Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ನಾಲ್ವರು ಯುವತಿಯರ ಮೇಲೆ ಹಲ್ಲೆ, ಎಳೆದೊಯ್ದು, ಬೆರಳನ್ನು ಕಚ್ಚಿದ ಯುವಕರ ಗುಂಪು

07/06/2025 9:07 AM

ಸಿಂಧೂ ನದಿ ನೀರು ಒಪ್ಪಂದವನ್ನು ಪುನಃಸ್ಥಾಪಿಸಿ, ದಯವಿಟ್ಟು ನೀರು ಬಿಡಿ: ಭಾರತಕ್ಕೆ ಪತ್ರ ಬರೆದು ಪಾಕಿಸ್ತಾನ ಆಗ್ರಹ | Indus Waters Treaty

07/06/2025 9:01 AM

ಬೆಂಗಳೂರು ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಹರತಾಳು ಹಾಲಪ್ಪ ಆಗ್ರಹ

07/06/2025 8:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ : ಸಿಎಂ ಸಿದ್ದರಾಮಯ್ಯ
Uncategorized

ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ : ಸಿಎಂ ಸಿದ್ದರಾಮಯ್ಯ

By kannadanewsnow0729/02/2024 2:22 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಮುಖ್ಯಮಂತ್ರಿಗಳು 15ನೇ ಹಣಕಾಸು ಆಯೋಗ ಬಂದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಾನು 14 ನೇ ಹಣಕಾಸು ಆಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೆ. ನಮಗೆ ಇಷ್ಟೊಂದು ಅನ್ಯಾಯ ಆಗಲಿಲ್ಲ. ಪರಿಹಾರ ಜೂನ್‌ 2022 ಸ್ಥಗಿತಗೊಳಿಸಲಾಗಿದೆ. ಹಿಂದೆ ಹೆಚ್ಚುವರಿ ಅನುದಾನ ಕೊಟ್ಟಿದ್ದೇವೆಂದು ಈಬಾರಿ ಕಡಿತಗೊಳಿಸಿದ್ದಾರೆ. ಇಷ್ಟೆಲ್ಲ ಅನ್ಯಾಯವಾಗುತ್ತಿದೆ ಎಂದರೂ ಅವರು ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರಲ್ಲಾ? ನೀವು ಕನ್ನಡಿಗರಾ? ನಾಡ ದ್ರೋಹಿಗಳು ಎಂದು ಹೇಳಬೇಕಾಗುತ್ತದೆ. ಎಂದರು.

ನಾವೂ ರಾಮನ ಭಕ್ತರೇ : ಮಾತೆತ್ತಿದರೆ ಜೈಶ್ರೀರಾಮ್‌ ಅನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ. ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ.

ನಾವು ರಾಷ್ಟ್ರಭಕ್ತರು. ಈ ದೇಶದ ಜನರನ್ನು ಪ್ರೀತಿಸುವವರು. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು ಕಾಂಗ್ರೆಸ್‌ ಪಕ್ಷದವರು. ಇವರ ತರ ಬುರ್ಖಾ ಹಾಕಿದವರು, ಟೋಪಿ ಹಾಕಿದವರು ಬರಬೇಕಾಗಿಲ್ಲ ಎನ್ನುವುದಿಲ್ಲ.

ಬೆಲೆ ಏರಿಕೆ, ಸಂಕಷ್ಟಕ್ಕೆ ಗ್ಯಾರಂಟಿ ಉತ್ತರ : ಸಬ್‌ ಕಾ ಸಾಥ್‌ ಎಂದವರು ಪೆಟ್ರೋಲ್‌ ಡೀಸೆಲ್‌ ಬೆಲೆ, ಗ್ಯಾಸ್‌ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಸಿದರು. ಬಡವರಿಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ನಾಲ್ಕರಿಂದ ಐದು ಸಾವಿರ ರೂ. ಕೊಡ್ತಾ ಇದ್ದೀವಿ. 1.2 ಕೋಟಿ ರೂ. ಕುಟುಂಬಗಳು ಅಂದರೆ ಸುಮಾರು 4.5 ಕೋಟಿ ಜನರಿಗೆ ಕೊಡ್ತಾ ಇದ್ದೀವಿ.

