Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯಲ್ಲಿ ನಿಮ್ಮ ‘ಕಿಡ್ನಿ’ಗಳ ಆರೋಗ್ಯದ ಕುರಿತು ಜಾಗರೂಕರಾಗಿರಿ ; ಈ ಸಲಹೆ ಅನುಸರಿಸಿ!

28/03/2026 8:52 PM

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

28/03/2026 8:45 PM

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು
KARNATAKA

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

By kannadanewsnow0928/03/2026 8:45 PM

ದಾವಣಗೆರೆ: ಬಿಜೆಪಿ ನಾಯಕ ಬಿ.ಜಿ. ಅಜಯ್ ಕುಮಾರ್ ಅವರು ಹಾಕಿದ್ದ ಸವಾಲನ್ನು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಕಚೇರಿ ಮುಂಭಾಗದಲ್ಲಿ ಕೇಸರಿ ಪಡೆಯ ಕಾರ್ಯಕರ್ತರು ಶಾಸಕರಿಗೆ ಚಪ್ಪಲಿ ಹಾಗೂ ಪೊರಕೆ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ಹಿನ್ನೆಲೆ:

ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ನಾಮಪತ್ರ ಸಲ್ಲಿಕೆ ವೇಳೆ ಪ್ರದೀಪ್ ಈಶ್ವರ್ ಅವರು ಬಿಜೆಪಿ ನಾಯಕರ ವಿರುದ್ಧ ತೊಡೆ ತಟ್ಟಿ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಅಜಯ್ ಕುಮಾರ್, “ತಾಕತ್ತಿದ್ದರೆ ದಾವಣಗೆರೆಗೆ ಬನ್ನಿ” ಎಂದು ಪ್ರತಿ ಸವಾಲು ಎಸೆದಿದ್ದರು. ಈ ಸವಾಲನ್ನು ಸ್ವೀಕರಿಸಿದ ಶಾಸಕರು ಇಂದು ದಾವಣಗೆರೆಗೆ ಆಗಮಿಸಿದ್ದರು.

ನಡೆದಿದ್ದೇನು?

ಪ್ರದೀಪ್ ಈಶ್ವರ್ ಅವರು ಪಿ.ಬಿ. ರಸ್ತೆಯ ಮೂಲಕ ಕೆ.ಬಿ. ಬಡಾವಣೆಯ ಬಿಜೆಪಿ ಕಚೇರಿ ಹತ್ತಿರ ಹಾದು ರಾಯರ ಮಠಕ್ಕೆ ತೆರಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಅವರನ್ನು ಮುತ್ತಿಗೆ ಹಾಕಿದರು.

  • ಬಿಜೆಪಿ ನಾಯಕ ಬಿ.ಜಿ. ಅಜಯ್ ಕುಮಾರ್ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ ಕಾರ್ಯಕರ್ತರು, ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆಗಳನ್ನು ಕೂಗಿದರು.

  • ಈ ವೇಳೆ ಆಕ್ರೋಶಗೊಂಡ ಕಾರ್ಯಕರ್ತರು ಪೊರಕೆ ಮತ್ತು ಚಪ್ಪಲಿಗಳನ್ನು ಪ್ರದರ್ಶಿಸಿದರು.

  • ಪ್ರತಿಯಾಗಿ ಪ್ರದೀಪ್ ಈಶ್ವರ್ ಅವರು ತಮ್ಮ ಕಾರಿನ ಮೇಲೆ ನಿಂತು ಕಾಂಗ್ರೆಸ್ ಬಾವುಟ ಪ್ರದರ್ಶಿಸಿ, “ನಾನು ಮೌನವಾಗಿ ದಾವಣಗೆರೆಗೆ ಬಂದಿದ್ದೇನೆ” ಎಂದು ಸೆಡ್ಡು ಹೊಡೆದರು.

ಪೊಲೀಸರ ಮಧ್ಯಪ್ರವೇಶ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಎಎಸ್ಪಿ ಪರಮೇಶ್ವರ್ ಹೆಗಡೆ ನೇತೃತ್ವದ ತಂಡ ಹಾಗೂ ಸಿಆರ್‌ಪಿಎಫ್ ಯೋಧರು ತಕ್ಷಣ ಮಧ್ಯಪ್ರವೇಶಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಶಾಸಕರ ಕಾರು ಮುಂದಕ್ಕೆ ಸಾಗಲು ಅನುವು ಮಾಡಿಕೊಟ್ಟರು.

