ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ವಿರುದ್ಧ ಕೇಳಿ ಬಂದಿರುವಂತ ಮುಡಾ ಹಗರಣ ಸಂಬಂಧ ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ಬಿಜೆಪಿ ಕೋರಿತ್ತು. ಆದರೇ ಇದಕ್ಕೆ ಸಭಾ ನಾಯಕರು ಅವಕಾಶ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ 2 ಸದನಗಳಲ್ಲೂ ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧರಿಸಿದೆ.
ಈ ಕುರಿತಂತೆ ವಿಧಾನಸೌಧದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮುಡಾ ಹಗರಣ ಕುರಿತಂತೆ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶವನ್ನು ಕೋರಲಾಗಿತ್ತು. ಆದರೇ ಸ್ಪೀಕರ್, ಸಭಾಪತಿಗಳು ಮುಡಾ ಹಗರಣ ಸಂಬಂಧದ ಚರ್ಚೆಗೆ ಈವರೆಗೆ ಅವಕಾಶ ನೀಡಿಲ್ಲ ಎಂದರು.
ಮುಡಾ ಹಗರಣ ಸಂಬಂಧ ಉಭಯ ಸದನಗಳಲ್ಲೂ ಚರ್ಚೆಗೆ ಅವಕಾಶ ನೀಡಬೇಕು. ಅಲ್ಲಿಯವರೆಗೆ 2 ಸದನಗಳಲ್ಲೂ ವಿಪಕ್ಷಗಳ ನಾಯಕರು ಅಹೋರಾತ್ರಿ ಧರಣಿ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದರು.
‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿ’ಗಾಗಿ ಸಿಡಿದೆದ್ದ ‘ವಾಟಾಳ್ ನಾಗರಾಜ್’: ನಾಳೆ ‘ವಿಧಾನಸೌಧ’ಕ್ಕೆ ಮುತ್ತಿಗೆ
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