ಈಗ ಅವರು ನಮ್ಮನ್ನು ಕಾಪಿ ಮಾಡುತ್ತಿದ್ಧಾರೆ. ಈಗ ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಈ ಮೋದಿ ಗ್ಯಾರಂಟಿಯಲ್ಲಿ ಶೇ. 50 ರಿಂದ 60 ರಷ್ಟು ಪಾಲು ಕರ್ನಾಟಕದ್ದೂ ಇದೆ. ಇವರು ಕನ್ನಡಿಗರಿಗೆ ದ್ರೋಹ ಮಾಡುತ್ತಿಲ್ಲವೇ?25 ಜನ ಎಂಪಿಗಳು ಗೆದ್ದು ಹೋಗಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಿರುವ ಅನುದಾನ ಕೇಳಿದ್ದಾರೆಯೇ? ಅವರಿಗೆ ತಾಕತ್ತಿಲ್ಲ. ಬರ ಪರಿಹಾರಕ್ಕೆ ಪ್ರಸ್ತಾವನೆ ಅಕ್ಟೋಬರ್‌ ನಲ್ಲಿಯೇ ಕಳಿಸಿದ್ದೆವು. ನೇರವಾಗಿ ಪ್ರಧಾನಮಂತ್ರಿಯವರು ಹಾಗೂ ಅಮಿತ್‌ ಷಾ ಅವರನ್ನು ಭೇಟಿ ಮಾಡಿದೆ. 240 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಪರಿಹಾರ ನೀಡುವಂತೆ ಮನವಿ ಮಾಡಿದೆ. ಡಿಸೆಂಬರ್‌ 23ರಂದು ಸಭೆ ಕರೆಯುವುದಾಗಿ ಕೇಂದ್ರ ಸಚಿವರು ಹೇಳಿದರೂ ಈ ವರೆಗೆ ಸಭೆ ನಡೆಸಿಲ್ಲ. ನಾವು ತಾತ್ಕಾಲಿಕವಾಗಿ 33 ಲಕ್ಷ ರೈತರಿಗೆ ಪರಿಹಾರ ವಿತರಿಸಿದ್ದೇವೆ.

ಈ ಸಂಸದರು ಈ ಬಗ್ಗೆ ಮೌನ ವಹಿಸಿದ್ದಾರೆ. ಕರ್ನಾಟಕದ ಜನ ಇವರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು. ಶಿಕ್ಷಣ, ಆರೋಗ್ಯ ಇಲಾಖೆ, ಕಾನೂನು ಸುವ್ಯವಸ್ಥೆ, ರಸ್ತೆಗಳಿಗೆ, ನೀರಾವರಿ, ಪಿಂಚಣಿ, ಗ್ರಾಮೀಣಾಭಿವೃದ್ಧಿ ಎಲ್ಲ ವಲಯಗಳಿಗೂ ಅನುದಾನ ಹೆಚ್ಚಾಗಿಯೇ ಕೊಟ್ಟಿದ್ದೇವೆ.
ಕೇಂದ್ರ ಸರ್ಕಾರದಿಂದ ಹಣ ಬರುತ್ತದೆ ಎಂದು ಪದೇ ಪದೇ ಹೇಳುತ್ತಾರೆ. ಈ ಹಣ ಯಾರಿಂದ ಬರುತ್ತದೆ? ನಮ್ಮ ತೆರಿಗೆಯಿಂದ. ಆದ್ದರಿಂದಲೇ ನಾವು ಹೇಳುವುದು ನಮ್ಮ ತೆರಿಗೆ ನಮ್ಮ ಹಕ್ಕು.

