ಬೀದರ್: ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಸಂತ್ರಸ್ತೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ. ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ಹಲವು ಬಾರಿ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿರೋದಾಗಿ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಸಂತ್ರಸ್ತ ಯುವತಿಯೊಬ್ಬರು, ಬೀದರ್ ಯಾವ ರಾಜಕಾರಣಿಗಳು ದೂರು ಕೊಡಿ ಎಂಬುದಾಗಿ ನನಗೆ ಹೇಳಿಲ್ಲ. ಮಹಿಳಾ ಆಯೋಗದ ಅಧ್ಯಕ್ಷರು ಸಹಾಯ ಮಾಡಿದ್ದಾರೆ. ಬೀದರ್ ಎಸ್ಪಿ ಪ್ರದೀಪ್ ಗುಂಟೆ ಸಹ ನಮಗೆ ಸಹಾಯ ಮಾಡಿದ್ದಾರೆ ಎಂದರು.
ಪ್ರತೀದ್ ಚೌಹಾಣ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ನನ್ನ ಮಗಳಂತೆ ಎಂದು ಹೇಳಿ ಪ್ರಭು ಚೌಹಾಣ್ ರಿಂದ ತೇಜೋವಧೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಪ್ರತೀಕ್ ನನಗೆ ಪರಿಚಯವಾಗಿದ್ದರು. ಮದುವೆ ಆಗುವುದಾಗಿ ಹೇಳಿದ ಮೇಲೆ ಸಾಕಷ್ಟು ಸಲ ಓಡಾಡಿದ್ದೇವೆ. ಮದುವೆ ಮಾಡಿಕೊಳ್ಳುತ್ತೇನೆಂದು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಲಾಡ್ಜ್ ನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆನಂತ್ರ ನಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಿಶ್ಚಿತಾರ್ಥದ ಬಳಿಕ ಮದುವೆ ತಡ ಮಾಡುತ್ತಲೇ ಬಂದಿದ್ದಾರೆ. ಮೋದಿ, ಅಮಿತ್ ಶಾ ಕರೆಸಿ ಅದ್ಧೂರಿ ಮದುವೆಯಾಗೋಣ ಎಂದಿದ್ದರು. ಏನೋ ಒಂದು ನೆಪ ಹೇಳಿ ಮದುವೆ ಮುಂದೂಡುತ್ತಲೇ ಬಂದರು. ಆನಂತರ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದ್ರು. ನಿಶ್ಚಿತಾರ್ಥವಾಗಿ ಎರಡು ವರ್ಷದ ಬಳಿಕ ಕ್ಯಾರೆಕ್ಟರ್ ಬಗ್ಗೆ ಮಾತನಾಡ್ತಿದ್ದಾರೆ ಎಂದರು.
ನಾನು ಯಾರ ಜೊತೆಗೂ ಕೂಡ ವೀಡಿಯೋ ಕಾಲ್, ಚಾಟಿಂಗ್ ಮಾಡಿಲ್ಲ. ಟೆಕ್ನಾಲಜಿ ಬಳಸಿ ವೀಡಿಯೋ ಕಾಲ್, ಚಾಟಿಂಗ್ ಅಂತ ಸೃಷ್ಠಿಸಿದ್ದಾರೆ. ಪ್ರತೀಕ್ ಚೌಹಾಣ್ ಹಲವು ಬಾರಿ ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಪ್ರತೀಕ್ ಗೆ ಹಲವಾರು ಯುವತಿಯರ ಜೊತೆಗೆ ಅನೈತಿಕ ಸಂಬಂಧವಿದೆ. ಶಿರಡಿಯಲ್ಲಿ ನನ್ನ ಒಂದು ರೂಂನಲ್ಲಿ ಇರಿಸಿ ಇನ್ನೊಂದು ಹುಡುಗಿ ಜೊತೆಗಿದ್ದರು. ಅಲ್ಲಿಯೂ ಕೂಡ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬುದಾಗಿ ಬೀದರ್ ನಲ್ಲಿ ಪ್ರಭು ಚೌಹಾಣ್ ಪುತ್ರನ ವಿರುದ್ಧ ಯುವತಿ ಆರೋಪಿಸಿದ್ದಾರೆ.
ಸಾಗರ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್: 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ತರಗತಿ ಆರಂಭ