ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ( Supreme Court ) ಉಗಿದಿದ್ದನ್ನೂ ಸಾಧನೆ ಎನ್ನುವಂತೆ ಹೇಳಿಕೊಳ್ಳುವಂತೆ ಬಿಜೆಪಿ ಮಾಡುತ್ತಿದೆ. ಇದು ಬಿಜೆಪಿಯ ನಿರ್ಲಜ್ಜತನವೇ ಸರಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಗುಡುಗಿದೆ.
ಇಂದು ಎಕ್ಸ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ( Karnataka Congress ), ಹಿಂದೆ ಬರ ಪರಿಹಾರದ ಕುರಿತಾದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಅವರು “ಕೊಡುವುದೆಲ್ಲ ಕೊಟ್ಟಾಗಿದೆ, ಯಾವುದೇ ಬಾಕಿ ಇಲ್ಲ“ ಎಂದು ಉತ್ತರಿಸಿದ್ದರು. ನಮ್ಮ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತದಿದ್ದರೆ, ಸುಪ್ರೀಂ ಕೋರ್ಟ್ ನಿರ್ದೇಶನ ನೀಡದೆ ಇದ್ದರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ನೀಡದೆ ವಂಚಿಸುತ್ತಿತ್ತು, ಈಗಲೂ ಕಾಲು ಬಾಗಕ್ಕಿಂತ ಕಡಿಮೆ ಹಣ ನೀಡಿ ವಂಚಿಸಿದೆ ಎಂಬುದಾಗಿ ಕಿಡಿಕಾರಿದೆ.
ಮಾಡಿದ ವಂಚನೆಯನ್ನೂ ಸಾಧನೆ ಎಂದು ಹೇಳಿಕೊಳ್ಳುವ ಬಂಡತನ ಬಿಜೆಪಿಗೆ ಮಾತ್ರ ಸಾಧ್ಯವಾಗುತ್ತದೆ! ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ನಂತರ ಯಾವುದೇ ಸರ್ಕಾರ ಯಾವುದೇ ಘೋಷಣೆ ಮಾಡುವಂತಿಲ್ಲ, ಹೀಗಿದ್ದೂ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ, ಚುನಾವಣಾ ಆಯೋಗದ ಅನುಮತಿಯಂತೆ ಬರ ಪರಿಹಾರ ಘೋಷಣೆಯಾಗಿದೆ ಎಂದಿದೆ.
ನೀತಿ ಸಂಹಿತೆ ಜಾರಿಯಾದ ನಂತರ ನಡೆದ ಸರ್ಕಾರದ ಬೆಳವಣಿಗೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ, ಹೀಗಿದ್ದೂ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಜರುಗಿಸಬೇಕು, ಬರ ಪರಿಹಾರದ ಬಗ್ಗೆ ಬಿಜೆಪಿ ಹೇಳಿಕೆ ನೀಡುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದೆ.
ಸುಪ್ರೀಂ ಕೋರ್ಟ್ ಉಗಿದಿದ್ದನ್ನೂ ಸಾಧನೆ ಎನ್ನುವಂತೆ ಹೇಳಿಕೊಳ್ಳುವ ನಿರ್ಲಜ್ಜತನ @BJP4Karnataka ಗೆ ಮಾತ್ರ ಇರುವುದು.
ಹಿಂದೆ ಬರ ಪರಿಹಾರದ ಕುರಿತಾದ ಪ್ರಶ್ನೆಗೆ @nsitharaman ಅವರು “ಕೊಡುವುದೆಲ್ಲ ಕೊಟ್ಟಾಗಿದೆ, ಯಾವುದೇ ಬಾಕಿ ಇಲ್ಲ“ ಎಂದು ಉತ್ತರಿಸಿದ್ದರು.
ನಮ್ಮ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತದಿದ್ದರೆ, ಸುಪ್ರೀಂ… pic.twitter.com/nxMMjGfdwj
— Karnataka Congress (@INCKarnataka) April 28, 2024
ಕಡಬದಲ್ಲಿ ಮತದಾನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ಕಾಂಗ್ರೆಸ್ ರಾಜಕುಮಾರ ನಮ್ಮ ಮಹಾರಾಜರನ್ನ ಅವಮಾನಿಸ್ತಾರೆ, ನವಾಬರ ದೌರ್ಜನ್ಯ ಮರೆತು ಬಿಡ್ತಾರೆ : ಪ್ರಧಾನಿ ಮೋದಿ