ಬೆಂಗಳೂರು: ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು, ಬಾಣಂತಿಯರ ಸಾವಿನ ಕುರಿತಂತೆ ಬಿಜೆಪಿಯಿಂದ ಆಂದೋಲನ ಸಮಿತಿ ಹಾಗೂ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಈ ತಂಡವು ರಾಜ್ಯಾಧ್ಯಂತ ಸಂಚರಿಸಿ ವರದಿಯನ್ನು ಸಂಗ್ರಹಿಸಿ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಿದೆ.
ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಕೆಳಕಂಡ ಪ್ರಮುಖರನ್ನು ಒಳಗೊಂಡ ಆಂದೋಲನ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದಿದ್ದಾರೆ.
ಹೀಗಿದೆ ಆಂದೋಲನ ಸಮಿತಿ ತಂಡದ ಪಟ್ಟಿ
- ಛಲವಾದಿ ನಾರಾಯಣಸ್ವಾಮಿ – ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
- ಅರಗ ಜ್ಞಾನೇಂದ್ರ, ಶಾಸಕರು
- ಎನ್ ಮಹೇಶ್, ರಾಜ್ಯ ಉಪಾಧ್ಯಕ್ಷರು
- ಅಶ್ವತ್ಥನಾರಾಯಣ, ಮುಖ್ಯ ವಕ್ತಾರರು
- ಬಸವರಾಜ ಮತ್ತಿಮೂಡ್, ಶಾಸಕರು
- ಎನ್ ರವಿಕುಮಾರ್, ವಿಧಾನ ಪರಿಷತ್ ಸದಸ್ಯರು
- ಕೆ ಎನ್ ನವೀನ್, ಎಂಎಲ್ಸಿ
- ರಾಜುಗೌಡ, ಮಾಜಿ ಸಚಿವರು
- ಭಾರತಿ ಶೆಟ್ಟಿ, ಎಂಎಲ್ಸಿ
- ಹೇಮಲತಾ ನಾಯಕ್, ಎಂಎಲ್ಸಿ
- ಲಲಿತಾ ಅನಪೂರ್, ರಾಜ್ಯ ಕಾರ್ಯದರ್ಶಿ
- ಚಂದು ಪಾಟೀಲ್, ಜಿಲ್ಲಾಧ್ಯಕ್ಷರು
- ಭಾಸ್ಕರ್ ರಾವ್, ವಕ್ತಾರರು
- ವೆಂಕಟೇಶ ದೊಡ್ಡೇರಿ, ವಕ್ತಾರರು
- ವಸಂತ ಕುಮಾರ್, ರಾಜ್ಯ ಸಂಚಾಲಕರು, ಕಾನೂನು ಪ್ರಕೋಷ್ಟ
- ಕರುಣಾಕರ್ ಖಾಸಲೆ, ರಾಜ್ಯ ಸಂಚಾಲಕರು, ಮಾಧ್ಯಮ ವಿಭಾಗ
ಇನ್ನೂ ರಾಜ್ಯಾದ್ಯಂತ ಆಗುತ್ತಿರುವ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳ ಕುರಿತು ಈ ಕೆಳಕಂಡ ಪ್ರಮುಖರನ್ನೊಳಗೊಂಡ ಸತ್ಯ ಶೋಧನಾ ತಂಡವನ್ನು ರಚಿಸಲಾಗಿದೆ. ಈ ತಂಡದ ಪ್ರಮುಖರು ಸಮಗ್ರ ವರದಿಯನ್ನು ನೀಡಲು ನಿರ್ದೇಶಿಸಲಾಗಿದೆ.
ಹೀಗಿದೆ ಸತ್ಯಶೋಧನಾ ತಂಡದ ಸದಸ್ಯರ ಪಟ್ಟಿ
- ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕರು
- ಡಾ.ಅವಿನಾಶ್ ಜಾಧವ್, ಶಾಸಕರು
- ಡಾ.ಚಂದ್ರು ಲಮಾಣಿ, ಶಾಸಕರು
- ಡಾ.ಬಸವರಾಜ್ ಕೇಲಗಾರ, ರಾಜ್ಯ ಉಪಾಧ್ಯಕ್ಷರು
- ಡಾ.ಲಕ್ಷ್ಮೀ ಅಶ್ವಿನ್ ಗೌಡ, ರಾಜ್ಯ ಕಾರ್ಯದರ್ಶಿಗಳು
- ಡಾ.ನಾರಾಯಣ್, ರಾಜ್ಯ ಸಂಚಾಲಕರು, ವೈದ್ಯಕೀಯ ಪ್ರಕೋಷ್ಠ
- ಡಾ.ಅರುಣಾ, ಜಿಲ್ಲಾ ಉಪಾಧ್ಯಕ್ಷರು
- ವಿಜಯಲಕ್ಷ್ಮೀ ಕರೂರು, ರಾಜ್ಯ ಖಜಾಂಚಿ, ಮಹಿಳಾ ಮೋರ್ಚಾ
- ಡಾ.ಪದ್ಮ ಪ್ರಕಾಶ್, ಮಾಜಿ ರಾಜ್ಯ ಉಪಾಧ್ಯಕ್ಷರು, ಮಹಿಳಾ ಮೋರ್ಚಾ
- ಡಾ.ವಿಜಯಲಕ್ಷ್ಮೀ ಬಾ ತುಂಗಳ, ರಾಜ್ಯ ಉಪಾಧ್ಯಕ್ಷರು, ಮಹಿಳಾ ಮೋರ್ಚಾ
- ಡಾ.ಸುಧಾ ಹಲ್ಕಾಯಿ, ಪ್ರಮುಖರು
- ರತನ್ ರಮೇಶ್ ಪೂಜಾರಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯರು
- ಪ್ರದೀಪ್ ಕಡಾಡಿ, ಸಾಮಾಜಿಕ ಜಾಲತಾಣದ ವಿಭಾಗ, ರಾಜ್ಯ ಸಹ ಸಂಚಾಲಕರು
- ಸಂಯೋಜಕರಾಗಿ, ಕುಮಾರಿ ಮಂಜುಳಾ, ರಾಜ್ಯ ಅಧ್ಯಕ್ಷರು, ಮಹಿಳಾ ಮೋರ್ಚಾ ಹಾಗೂ ಅಶೋಕ್ ಗೌಡ, ರಾಜ್ಯ ವಕ್ತಾರರನ್ನು ನೇಮಕ ಮಾಡಲಾಗಿದೆ.
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ
ಅಫ್ಘಾನ್ ತಾಲಿಬಾನ್ ಪಡೆಗಳ ಗುಂಡಿನ ದಾಳಿ: ಪಾಕ್ ಸೈನಿಕ ಸಾವು, 11 ಮಂದಿಗೆ ಗಾಯ