ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು (Privilege Motion) ಮಂಡಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗುರುವಾರ ಹೇಳಿದ್ದಾರೆ. ಆದರೆ, ಗಾಂಧಿ ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸಬೇಕು ಎಂದು ಕೋರಿ ತಾವು ‘ಸಬ್ಸ್ಟಾಂಟಿವ್ ಮೋಷನ್’ (Substantive Motion – ಪ್ರಮುಖ ನಿರ್ಣಯ) ಸಲ್ಲಿಸಿರುವುದನ್ನು ಅವರು ಖಚಿತಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ದುಬೆ, ಜಾರ್ಜ್ ಸೊರೊಸ್ ಅವರಂತಹ ಶಕ್ತಿಗಳ ಬೆಂಬಲದೊಂದಿಗೆ ರಾಹುಲ್ ಗಾಂಧಿ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ತಾವು ನಿರ್ಣಯವನ್ನು ಮಂಡಿಸಿದ್ದೇನೆ ಎಂದು ಹೇಳಿದರು.
“ಸೊರೊಸ್ ಅವರಂತಹ ಶಕ್ತಿಗಳ ಸಹಾಯದಿಂದ ರಾಹುಲ್ ಗಾಂಧಿ ಅವರು ಹೇಗೆ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಬಗ್ಗೆ ನಾನು ಇಂದು ಲೋಕಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ. ಈ ವಿಷಯವನ್ನು ಚರ್ಚಿಸಬೇಕು, ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಆಜೀವ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಎಂದು ನಾನು ನಿರ್ಣಯದಲ್ಲಿ ಹೇಳಿದ್ದೇನೆ” ಎಂದು ದುಬೆ ಹೇಳಿದರು








