ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟೆಯಲ್ಲಿ ಹಮ್ಮಿಕೊಂಡಿದ್ದಂತ ಕಾರ್ಯಕ್ರಮದಲ್ಲಿ, ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗರಿಸಲಾಗಿತ್ತು. ಹೀಗೆ ಸಿಂಗಾರಗೊಂಡಿದ್ದಂತ ತಿರಂಗ ಹೊದ್ದಿದ್ದಂತ ಆನೆಯ ಮೇಲೆಯೇ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ( MLA A S Patil Nadahalli ) ತಮ್ಮ ಮಗನನ್ನು ಕೂರಿಸಿ, ಮೆರವಣಿಗೆ ಮಾಡಿ, ರಾಷ್ಟ್ರಧ್ವಜಕ್ಕೆ ( National Flag ) ಅಪಮಾನ ಮಾಡಿರುವಂತ ಘಟನೆ ಇಂದು ನಡೆದಿದೆ.

ಮೈಸೂರು: ನೈಋತ್ಯ ರೈಲ್ವೆಯಿಂದ ‘ಹರ್ ಘರ್ ತಿರಂಗ’ ಅಭಿಯಾನ ಆಚರಣೆ, 118 ರೈಲು ನಿಲ್ದಾಣಗಳಲ್ಲಿ ‘ರಾಷ್ಟ್ರಧ್ವಜ’ ಹಾರಾಟ

ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಳಿಕೋಟೆಯಲ್ಲಿ 75 ಕಿಲೋ ಮೀಟರ್ ಯುವಜನ ಸಂಕಲ್ಪ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯ ವೇಳೆಯಲ್ಲಿ ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗಾರಗೊಳಿಸಲಾಗಿತ್ತು.

ಈ ಯುವಜನ ಸಂಕಲ್ಪ ನಡಿಗೆಯಲ್ಲಿ ಭಾಗವಹಿಸಿದ್ದಂತ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿಯವರು, ತಮ್ಮ ಮಗನನ್ನು ರಾಷ್ಟ್ರಧ್ವಜ ಹೊದ್ದಿದ್ದಂತ ಆನೆಯ ಮೇಲೆ ಕೂರಿಸಿ, ತಿರಂಗಕ್ಕೆ ಅವಮಾನ ಮಾಡಿರೋ ವೀಡಿಯೋ, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ

ಇನ್ನೂ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿಯವರು ತಮ್ಮ ಪುತ್ರನನ್ನು ತಿರಂಗಹೊದ್ದಿದ್ದಂತ ಆನೆಯ ಮೇಲೆ ಕೂರಿಸಿ, ರಾಷ್ಟ್ರಧ್ವಜಕ್ಕೆ ಮಾಡಿದಂತ ಅಪಮಾನವನ್ನು ಖಂಡಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Share.
Exit mobile version