ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಂತ ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಮಾಜಿ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಅವರ ನೇತೃತ್ವದ ನಿಯೋಗವು ರಾಜ್ಯ ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿ, ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ ಅವರ ವಿರುದ್ಧ ದೂರು ನೀಡಿದೆ.
‘ಬಿಜೆಪಿ’ ಅಧಿಕಾರಕ್ಕೆ ಬಂದ್ರೆ ತಾಯಂದಿರು ‘ಗಂಡ-ಮಕ್ಕಳ’ನ್ನ ಕಳೆದುಕೊಳ್ತಾರೆ: ಯತೀಂದ್ರ ವಿವಾದ್ಮಕ ಹೇಳಿಕೆ
ಮೈಸೂರು: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲಾ ಧರ್ಮದ ತಾಯಂದಿರು ಗಂಡ-ಮಕ್ಕಳನ್ನು ಕಳೆದುಕೊಳ್ತಾರೆ ಎಂಬುದಾಗಿ ಡಾ.ಯತೀಂದ್ರ ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಮೈಸೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸೋ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ, ಜನರ ಟೀಕೆಗೆ ಗುರಿಯಾಗಿದ್ದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಳೆದ 70 ವರ್ಷಗಳಿಂದ ರಾಜ್ಯದಲ್ಲಿ ವಿವಿಧ ಪಕ್ಷಗಳು ಆಡಳಿತ ನಡೆಸಿದ್ದಾವೆ. ಯಾವಾಗ್ಲೂ ಹಿಂದೂಗಳಿಗೆ ಅನ್ಯಾಯ ಆಗಿಲ್ಲ. ಈ ಸಲ ಏನಾದ್ರೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದ್ರೇ ಹಿಂದೂ ಮಹಿಳೆಯರ ಮಂಗಳಸೂತ್ರ ಮಾತ್ರವಲ್ಲ, ಎಲ್ಲಾ ಧರ್ಮದ ತಾಯಂದಿರು ತಮ್ಮ ಮಕ್ಕಳು ಹಾಗೂ ಗಂಡಂದಿರನ್ನು ಕಳೆದುಕೊಳ್ತಾರೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದಕ್ಕೆ ಕಾರಣ ದೇಶದಲ್ಲಿ ಬಿಜೆಪಿ ಕೋಮುಗಲಭೆ, ದೊಂಬಿ, ಗಲಾಟೆ ಸೃಷ್ಠಿ ಮಾಡ್ತಿದೆ. ಒಬ್ಬರನ್ನೊಬ್ಬರನ್ನು ಬಡಿದಾಡಿಕೊಂಡು ಸಾಯುವಂತೆ ಮಾಡ್ತಾರೆ. ಇದು ಇಡೀ ಸಮಾಜ ಅಧಃಪತನಕ್ಕೆ ಹೋಗೋದಕ್ಕೆ ಕಾರಣವಾಗಲಿದೆ ಎಂಬುದಾಗಿ ಕಿಡಿಕಾರಿದ್ದರು. ಈ ವಿವಾದಾತ್ಮಕ ಹೇಳಿಕೆ ಹಿನ್ನಲೆಯಲ್ಲೇ ಯತೀಂದ್ರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬೆಲೆ ಏರಿಕೆ, ಜಿಎಸ್ಟಿ ಹೊರೆ ಮೋದಿ ಅವರ ನಿಜವಾದ ಗ್ಯಾರಂಟಿ: ಡಿ.ಕೆ. ಸುರೇಶ್
WATCH VIDEO: ಕುಡಿದ ಮತ್ತಿನಲ್ಲಿ ಮಗನನ್ನೇ ಟೆರೇಸ್‌ನಿಂದ ತಳ್ಳಿದ ಅಪ್ಪ, ವಿಡಿಯೋ ವೈರಲ್!