ಬೆಂಗಳೂರು: ಇಂದು ಬಿಜೆಪಿ ಶಾಸಕ ಮುನಿರತ್ನ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದಂತ ಕೋರ್ಟ್, ಅಭಿಯೋಜಕರು ಕಾಲಾವಕಾಶ ಕೋರಿದ ಕಾರಣ ನಾಳೆಗೆ ಮುಂದೂಡಿದೆ. ಈ ಮೂಲಕ ಬಿಗ್ ಶಾಕ್ ನೀಡಲಾಗಿದೆ. ಹೀಗಾಗಿ 1 ದಿನ ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ ಆದಂತೆ ಆಗಿದೆ.
ಬಿಜೆಪಿ ಶಾಸಕ ಮುನಿರತ್ನ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 82ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆಯಿತು. ಮುನಿರತ್ನ ಪರವಾಗಿ ಅಶೋಕ್ ಹಾರನಹಳ್ಳಿ ಅವರು ವಾಧಿಸಿದರು. ಈ ವಾದದ ಬಳಿಕ ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೋರಿದ ಕಾರಣ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಇನ್ನೂ ಇಂದು ಬಿಜೆಪಿ ಶಾಸಕ ಮುನಿರತ್ನ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿತ್ತು. ಆ ಅವಧಿಯನ್ನು ನಾಳೆಯವರೆಗೂ ವಿಸ್ತರಿಸಿದೆ. ಈ ಮೂಲಕ ಶಾಸಕ ಮುನಿರತ್ನ ಜೈಲುಪಾಲಾಗಿದ್ದಾರೆ.
ಷಡ್ಯಂತ್ರ ಮಾಡುವ ಅವಶ್ಯಕತೆ ನಮಗಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗು
BREAKING : ದೇಶಾದ್ಯಂತ ‘ಬುಲ್ಡೋಜರ್ ಕಾರ್ಯಚರಣೆ’ಗೆ ‘ಸುಪ್ರೀಂಕೋರ್ಟ್’ ತಡೆ