ಬೆಂಗಳೂರು: ನಾಳೆ ದೇಶಾದ್ಯಂತ ಅಣಕು ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ. ದೇಶದ ಕೆರೆಗ ನಾಳೆ ಪ್ರತಿಯೊಬ್ಬರು ಓಗೋಡುವಂತೆ ಬಿಜೆಪಿ ಮುಖಂಡ ಪ್ರಕಾಶ್ ಶೇಷರಾಘವಾಚಾರ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, 1971 ರ ಯುದ್ಧ ಘೋಷಣೆಯಾದಾಗ ಸಂಘದ ಸ್ವಯಂಸೇವಕರಾದ ನಮಗೆಲ್ಲಾ ಸಭೆ ಕರೆಯಲಾಗಿತ್ತು. ವಿಕ್ರಮ ಸಂಪಾದಕರಾಗಿದ್ದ ಬೆ.ಸು.ನಾ ಮಲ್ಯರು ಈ ಸಭೆಯನ್ನು ತೆಗೆದುಕೊಂಡರು. ಯುದ್ಧದ ಹಿನ್ನಲೆಯನ್ನು ವಿವರಿಸಿ ಸರ್ಕಾರದೊಂದಿಗೆ ನಾವೆಲ್ಲರೂ ನಿಲ್ಲಬೇಕು ಮತ್ತು ಏನೇ ಸೂಚನೆ ಬಂದರು ಅದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದಿದ್ದಾರೆ.
ಬ್ಲಾಕ್ ಔಟ್ ಮಾಡಲಾಗುತ್ತದೆ ಆ ವೇಳೆ ಪ್ರತಿಯೊಬ್ಬರು ಅದನ್ನು ಪಾಲಿಸುವಂತೆ ಮಾಡಬೇಕು ಅದು ನಮ್ಮ ಕರ್ತವ್ಯ ಎಂದು ಸೂಚಿಸಿದರು. ಪ್ರಧಾನಿ ಇಂದಿರಾಗಾಂಧಿಯವರು ಕೈಗೊಳ್ಳುವ ತೀರ್ಮಾನಕ್ಕೆ ಸಂಘದ ಸಂಪೂರ್ಣ ಬೆಂಬಲ ಸಹಕಾರ ಘೋಷಿಸಲಾಗಿತ್ತು. ಆ ದಿನಗಳು ಅತ್ಯಂತ ರೋಮಾಂಚಕಾರಿಯಾಗಿತ್ತು. ಸೈರನ್ ಊದಿದ ಕೂಡಲೇ ರಸ್ತೆ ದೀಪಗಳು ಆರಿಸಲಾಗುತ್ತಿತ್ತು. ಮನೆಗಳ ದೀಪ ಬಂದಾಗುತ್ತಿತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.
ಯಾರ ಮನೆಯಲ್ಲಿ ಸಣ್ಣ ದೀಪವಿದ್ಜರು ಅದನ್ನು ಆರಿಸಲು ಸ್ವಯಂಸೇವಕರು ಹಾಗೂ ಬಡಾವಣೆಯ ಹುಡುಗರು ಯುದ್ದ ಭೂಮಿಯ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಕಡು ಕತ್ತಲೆಯ ರಸ್ತೆ ಮನೆಗಳು ಎಲ್ಲೆಡೆ ಅಂಧಕಾರ ಓಹೋ ಅದನ್ನು ವರ್ಣಿಸಲು ಸಾಧ್ಯವಿಲ್ಲ. ನಾಳೆ 53 ವರ್ಷಗಳ ತರುವಾಯ ಅದೇ ದೃಶ್ಯದ ಪುನರಾವರ್ತನೆಗೆ ವೇದಿಕೆ ಸಜ್ಜಾಗಿದೆ. ಉತ್ಸಾಹ ಕುಂದಿಲ್ಲ ಈ ರೋಮಾಂಚಕಾರಿ ಗಳಿಗೆಯನ್ನು ಎದುರು ನೋಡುತ್ತಿದ್ದೇನೆ. ದೇಶದ ಕರೆಗೆ ನಾಳೆ ಪ್ರತಿಯೂಬ್ಬರು ಓಗೂಡಿ ಎಂಬುದೆ ವಿನಂತಿಸಿದ್ದಾರೆ.
1971 ರ ಯುದ್ಧ ಘೋಷಣೆಯಾದಾಗ ಸಂಘದ ಸ್ವಯಂಸೇವಕರಾದ ನಮಗೆಲ್ಲಾ ಸಭೆ ಕರೆಯಲಾಗಿತ್ತು.
ವಿಕ್ರಮ ಸಂಪಾದಕರಾಗಿದ್ದ ಬೆ.ಸು.ನಾ ಮಲ್ಯರು ಈ ಸಭೆಯನ್ನು ತೆಗೆದುಕೊಂಡರು.
ಯುದ್ಧದ ಹಿನ್ನಲೆಯನ್ನು ವಿವರಿಸಿ ಸರ್ಕಾರದೊಂದಿಗೆ ನಾವೆಲ್ಲರೂ ನಿಲ್ಲಬೇಕು ಮತ್ತು ಏನೇ ಸೂಚನೆ ಬಂದರು ಅದನ್ನು ಚಾಚೂ ತಪ್ಪದೆ ಪಾಲಿಸಬೇಕು
ಬ್ಲಾಕ್ ಔಟ್ ಮಾಡಲಾಗುತ್ತದೆ ಆ ವೇಳೆ…
— Prakash Sesharaghavachar 🇮🇳 (@sprakaashbjp) May 6, 2025
BIG NEWS: ನಾಳೆ ಸಂಜೆ ಇಡೀ ಬೆಂಗಳೂರಿನಾದ್ಯಂತ ‘ಲೈಟ್ ಆಫ್’: ಆಪರೇಷನ್ ಅಭ್ಯಾಸ್ ಹೆಸರಲ್ಲಿ ‘ಮಾಕ್ ಡ್ರಿಲ್’
BIG NEWS: KAS ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: KPSC ಸ್ಪಷ್ಟನೆ