ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಶನಿವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ರಮೇಶ್ ಬಿಧುರಿ, ಹಮಾಸ್ ಮಾದರಿಯ ದಾಳಿಯನ್ನು “ಇಸ್ರೇಲ್ ಮಾದರಿಯ ಪ್ರತೀಕಾರ” ವಾಗಿ ಎದುರಿಸಲಾಗುವುದು ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಸುಂದರವಾದ ಪಟ್ಟಣ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ದೆಹಲಿಯಲ್ಲಿ ನಡೆದ ‘ಜನ ಆಕ್ರೋಶ್ ರ್ಯಾಲಿ’ಯಲ್ಲಿ ರಮೇಶ್ ಬಿಧುರಿ ಸೇರಿದಂತೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಮತ್ತು ಇತರರು ಭಾಗವಹಿಸಿದ್ದರು.
“ಹಮಾಸ್ ಮಾದರಿಯ ದಾಳಿ ನಡೆದರೆ, ಇಸ್ರೇಲ್ ಮಾದರಿಯ ಸೇಡು ತೀರಿಸಿಕೊಳ್ಳಲಾಗುವುದು… ಅವರಿಗೆ ಅಂತಹ ಶಿಕ್ಷೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ಅವರು ಊಹಿಸಲೂ ಸಾಧ್ಯವಿಲ್ಲ ” ಎಂದು ಬಿಧುರಿ ಹೇಳಿದರು