ರಾಮನಗರ: ರಾಜ್ಯದಲ್ಲಿ ಬಿಜೆಪಿ ಮುಖಂಡನಿಂದಲೇ ಕೀಚಕ ಕೃತ್ಯ ಎಸಗಿರೋ ಘಟನೆ ನಡೆದಿದೆ. ಸಾಲ ಕೊಡಿಸುವುದಾಗಿ ಲಾಡ್ಜ್ ಗೆ ಕರೆದೊಯ್ದು ರಾತ್ರಿಯಿಡೀ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿರೋ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಕೀಚಕ ಕೃತ್ಯ ಎಸಗಿದಂತ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸೂರನಹಳ್ಳಿಯ ಬಿಜೆಪಿ ಮುಖಂಡ ಚಲುವರಾಮು ಎಂಬುವರು ಬ್ಯೂಟಿಷಿನ್ ಕೆಲಸ ಮಾಡುತ್ತಿದ್ದಂತ ಮಹಿಳೆಯೊಬ್ಬರ ಪರಿಚಯವಾಗಿತ್ತು. ಆಕೆಗೆ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದಳು. ತನ್ನ ಗಂಡನ ಕಾಗದ ಪತ್ರವನ್ನು ಸರಿ ಪಡಿಸಲು ಆರ್ಥಿಕ ಸಹಾಯ ಬೇಕಿದ್ದರಿಂದ ಬಿಜೆಪಿ ಮುಖಂಡ ಚಲುವರಾಮು ಅವರಿಗೆ ಸಾಲ ಕೊಡಿಸುವಂತೆ ಕೋರಿದ್ದಳು.
ಇದಕ್ಕೆ ಒಪ್ಪಿದ್ದಂತ ಬಿಜೆಪಿ ಮುಖಂಡ ಚಲುವರಾಮು ಅವರು ಆಕೆಗೆ ಸಾಲ ಕೊಡಿಸುವುದಾಗಿ ರಾಮನಗರದ ಲಾಡ್ಜ್ ನಲ್ಲಿ ಸಾಲ ಕೊಡುವವರು ಇದ್ದಾರೆ ಬಾ ಅಂತ ಕರೆದುಕೊಂಡು ಹೋಗಿದ್ದರು. ಅಲ್ಲೇ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಕಪಾಳಕ್ಕೆ ಹೊಡೆದಿದ್ದಾಳೆ. ಆಗ ಪ್ರಜ್ಞೆ ತಪ್ಪಿದಂತ ಆಕೆಯ ಮೇಲೆ ರಾತ್ರಿಯಿಡೀ ಅತ್ಯಾಚಾರ ಎಸಗಿರೋದಾಗಿ ಸಾತನೂರು ಠಾಣೆಗೆ ನೀಡಿರುವಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಲುವರಾಮು ಅವರು ಆ ಬಳಿಕ ವೀಡಿಯೋ ಕಾಲ್ ಮಾಡಿ ನಗ್ನ ದೇಹ ತೋರಿಸೋದಕ್ಕೆ ಬೆದರಿಕೆ ಹಾಕುತ್ತಿದ್ದರು. ಇಲ್ಲದೇ ಇದ್ದರೇ ನಿನ್ನ ಖಾಸಗಿ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದಾರೆ. ಈ ದೂರು ಆಧರಿಸಿ ಬಿಜೆಪಿ ಮುಖಂಡ ಚಲುವರಾಮು ವಿರುದ್ಧ ಕೇಸ್ ದಾಖಲಿಸಿಕೊಂಡು, ಬಿಜೆಪಿ ಮುಖಂಡನನ್ನು ಬಂಧಿಸಿದ್ದಾರೆ.
ಕಜಕಿಸ್ತಾನದಲ್ಲಿ ವಿಮಾನ ಅಪಘಾತಕ್ಕೆ ಬಾಹ್ಯ ಹಸ್ತಕ್ಷೇಪವೇ ಕಾರಣ: ಅಜೆರ್ಬೈಜಾನ್ ಏರ್ಲೈನ್ಸ್
BREAKING: ಪಂಜಾಬ್ ನಲ್ಲಿ ಖಾಸಗಿ ಬಸ್ ಉರುಳಿ ಬಿದ್ದು ಭೀಕರ ಅಪಘಾತ: 8 ಮಂದಿ ಸಾವು, ಹಲವರಿಗೆ ಗಾಯ