ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಂತ ಸಚಿವ ಶಿವರಾಜ ತಂಡರಗಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಇಂದು ಜೈ ಶ್ರೀರಾಮ್ ಘೋಷಣೆ ಕೂಗುತ್ತಲ್ಲೇ ಕಾಂಗ್ರೆಸ್ ಸಭೆಗೂ ನುಗ್ಗೋದಕ್ಕೆ ಯತ್ನಿಸಿದಂತ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿತ್ತು. ಈ ಮಾಹಿತಿ ಅರಿತಂತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಇಂದು ಹೋಟೆಲ್ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಚಿವ ಶಿವರಾಜ್ ತಂಡರಗಿ ಮೋದಿ ಬಗ್ಗೆ ನೀಡಿದಂತ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಜೈ ಶ್ರೀ ರಾಮ್ ಎಂಬುದಾಗಿ ಘೋಷಣೆ ಕೂಗುತ್ತಲೇ ಕಾಂಗ್ರೆಸ್ ಸಭೆಗೆ ಮುತ್ತಿಗೆ ಹಾಕೋದಕ್ಕೂ ಯತ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಹೋಟೆಲ್ ನಲ್ಲಿ ನಡೆಯುತ್ತಿದ್ದಂತ ಕಾಂಗ್ರೆಸ್ ಸಭೆಗೆ ಮುತ್ತಿಗೆ ಹಾಕೋದಕ್ಕೆ ಯತ್ನಿಸಿದಂತ ಸಂದರ್ಭದಲ್ಲಿ ಸ್ಥಳದಲ್ಲಿದ್ದಂತ ಪೊಲೀಸರು ನೂರಾರು ಕಾರ್ಯಕರ್ತರನ್ನು ಬಂಧಿಸಿ, ಕರೆದೊಯ್ದಿದ್ದಾರೆ.
ಸಾರ್ವಜನಿಕರೇ ಗಮನಿಸಿ : ‘ವೋಟರ್ ಐಡಿ’ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ
ರಾಜ್ಯದ ‘ಅನ್ನದಾತ’ರಿಗೆ ಗುಡ್ ನ್ಯೂಸ್ : ‘ರೈತ ಸಿರಿ’ ಯೋಜನೆಯಡಿ ಸಿಗಲಿದೆ 10,000 ರೂ. ಪ್ರೋತ್ಸಾಹಧನ