ಬೆಂಗಳೂರು: ತೈಲ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರುಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಪೊಲೀಸರು ವಿಜಯೇಂದ್ರ ಸೇರಿದಂಥೆ ಹಲವು ಮಂದಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಬಿಜೆಪಿ ಕಚೇರಿಯಿಂದ ವಿಧಾನಸೌಧದ ವರೆಗೆ ನಾಯಕರು ಸೈಕಲ್ ಜಾಥಾ ನಡೆಸಲು ಮುಂದಾದರು, ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡದೆ ಹಲವು ಮಂದಿ ಬಿಜೆಪಿ ನಾಯಕರನ್ನು ತಮ್ಮ ವ ಶಕ್ಕೆ ಪಡೆದುಕೊಂಡರು.
ಪ್ರತಿಭಟನೆಗೆ 150 ಸೈಕಲ್‌ಗಳನ್ನು ಬಿಜೆಪಿ ನಾಯಕರು ಬಾಡಿಗೆಗೆ ತಂದಿದ್ದರು. ಸಿಲ್ಕ್ ಬೋರ್ಡ್ ಬಳಿ ಇರುವ ‘ಸೈಕಲ್ ಟು ಗೋ’ ಸಂಸ್ಥೆಯಿಂದ ಸೈಕಲ್‌ಗಳನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಪ್ರತಿಭಟನಾಕಾರರನ್ನು ಬಿಜೆಪಿ ಕಚೇರಿ ದಾಟದಂತೆ ಪೊಲೀಸರು ನಾಯಕರನ್ನು ತಮ್ಮ ವಶಕ್ಕೆ ಪಡೆದುಕೊಂಡರು.