ಬೆಂಗಳೂರು : ಗೋವಿಂದರಾಜನಗರದಲ್ಲಿ ನಡೆದ  75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ  ಸಮಾರಂಭದಲ್ಲಿ ಮಾತನಾಡಿ  ” ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ,ಬಲಿದಾನ ಮಾಡಿದ ಮಹನೀಯರುಗಳ ಇತಿಹಾಸ ಇಂದಿನ ಯುವ ಸಮೂಹ ಅರಿತುಕೊಳ್ಳಬೇಕೆಂದು ವಿ.ಸೋಮಣ್ಣ ತಿಳಿಸಿದ್ದರು. 

BIGG NEWS : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ ಮಹಾರಾಷ್ಟ್ರದ ಪುಣೆ ಪ್ರವಾಸ ‘ : ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ತೆರಳಿದ ಸಿಎಂ

ಗೋವಿಂದರಾಜನಗರ ವಿಧಾನಸಭಾ ಬಿ.ಜಿ.ಎಸ್.ಆಟದ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಸಮಾರಂಭವನ್ನು ಬಿ.ಜೆ.ಎಸ್.ಆಟದ ಮೈದಾನದಲ್ಲಿ ಸ್ಥಳೀಯ ಶಾಸಕರು. ವಸತಿ ಸಚಿವರಾದ ವಿ.ಸೋಮಣ್ಣರವರು ಉದ್ಘಾಟಿಸಿದರು. ಶಾಲೆಯ ಮಕ್ಕಳಿಂದ ಪಥ ಸಂಚಲನ ಮತ್ತು ವಿವಿಧ ವೇಷಭೂಷಣ ಧರಿಸಿದ ಮಕ್ಕಳು,ವಾದ್ಯತಂಡಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

BIGG NEWS : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ ಮಹಾರಾಷ್ಟ್ರದ ಪುಣೆ ಪ್ರವಾಸ ‘ : ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ತೆರಳಿದ ಸಿಎಂ

ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರವಾಹನ ವಿತರಿಸಲಾಯಿತು.  ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿ ರವರ ನೇತೃತ್ವದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹರ್ ಘರ್ ತಿರಂಗಾ ಅಂದೋಲನ ನಮ್ಮ ಕ್ಷೇತ್ರದಲ್ಲಿ ಮನೆ ಮೇಲೆ ತ್ರಿರ್ವಣ ಧ್ವಜಾವನ್ನು ಉಚಿತವಾಗಿ ವಿತರಿಸಲಾಗಿದೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ,ಆರೋಗ್ಯ ಮತ್ತು ಪರಿಸರ ಮೂಲ ಆದ್ಯತೆ ನೀಡಲಾಗಿದೆ. ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ದಿ ಎಂಬಂತೆ ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಗಳಾಗಿ ನಿರ್ಮಿಸಲಾಗಿದೆ. ಕನಕಭವನ ಮತ್ತು ಜ್ಞಾನಸೌಧದಲ್ಲಿ ಐ.ಎ.ಎಸ್. ಮತ್ತು ಪರೀಕ್ಷಾ ತರಭೇತಿ ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದೆ.ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ದಾಸರಹಳ್ಳಿ ಮತ್ತು ಪಂತರಪಾಳ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಪರಿಸರ ಸ್ವಚ್ಚತೆಗೆ ಆದ್ಯತೆ ಕ್ಷೇತ್ರದಲ್ಲಿರುವ ಪಾರ್ಕ್ ನವೀಕರಣ ಮಾಡಿ ಹಸಿರುಮಯ ವಾತವರಣ ನಿರ್ಮಿಸಲಾಗಿದೆ.

BIGG NEWS : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ ಮಹಾರಾಷ್ಟ್ರದ ಪುಣೆ ಪ್ರವಾಸ ‘ : ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ತೆರಳಿದ ಸಿಎಂ

ಮಹಾತ್ಮಗಾಂಧೀಜಿ,ಸುಭಾಶ್ ಚಂದ್ರಬೋಸ್, ವೀರಸಾರ್ವಕರ್,ರಾಣಿ ಅಬ್ಬಕ್ಕ,ಕಿತ್ತೂರು ರಾಣಿ ಚನ್ನಮ್ಮ,ಸಂಗೊಳ್ಳಿ ರಾಯಣ್ಣ ಲಕ್ಷಾಂತರ ದೇಶ ಪ್ರೇಮಿಗಳ ತ್ಯಾಗ,ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ,ಬಲಿದಾನ ಮಾಡಿದ ಮಹನೀಯರುಗಳು ಇತಿಹಾಸ ಇಂದಿನ ಯುವ ಸಮೂಹ ಅರಿತುಕೊಳ್ಳಬೇಕು ಎಂದು ಹೇಳಿದರು.

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ವಾಗೇಶ್,ಶ್ರೀಧರ್, ದಾಸೇಗೌಡ,ಶ್ರೀಮತಿ ರೂಪಲಿಂಗೇಶ್ವರ್,ಪಲ್ಲವಿರವರು ಭಾಗವಹಿಸಿದ್ದರು

Share.
Exit mobile version