ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಭಾನುವಾರ (ಏಪ್ರಿಲ್ 21) ತಿಹಾರ್ ಜೈಲಿನಲ್ಲಿರುವ ತನ್ನ ಪತಿಗೆ ಇನ್ಸುಲಿನ್ ನಿರಾಕರಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರವು “ಕೊಲ್ಲಲು” ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರತಿಪಕ್ಷಗಳ ಐ.ಎನ್.ಡಿ.ಐ.ಎ ಬಣವು ಬಿಜೆಪಿಯ ಸರ್ವಾಧಿಕಾರದ ವಿರುದ್ಧ ಹೋರಾಡುತ್ತದೆ ಮತ್ತು ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ ಎಂದು ಅವರು ಇದೇ ವೇಳೆ ಹೇಳಿದರು.ಅಂದಹಾಗೇ ಇಂದು ರಾಂಚಿಯಲ್ಲಿ ಪ್ರತಿಪಕ್ಷಗಳ ಜಂಟಿ ಉಲ್ಗುಲಾನ್ ನ್ಯಾಯ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಅಧಿಕಾರದ ಆಸೆ ಇಲ್ಲ. ಅವರು ರಾಷ್ಟ್ರದ ಸೇವೆ ಮಾಡಲು ಬಯಸುತ್ತಾರೆ. ಅವರು ದೇಶವನ್ನು ನಂ.1 ಮಾಡಲು ಬಯಸುತ್ತಾರೆ.ಇನ್ನೂ ಅವರ ಆಹಾರದ ಮೇಲೆ ಕ್ಯಾಮೆರಾ ಇದೆ. ಪ್ರತಿ ತುಣುಕನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ… ಅವರು ಸಕ್ಕರೆ ರೋಗಿಯಾಗಿದ್ದು, ಕಳೆದ 12 ವರ್ಷಗಳಿಂದ ಪ್ರತಿದಿನ 50 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಜೈಲಿನಲ್ಲಿ ಅವರಿಗೆ ಇನ್ಸುಲಿನ್ ನೀಡಲಾಗುತ್ತಿಲ್ಲ. ಅವರು ದೆಹಲಿಯ ಮುಖ್ಯಮಂತ್ರಿಯನ್ನು ಕೊಲ್ಲಲು ಬಯಸುತ್ತಾರೆ. ಅವರಿಗೆ ಅರವಿಂದ್ ಕೇಜ್ರಿವಾಲ್ ಅವರ ಆಲೋಚನೆಗಳು ಅರ್ಥವಾಗುತ್ತಿಲ್ಲ. ಅವರು ತುಂಬಾ ಧೈರ್ಯಶಾಲಿ. ಅವನು ಸಿಂಹ… ಜೈಲಿನಲ್ಲಿಯೂ ಅವರು ‘ಭಾರತ ಮಾತೆ’ ಬಗ್ಗೆ ಚಿಂತಿತರಾಗಿದ್ದಾರೆ” ಎಂದು ಅವರು ಹೇಳಿದರು.