ಪ್ರದೀಪ್ ಈಶ್ವರ್ ಹೇಳಿಕೆ:

ಘಟನೆಯ ನಂತರ ಮಾತನಾಡಿದ ಪ್ರದೀಪ್ ಈಶ್ವರ್, “ನನ್ನ ತಾಕತ್ತಿನ ಬಗ್ಗೆ ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದರು. ಅದಕ್ಕಾಗಿಯೇ ಇಲ್ಲಿಗೆ ಬಂದು ನನ್ನ ತಾಕತ್ತು ತೋರಿಸಿದ್ದೇನೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಸಮರ್ಥ್ ಹೊಸ ತಲೆಮಾರಿನ ಹುಡುಗ, ಅವರನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು.

ಈ ಘಟನೆಯಿಂದಾಗಿ ದಾವಣಗೆರೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಕರೆದ ಪ್ರೊಫೆಸರ್ : ವಿಡಿಯೋ ವೈರಲ್ | WATCH VIDEO

Share. Facebook Twitter LinkedIn WhatsApp Email

Related Posts

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM1 Min Read

ಕಲಬುರಗಿಯಲ್ಲಿ ವರದಕ್ಷಿಣೆಗಾಗಿ ಪತ್ನಿಯ ಭೀಕರ ಕೊಲೆ; ಪತಿ ಸೇರಿ ಮೂವರ ಬಂಧನ!

28/03/2026 8:28 PM1 Min Read

KSRTCಯ ‘ಪಾರದರ್ಶಕ ನೇಮಕಾತಿ’ಗೆ ಪ್ರತಿಷ್ಠಿತ ರಾಷ್ಟ್ರೀಯ ‘ಸ್ಕಾಚ್’ ಪ್ರಶಸ್ತಿ ಗರಿ!

28/03/2026 7:36 PM2 Mins Read
Recent News

ಬೇಸಿಗೆಯಲ್ಲಿ ನಿಮ್ಮ ‘ಕಿಡ್ನಿ’ಗಳ ಆರೋಗ್ಯದ ಕುರಿತು ಜಾಗರೂಕರಾಗಿರಿ ; ಈ ಸಲಹೆ ಅನುಸರಿಸಿ!

28/03/2026 8:52 PM

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

28/03/2026 8:45 PM

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM

ಐಪಿಎಲ್ ಚರಿತ್ರೆಯಲ್ಲಿ ಕೊಹ್ಲಿ ಹೊಸ ಮನ್ವಂತರ: ಆರ್‌ಸಿಬಿ ಪರ 19ನೇ ಸೀಸನ್ ಆಡಿ ವಿರಾಟ್ ವಿಶ್ವದಾಖಲೆ!

28/03/2026 8:34 PM
State News
KARNATAKA

ದಾವಣಗೆರೆಯಲ್ಲಿ ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

By kannadanewsnow0928/03/2026 8:45 PM KARNATAKA 2 Mins Read

ದಾವಣಗೆರೆ: ಬಿಜೆಪಿ ನಾಯಕ ಬಿ.ಜಿ. ಅಜಯ್ ಕುಮಾರ್ ಅವರು ಹಾಕಿದ್ದ ಸವಾಲನ್ನು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್…

BREAKING: ಹಾಸನದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರಿಗೆ ಗಂಭೀರ ಗಾಯ

28/03/2026 8:42 PM

ಕಲಬುರಗಿಯಲ್ಲಿ ವರದಕ್ಷಿಣೆಗಾಗಿ ಪತ್ನಿಯ ಭೀಕರ ಕೊಲೆ; ಪತಿ ಸೇರಿ ಮೂವರ ಬಂಧನ!

28/03/2026 8:28 PM

KSRTCಯ ‘ಪಾರದರ್ಶಕ ನೇಮಕಾತಿ’ಗೆ ಪ್ರತಿಷ್ಠಿತ ರಾಷ್ಟ್ರೀಯ ‘ಸ್ಕಾಚ್’ ಪ್ರಶಸ್ತಿ ಗರಿ!

28/03/2026 7:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.