್ಮರಿಗೆ ನಗರದ ಜನತೆಯ ಬವಣೆಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ.

ಸರ್ಕಾರ ನಗರ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ವಿಫಲವಾಗಿ ಜನರು ಪರದಾಡುತ್ತಿರುವಾಗ ಸಮೂಹ ಸಾರಿಗೆಯತ್ತ ಜನರನ್ನು ಸೆಳೆಯಲು ಸರ್ಕಾರ ಉತ್ತೇಜನಕರ ನೀತಿಯನ್ನು ಅಳವಡಿಸಿಕೊಳ್ಳಬೇಕು ಆದರೆ ಸರ್ಕಾರ ಮೆಟ್ರೊ ಸೇವೆಯಿಂದ ಜನರನ್ನು ವಿಮುಖಗೊಳಿಸುವ ನೀತಿಯನ್ನು ಅನುಸರಿಸುತ್ತಿದೆ ಶೋಚನೀಯ ಸಂಗತಿಯಾಗಿದೆ.

ಇದೀಗ ದೇಶದಲ್ಲೇ ಅತ್ಯಂತ ದುಬಾರಿಯಾದ ಮೆಟ್ರೋ ಸೇವೆಯನ್ನು ನೀಡುತ್ತಿರುವ ಕುಖ್ಯಾತಿಯು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುವಂತಾಗಿದೆ. ಉಚಿತ ಕೊಡುಗೆಗಳಿಂದ ಖಜಾನೆಯು ಖಾಲಿಯಾಗುತ್ತಿರುವ ಕಾರಣ ಆದಾಯ ಗಳಿಕೆಗೆ ಹೊಸ ಹೊಸ ಮೂಲಗಳ ಮೂಲಕ ನಗರದ ನಾಗರಿಕರ ಸುಲಿಗೆಗೆ ಸರ್ಕಾರ ಮುಂದಾಗಿರುವುದು ನಾಚಿಗೇಡಿನ ಸಂಗತಿ.

ದುರಾದೃಷ್ಟಕರ ಸಂಗತಿಯೆಂದರೆ ಮೆಟ್ರೊ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ವಿಫಲವಾಗಿ ಯೋಜನಾ ವೆಚ್ಚವು ದುಪ್ಪಟ್ಟಾಗಿದೆ.ದುಬಾರಿ ವೆಚ್ಚದಿಂದ ಮೆಟ್ರೊ ಯೋಜನೆಯು ಕಾರ್ಯಸಾಧುವಲ್ಲದ ಹಾಗೆ ನಿರ್ವಹಣೆ ಮಾಡುವ ದುರವಸ್ಥೆಯಾಗಿದೆ.

ಇವರ ಕಾರ್ಯ ವೈಖರಿಯ ಅದಕ್ಷತೆಗೆ ತಾಜಾ ಉದಾಹರಣೆಯು 18 ಕಿ.ಮಿ ಹಳದಿ ಮಾರ್ಗವು ಸಿದ್ಧವಾಗಿದ್ದರೂ ರೈಲು ಬೋಗಿಗಳು ಇಲ್ಲದೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಾಲೋಚನೆಯ ಕೊರತೆ ಹಾಗೂ ಸೂಕ್ತ ತಯಾರಿಯಿಲ್ಲದ ಕಾರಣ ಸಂಚಾರ ಆರಂಭಿಸಲು ಸಾಧ್ಯವಾಗದೆ ಮೆಟ್ರೊ ನಿಗಮವು ಕೋಟ್ಯಾಂತರ ರೂಪಾಯಿ ನಷ್ಟವನ್ನು ಅನುಭವಿಸುತ್ತಿದೆ. ನಿಗಮದ ಅಧಿಕಾರಿಗಳ ಅದಕ್ಷತೆಗೆ ನಗರದ ನಾಗರಿಕರು ದಂಡ ತೆರುತ್ತಿದ್ದಾರೆ. ಮೆಟ್ರೊ ಸೇವೆಯಲ್ಲಿ ವೃತ್ತಿಪರತೆ ಅಳವಡಿಸಿಕೊಂಡು ಕಾಲಬದ್ದ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.