ಸೆಸ್‌, ಸರ್ಚಾರ್ಜ್‌ ನಲ್ಲಿ ನಮಗೆ ಪಾಲು ಕೊಡುವುದಿಲ್ಲ. ಸೆಸ್‌, ಸರ್ಚಾರ್ಜ್‌ ಮೂಲ 5,52,000 ಕೋಟಿ ರೂ. ಸಂಗ್ರಹವಾಗಿದೆ. ಸೆಸ್‌ ಸರ್ಚಾರ್ಜ್‌ 1958 ರಿಂದ ವಿಧಿಸಲಾಗುತ್ತಿದೆ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ 1999 ರ ವರೆಗೆ ಸೆಸ್‌ ಸರ್ಚಾರ್ಜ್‌ ನಲ್ಲಿ ರಾಜ್ಯಕ್ಕೆ ಪಾಲು ದೊರೆಯುತ್ತಿದ್ದು. ಸಂವಿಧಾನ ತಿದ್ದುಪಡಿ ಮಾಡಿ ಇದನ್ನು ಸ್ಥಗಿತಗೊಳಿಸಲಾಯಿತು. ಕನಿಷ್ಠ ತೆರಿಗೆಯ 50% ಆದರೂ ನಮಗೆ ಕೊಡಬೇಕು. 4.71% ರಿಂದ 3.64% ಗೆ ಕಡಿಮೆಯಾಗಿದೆ.. ಇದರ ಅರಿವಾಗಿಯೇ 15ನೇ ಹಣಕಾಸು ಆಯೋಗ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದ್ದು. ನಾವು ಸಾಲ ಮಾಡಿರುವುದು ನಿಜ. ಆದರೆ ಅದು ಜಿ.ಎಸ್.ಡಿ.ಪಿ.ಯ ಶೇ. 23.68 ರಷ್ಟಿದೆ. ಅಂದರೆ ಶೇ. 25ರ ಒಳಗೇ ಇದೆ. ವಿತ್ತೀಯ ಕೊರತೆ 2.95% ಇದೆ. ರಾಜಸ್ವ ಉಳಿತಾಯ ಇಲ್ಲ, ನಿಜ. ಆದರೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 5.1% ರಷ್ಟಿದೆ.
ಎರಡು ವರ್ಷದಲ್ಲಿ ಉಳಿತಾಯ ಬಜೆಟ್: ಸಿಎಂ ಭರವಸೆ
ರಾಜ್ಯ ಸರ್ಕಾರ ಒಂದೇ ಒಂದು ಬಾರಿ 2020-21 ರಲ್ಲಿ ಶೇ 3 ರ ಮಿತಿ ದಾಟಿದೆ. ಇನ್ನು ಎರಡು ವರ್ಷದಲ್ಲಿ ಆಯವ್ಯಯವನ್ನು ರಾಜಸ್ವ ಉಳಿತಾಯಕ್ಕೆ ತಂದೇ ತರುವುದಾಗಿ ಸದನಕ್ಕೆ ಭರವಸೆ ನೀಡುತ್ತೇನೆ.
2018 ರಲ್ಲಿ ನನ್ನ ಅವಧಿಯ ಮುಕ್ತಾಯದ ವೇಳೆ 2.42 ಲಕ್ಷ ಕೋಟಿ ಸಾಲ ಇದ್ದು, 2023 ಮಾರ್ಚ್‌ ವೇಳೆಗೆ 5.23 ಲಕ್ಷ ಕೋಟಿ ಇದೆ. ಇವರು ನಾಲ್ಕು ವರ್ಷದಲ್ಲಿ 2,81,00 ಕೋಟಿ ರೂ. ಮಾಡಿದ್ದಾರೆ. ಇದಲ್ಲದೇ ಜಿ.ಎಸ್.ಟಿ. ಪರಿಹಾರ ಸಾಲ 3,000 ಕೋಟಿ ರೂ. ಮಾಡಿದ್ದಾರೆ.

ಕೇಂದ್ರದಲ್ಲಿ 2013-14 ರಲ್ಲಿ 53,10,000 ಕೋಟಿ ಸಾಲ ಇತ್ತು. ಈಗ 183,67,132 ಕೋಟಿ ಸಾಲ ಇದೆ. ನರೇಂದ್ರ ಮೋದಿಯವರ ಅವಧಿಯಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ.. ದೇಶವನ್ನು ಸಾಲಗಾರರನ್ನಾಗಿ ಮಾಡಿದವರು ಯಾರು? ನರೇಂದ್ರ ಮೋದಿಜಿ, ಬಿಜೆಪಿಯವರು ಅಲ್ಲವೇ?. ನಾವು ಬಡವರಿಗೆ, ರೈತರಿಗೆ, ಹೆಣ್ಣುಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಭೌತಿಕ ಆರೋಗ್ಯ, ಆರ್ಥಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ- ಈ ನಾಲ್ಕು ಆಯಾಮಗಳಲ್ಲಿ ಕಾರ್ಯನಿರ್ವಹಿಸಲಿದ್ದೇವೆ.

