ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನ ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (BJP) ಕೇರಳದಲ್ಲಿ ಮೊದಲ ಬಾರಿಗೆ ತನ್ನ ಖಾತೆಯನ್ನ ತೆರೆಯುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ಒಪಿನಿಯನ್ ಪೋಲ್ ತಿಳಿಸಿದೆ.
ತಿರುವನಂತಪುರಂನಿಂದ ಬಿಜೆಪಿ ಅಭ್ಯರ್ಥಿಗಳಾದ ರಾಜೀವ್ ಚಂದ್ರಶೇಖರ್, ಪಥನಂತಿಟ್ಟದಿಂದ ಅನಿಲ್ ಆಂಟನಿ ಮತ್ತು ಅಟ್ಟಿಂಗಲ್ ಕ್ಷೇತ್ರದಿಂದ ವಿ ಮುರಳೀಧರನ್ ಮುನ್ನಡೆ ಸಾಧಿಸಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ಒಪಿನಿಯನ್ ಪೋಲ್ ಭವಿಷ್ಯ ನುಡಿದಿದೆ.
ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಗೆಲುವು.!
ಏತನ್ಮಧ್ಯೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಎಡರಂಗವು 7 ಸ್ಥಾನಗಳನ್ನ ಪಡೆಯಲಿದೆ. ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆಯ ಪ್ರಕಾರ, ಕೇರಳದ ವಯನಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಗೆಲುವು ಸಾಧಿಸಲಿದ್ದಾರೆ.
ಕೇರಳ ಲೋಕಸಭೆ ಚುನಾವಣೆ 2019 ಫಲಿತಾಂಶ.!
ಕಾಂಗ್ರೆಸ್ : 15
IUML : 02
CPM : 01
KCM : 01
RSP : 01
BJP : 00
BDJS : 00
BREAKING: ‘ಭೂ ಕಬಳಿಕೆ ಯತ್ನ’ ಪ್ರಕರಣ: ಕೆಸಿಆರ್ ಸೋದರಳಿಯ ‘ಕಣ್ಣರಾವ್’ ಬಂಧನ
BREAKING : ದೈಹಿಕ ಹಲ್ಲೆ ಆರೋಪ : AIFF ಕಾರ್ಯಕಾರಿ ಸಮಿತಿ ಸದಸ್ಯ ‘ದೀಪಕ್ ಶರ್ಮಾ’ ಅಮಾನತು