ಬೆಂಗಳೂರು : ಬಿಜೆಪಿ ಸರ್ಕಾರವೇ 50:50 ನಿಯಮ ರೂಪಿಸಿ ಕಾನೂನು ಬದ್ಧವಾಗಿ ಪರ್ಯಾಯ ನಿವೇಶನ ನೀಡಿತ್ತು ಎಂದು ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣದ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನನ್ನ ಪತ್ನಿಗೆ ತವರು ಮನೆಯಿಂದ ಬಳುವಳಿಯಾಗಿ ಬಂದ ಕೆಸರೆ ಸಮೀಪದ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸೈಟ್ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿತ್ತು. ಅದಕ್ಕೆ ಪರ್ಯಾಯ ಜಮೀನು ನೀಡಿದ್ದು ಕೂಡ ಬಿಜೆಪಿ ಸರ್ಕಾರದ ಕಾಲದಲ್ಲಿ, ನಾನು ಅಧಿಕಾರದಲ್ಲಿ ಇದ್ದಾಗ ಜಮೀನು ತೆಗೆದುಕೊಳ್ಳಲು ಹೋಗಲಿಲ್ಲ. ಬಿಜೆಪಿ ಸರ್ಕಾರವೇ 50:50 ನಿಯಮ ರೂಪಿಸಿ ಕಾನೂನು ಬದ್ಧವಾಗಿ ಪರ್ಯಾಯ ನಿವೇಶನ ನೀಡಿದೆ. ಇದರಲ್ಲಿ ತಪ್ಪೇನಿದೆ?