I have built two Ram temples in our village. Am I not a devotee of Lord Ram: Siddaramaiah ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ : ಸಿಎಂ ಸಿದ್ದರಾಮಯ್ಯ
Share. Facebook Twitter LinkedIn WhatsApp Email

Related Posts

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ..!

27/05/2025 7:00 PM2 Mins Read

ವಿದೇಶಗಳಲ್ಲಿ `ITI’ ಪದವಿಗೆ ಹೆಚ್ಚಿನ ಗೌರವವಿಲ್ಲ : ಅನಿವಾಸಿ ಭಾರತೀಯರ ಪೋಸ್ಟ್ ವೈರಲ್.!

19/05/2025 11:57 AM2 Mins Read
Recent News

Shocking: ನಾಲ್ವರು ಯುವತಿಯರ ಮೇಲೆ ಹಲ್ಲೆ, ಎಳೆದೊಯ್ದು, ಬೆರಳನ್ನು ಕಚ್ಚಿದ ಯುವಕರ ಗುಂಪು

07/06/2025 9:07 AM

ಸಿಂಧೂ ನದಿ ನೀರು ಒಪ್ಪಂದವನ್ನು ಪುನಃಸ್ಥಾಪಿಸಿ, ದಯವಿಟ್ಟು ನೀರು ಬಿಡಿ: ಭಾರತಕ್ಕೆ ಪತ್ರ ಬರೆದು ಪಾಕಿಸ್ತಾನ ಆಗ್ರಹ | Indus Waters Treaty

07/06/2025 9:01 AM

ಬೆಂಗಳೂರು ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಹರತಾಳು ಹಾಲಪ್ಪ ಆಗ್ರಹ

07/06/2025 8:47 AM

‘ಭಾರತವು ರಾಜತಾಂತ್ರಿಕವಾಗಿ ಪ್ರಬಲ ಮಿತ್ರರಾಷ್ಟ್ರಗಳಿಂದ ಏಕಾಂಗಿಯಾಗಿದೆ’: ರಷ್ಯಾ ಹೇಳಿಕೆಯ ನಂತರ ಕಾಂಗ್ರೆಸ್

07/06/2025 8:45 AM
State News
KARNATAKA

ಬೆಂಗಳೂರು ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ವಿರುದ್ಧ ಕ್ರಮಕ್ಕೆ ಹರತಾಳು ಹಾಲಪ್ಪ ಆಗ್ರಹ

By kannadanewsnow0907/06/2025 8:47 AM KARNATAKA 1 Min Read

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತ ದುರಂತದಲ್ಲಿ ಸರ್ಕಾರ ನುಣುಚಿಕೊಳ್ಳಲು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ. ಈ ದುರಂತ…

ಈ ಮಂತ್ರವನ್ನು ಪಠಿಸಿ, ನಿಮ್ಮೊಂದಿಗೆ ಯಾವಾಗಲೂ ಕುಲದೇವತೆ ಇರುತ್ತದೆ, ನಿಮ್ಮನ್ನು ರಕ್ಷಿಸುತ್ತದೆ

07/06/2025 8:35 AM

BREAKING : ಬೆಂಗಳೂರು `ಕಾಲ್ತುಳಿತ ದುರಂತ’ ಪ್ರಕರಣ : ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು `FIR’ ದಾಖಲು.!

07/06/2025 8:02 AM

BREAKING : ಬೆಂಗಳೂರು `ಕಾಲ್ತುಳಿತ ದುರಂತ’ ಪ್ರಕರಣ : ಮಾನವ ಹಕ್ಕುಗಳ ಆಯೋಗದಿಂದ 2 ‘ಸುಮೋಟೋ ಕೇಸ್’ ದಾಖಲು.!

07/06/2025 7:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.