ನಗರದ ನಾಗರಿಕರನ್ನು ಸಮೂಹ ಸಾರಿಗೆ ಬಳಕೆಗೆ ಉತ್ತೇಜಿಸುವ ಕ್ರಮಗಳಿಗೆ ನಿಗಮ ಮುಂದಾಗಬೇಕು ಎಂದು ಒತ್ತಾಯಿಸುತ್ತೇವೆ. ನೂರಕ್ಕೆ ನೂರರಷ್ಟು ಪ್ರಯಾಣವನ್ನು ಹೆಚ್ಚಿಸಿ ನಮ್ಮ ಮೆಟ್ರೋ ದೇಶದಲ್ಲಿ ದುಬಾರಿ ಮೆಟ್ರೋ ಆಗಿದೆ ಸಾರ್ವಜನಿಕರು ಸಮೂಹ ಸಾರಿಗೆಯನ್ನು ಉಪಯೋಗಿಸಿಕೊಳ್ಳಬೇಕೆಂಬ ಈ ಉದ್ದೇಶದಿಂದ ಪ್ರಾರಂಭವಾದ ನಮ್ಮ ಮೆಟ್ರೋ ಈಗ ದುಬಾರಿ ಮೆಟ್ರೋ ಆಗಿದೆ.

ದೆಹಲಿ ಮುಂಬೈ ಹೈದರಾಬಾದ್ ಕೊಲ್ಕತ್ತಾ ಚೆನ್ನೈ ಈ ನಗರಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರಿನ ನಮ್ಮ ಮೆಟ್ರೋ ದುಬಾರಿ ದರವನ್ನು ಹೆಚ್ಚಿಸಿದೆ ದರ ಏರಿಕೆ ಯಾವುದೇ ವೈಜ್ಞಾನಿಕವಾಗಿ ಹೆಚ್ಚಿಸಿರುವ ದರವಲ್ಲ ಮೆಟ್ರೋದಲ್ಲಿ ಹಲವಾರು ವಿಭಾಗಗಳಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟುವ ಬದಲು ಪ್ರಯಾಣಿಕರಿಗೆ ಬರೆಯಾಗುವ ರೀತಿ ದರವನ್ನು ಹೆಚ್ಚಿಸುವುದು ಸೂಕ್ತವಲ್ಲ ಕಿಲೋಮಿಟರ್ ಆಧಾರದಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿ ಅದನ್ನು ಸ್ಟೇಷನ್ ಗಳಿಗೆ ಅನ್ವಯ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗಿದೆ 47ರಷ್ಟು ಹೆಚ್ಚಳ ಎಂದು ಹೇಳಿದರು ಹಲವು ಕಡೆಗಳಲ್ಲಿ ಇಂದಿನ ದರವನ್ನು ಹೋಲಿಕೆ ಮಾಡಿದಾಗ ಶೇಕಡ ನೂರರಷ್ಟು ದರವನ್ನು ಪ್ರಯಾಣಿಕರು ಬರಿಸಬೇಕಾಗುತ್ತದೆ ಕನಿಷ್ಠ ದರ 10 ರೂಪಾಯಿ ಇದ್ದುದ್ದನ್ನು ಹಾಗೆ ಉಳಿಸಿಕೊಂಡಿರುವ ಬಿಎಮ್‌ಆರ್‌ಸಿಎಲ್ ಗರಿಷ್ಠ ದರ 60 ಇದ್ದದ್ದನ್ನು 90ಕ್ಕೆ ಹೇರಿಕೆ ಮಾಡಿದೆ. ಚೆನ್ನೈ ಮುಂಬೈ ದೆಹಲಿ ಹೈದರಾಬಾದ್ ಕೋಲ್ಕತ್ತಾ ಮುಂತಾದ ಮಹಾನಗರ ಗಳಿಗಿಂತ ಬೆಂಗಳೂರು ಮೆಟ್ರೋ ಪ್ರಯಾಣಿಕರು ಶೇಕಡ 60ರಷ್ಟು ಅಧಿಕ ದರವನ್ನು ಮೆಟ್ರೋಗೆ ಬರಿಸಬೇಕಾಗಿದೆ.

ಮೆಟ್ರೊ ಸೇವೆಯ ದರದಲ್ಲಿ ಪೂರ್ವಾಪರ ಆಲೋಚಿಸಿದೆ ನಗರದ ನಾಗರಿಕರನ್ನು ಸುಲಿಗೆ ಮಾಡಲು ಕೈಗೊಂಡಿರುವ ಭಾರಿ ದರ ಏರಿಕೆಯನ್ನು ಕೂಡಲೇ ಹಿಂದಕ್ಕೆ ಪಡಿಯಬೇಕು. ಬಿಜೆಪಿ ನಗರ ನಾಗರಿಕರನ್ನು ಸುಲಿಗೆ ಮಾಡಲು ಅವಕಾಶ ಕೊಡುವುದಿಲ್ಲ. ದರ ಏರಿಕೆ ಹಿಂಪಡೆಯದುದಿದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದೆ.

