ಶಿವಮೊಗ್ಗ: ಬಿಜೆಪಿಯವರು ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೇ ಮಳೆ-ಬೆಳೆ ಆಗೋದಿಲ್ಲ ಅಂತ ಅಪಪ್ರಚಾರ ಮಾಡುತ್ತಾರೆ. ಆದರೇ ಅವರು ಮುಖ್ಯಮಂತ್ರಿಯಾದ ಮೇಲೆ ಚೆನ್ನಾಗಿ ಮಳೆಯಾಗಿದೆ. ಮಳೆಯಾದ ಕಾರಣ ಲಿಂಗನಮಕ್ಕಿ ಜಲಾಶಯ ಕಳೆದ ವರ್ಷವೂ ತುಂಬಿತ್ತು, ಈ ವರ್ಷವೂ ತುಂಬಿದೆ ಎಂಬುದಾಗಿ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದ ಕ್ರೆಸ್ಟ್ಗೇಟ್ ತೆರೆದು, ಶರಾವತಿ ನದಿ ನೀರಿಗೆ ಪುಷ್ಪವೃಷ್ಟಿ ಮಾಡಿ ಮಾತನಾಡಿದಂತ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಮಳೆಬೆಳೆಯಾಗುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಕಳೆದ ವರ್ಷ ಸಹ ಉತ್ತಮ ಮಳೆಯಾಗಿ ಡ್ಯಾಂ ಭರ್ತಿಯಾಗಿತ್ತು. ಈ ವರ್ಷ ಸಹ ಡ್ಯಾಂ ಭರ್ತಿಯಾಗಿದ್ದು ಲಿಂಗನಮಕ್ಕಿ ಡ್ಯಾಂ ನಿರ್ಮಾಣವಾದ ನಂತರ 21ನೇ ಬಾರಿ ಕ್ರೆಸ್ಟ್ಗೇಟ್ ತೆರೆದು ನೀರು ಬಿಟ್ಟಿದೆ ಎಂದರು.
ಲಿಂಗನಮಕ್ಕಿ ಜಲಾಶಯಕ್ಕೆ ಬಾಗಿನ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಊಹಾಪೋಹ ಇದೆ. ಆದರೆ ಕೆಲವು ದಿನಗಳ ಹಿಂದೆ ಅಧಿಕಾರಿಗಳು ಬಾಗಿನ ಸಮರ್ಪಣೆ ಮಾಡಿರುವುದರಿಂದ ನಾವು ಮತ್ತೆ ಬಾಗಿನ ನೀಡಿಲ್ಲ. ಕ್ರೆಸ್ಟ್ಗೇಟ್ ತೆರೆದು ನದಿಗೆ ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ರಜಾ ದಿನಗಳಲ್ಲೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಚುರುಕು
ಮಂಡ್ಯದಲ್ಲಿ ‘ಕಸಾಪ ಸ್ಮರಣ ಸಂಚಿಕೆ’ ಬಿಡುಗಡೆ ಕಾರ್ಯಕ್ರಮ: ಪ್ರತಿಭಟನೆಗೆ ಹೆದರಿ ‘ಮಹೇಶ್ ಜೋಶಿ’ ಗೈರು !?