ನವದೆಹಲಿ: ಬರೇಲಿಯ ಬಿಜೆಪಿ ಸಂಸದ ಛತ್ರಪಾಲ್ ಸಿಂಗ್ ಗಂಗ್ವಾರ್ ಅವರು ತಮ್ಮ ಪ್ರಮಾಣವಚನವನ್ನ ‘ಜೈ ಹಿಂದೂ ರಾಷ್ಟ್ರ’ ಎಂದು ಘೋಷಿಸಿದ ನಂತ್ರ ಲೋಕಸಭೆಯಲ್ಲಿ ಗೊಂದಲ ಉಂಟಾಯಿತು. ವಿಶೇಷವೆಂದರೆ, ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ‘ಜೈ ಪ್ಯಾಲೆಸ್ಟೈನ್’ ಎಂದು ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ.
ಬರೇಲಿಯ ಬಿಜೆಪಿ ಸಂಸದನ ‘ಜೈ ಹಿಂದೂ ರಾಷ್ಟ್ರ’ ಘೋಷಣೆಯನ್ನ ಇಂಡಿಯಾ ಬ್ಲಾಕ್ ಸದಸ್ಯರು ತೀವ್ರವಾಗಿ ವಿರೋಧಿಸಿದರು ಮತ್ತು ಇದು ಭಾರತದ ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಈ ನಡುವೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಓವೈಸಿ, “ಇತರ ಸದಸ್ಯರು ಸಹ ವಿಭಿನ್ನ ವಿಷಯಗಳನ್ನ ಹೇಳುತ್ತಿದ್ದಾರೆ… ನಾನು ‘ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ಟೈನ್’ ಎಂದು ಹೇಳಿದೆ. ಅದು ಹೇಗೆ ತಪ್ಪು? ಸಂವಿಧಾನದ ನಿಬಂಧನೆಯನ್ನ ನನಗೆ ತಿಳಿಸಿ.? ಇತರರು ಏನು ಹೇಳುತ್ತಾರೆಂದು ನೀವು ಕೇಳಬೇಕು. ನಾನು ಏನು ಹೇಳಬೇಕೋ ಅದನ್ನು ಹೇಳಿದೆ. ಪ್ಯಾಲೆಸ್ಟೈನ್ ಬಗ್ಗೆ ಮಹಾತ್ಮ ಗಾಂಧಿ ಹೇಳಿದ್ದನ್ನು ಒಮ್ಮೆ ಓದಿ” ಎಂದಿದ್ದಾರೆ.
VIDEO | AIMIM chief and Hyderabad MP Asaduddin Owaisi (@asadowaisi) said 'Jai Palestine' while taking oath as Member of Lok Sabha earlier today. Here's what he said about it.
"Other members are also saying different things… I said 'Jai Bheem, Jai Telangana, Jai Palestine'. How… pic.twitter.com/4YnLGEuxL2
— Press Trust of India (@PTI_News) June 25, 2024
BREAKING : ಜೀವಾವಧಿ ಶಿಕ್ಷೆ, 1 ಕೋಟಿ ದಂಡ : ‘ಪ್ರಶ್ನೆ ಪತ್ರಿಕೆ ಸೋರಿಕೆ’ ವಿರುದ್ಧ ‘ಯೋಗಿ ಸರ್ಕಾರ’ದ ಮಹತ್ವದ ಕ್ರಮ
Watch Video : ಕೈಯಲ್ಲಿ ‘ಸಂವಿಧಾನದ ಪ್ರತಿ’ ಹಿಡಿದು ಸಂಸದರಾಗಿ ‘ರಾಹುಲ್ ಗಾಂಧಿ’ ಪ್ರಮಾಣ ವಚನ ಸ್ವೀಕಾರ