BREAKING: ಮುಡಾ ಕೇಸಲ್ಲಿ ಸಿಎಂ ಪತ್ನಿ, ಭೈರತಿ ಸುರೇಶ್ ಗೆ ತಾತ್ಕಾಲಿಕ ರಿಲೀಫ್: ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆ

‘ಮುಡಾ’ ಹಗರಣ : 14 ಸೈಟ್ ಹಂಚಿಕೆಗೂ, ಭೈರತಿ ಸುರೇಶ್ ಗೂ ಯಾವುದೇ ಸಂಬಂಧವಿಲ್ಲ : ಸಿವಿ ನಾಗೇಶ್ ವಾದ ಮಂಡನೆ

Share. Facebook Twitter LinkedIn WhatsApp Email

Related Posts

ALERT : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ `ಕ್ರೆಡಿಟ್ ಕಾರ್ಡ್’ ಬಳಸಬೇಡಿ.!

24/12/2025 7:50 AM2 Mins Read

ALERT : ಚಳಿಗೆ ‘ಸ್ವೆಟರ್’ ಹಾಕಿಕೊಂಡು ಮಲಗುವವರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

24/12/2025 7:25 AM2 Mins Read

ಗಮನಿಸಿ : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಕರಗಲು ಜಸ್ಟ್ ಹೀಗೆ ಮಾಡಿ.!

24/12/2025 7:21 AM2 Mins Read
Recent News

SHOCKING : ಪೋಷಕರೇ ಎಚ್ಚರ : ಬೀದಿ ನಾಯಿ ಕಚ್ಚಿ `ರೇಬಿಸಿ’ನಿಂದ 5 ವರ್ಷದ ಬಾಲಕಿ ಸಾವು.!

24/12/2025 8:09 AM

Shocking: ಗಡ್ಡ ಬಿಟ್ಟಿದ್ದಕ್ಕೆ ಪರೀಕ್ಷೆಯಿಂದ ಹೊರಕ್ಕೆ! ನರ್ಸಿಂಗ್ ವಿದ್ಯಾರ್ಥಿಗೆ ಎದುರಾದ ವಿಚಿತ್ರ ಸಂಕಷ್ಟ !

24/12/2025 8:00 AM

SHOCKING : ದೆಹಲಿ-ಮೀರತ್ ರೈಲಿನಲ್ಲೇ ಯುವಕ-ಯುವತಿ `ಸೆಕ್ಸ್’ : ವಿಡಿಯೋ ವೈರಲ್ | WATCH VIDEO

24/12/2025 7:59 AM

ಪ್ರವೇಶ ಪರೀಕ್ಷೆಗಳಲ್ಲಿ ‘ಮುಖ ಗುರುತಿಸುವಿಕೆಯನ್ನು’ ಪರಿಚಯಿಸಲು NTA ಸಿದ್ದತೆ | facial recognition

24/12/2025 7:54 AM
State News
KARNATAKA

ALERT : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ `ಕ್ರೆಡಿಟ್ ಕಾರ್ಡ್’ ಬಳಸಬೇಡಿ.!

By kannadanewsnow5724/12/2025 7:50 AM KARNATAKA 2 Mins Read

ಕ್ರೆಡಿಟ್ ಕಾರ್ಡ್ ಗಳು ದೈನಂದಿನ ಜೀವನದ ಒಂದು ಭಾಗವಾಗಿದೆ. ಬುದ್ಧಿವಂತಿಕೆಯಿಂದ ಬಳಸಿದರೆ, ಅವು ಬಲವಾದ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಲು…

ALERT : ಚಳಿಗೆ ‘ಸ್ವೆಟರ್’ ಹಾಕಿಕೊಂಡು ಮಲಗುವವರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

24/12/2025 7:25 AM

ಗಮನಿಸಿ : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಕರಗಲು ಜಸ್ಟ್ ಹೀಗೆ ಮಾಡಿ.!

24/12/2025 7:21 AM

BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ನಡು ರಸ್ತೆಯಲ್ಲೇ ಗುಂಡು ಹಾರಿಸಿ ಪತ್ನಿ ಹತ್ಯೆಗೈದ ಪತಿ

24/12/2025 7:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.