ಬೆಂಗಳೂರು: ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವಂತ ಶಾಸಕ ಸುನೀಲ್ ಕುಮಾರ್ ಅವರು, ಈ ಹುದ್ದೆಯನ್ನು ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯುವ ಸುಳಿವನ್ನು ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತೊರೆಯಲು ನಿರ್ಧಾರ ಮಾಡಿದ್ದೇನೆ. ವೈಯಕ್ತಿಕ ಕಾರಣದಿಂದ ತೊರೆಯಲು ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಬಹಿರಂಗವಾಗಿ ನಾನು ಈ ವಿಚಾರವನ್ನು ಎಲ್ಲಿಯೂ ಚರ್ಚೆ ಮಾಡಿಲ್ಲ. ಈ ವಿಚಾರ ಪಕ್ಷದ ರಾಜ್ಯಾಧ್ಯಕ್ಷರಿಗೂ ಗೊತ್ತಿಲ್ಲ. ಯಾವುದೇ ಬಣ ರಾಜಕೀಯದಿಂದ ನಾನು ತೊರೆಯುತ್ತಿಲ್ಲ. ನಾನು ಯಾವುದೇ ಬಣ ರಾಜಕೀಯ ಟೀಂ ಜೊತೆಗೂ ಗುರ್ತಿಸಿಕೊಂಡಿಲ್ಲ ಎಂದರು.
ಒತ್ತಡ, ವೈಯಕ್ತಿಕ ಸಮಸ್ಯೆಯಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದೇನೆ ಎಂಬುದಾಗಿ ಶಾಸಕ ಸುನೀಲ್ ಕುಮಾರ್ ತಿಳಿಸಿದ್ದಾರೆ.
BREAKING : ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ‘ಸೈಫ್ ಅಲಿಖಾನ್’ ಡಿಸ್ಚಾರ್ಜ್ : ಫೋಟೋ ವೈರಲ್ | Saif Ali Khan
BREAKING : ಬೆಂಗಳೂರಲ್ಲಿ ವಕೀಲೆಯ ಮೇಲೆ ‘ಲೈಂಗಿಕ ದೌರ್ಜನ್ಯ’ ನಡೆಸಿ ಹಲ್ಲೆ : IT ಅಧಿಕಾರಿಯ ವಿರುದ್ಧ ‘FIR’ ದಾಖಲು!