ಬೆಂಗಳೂರು: ಮೋದಿ ಮೋದಿ ಎನ್ನುವಂತ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬುದಾಗಿ ಹೇಳಿಕೆ ನೀಡಿದಂತ ಸಚಿವ ಶಿವರಾಜ ತಂಡರಗಿ ವಿರುದ್ಧ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಈ ಕುರಿತಂತೆ ಇಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್, ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ, ರಾಜ್ಯ ಸಂಚಾಲಕ ವಸಂತ್ ಕುಮಾರ್ ದೂರು ನೀಡಿದ್ದಾರೆ.
ಸಚಿವ ಶಿವರಾಜ ತಂಡರಗಿ ವಿರುದ್ಧ ನೀಡಿರುವಂತ ದೂರಿನಲ್ಲಿ, ದಿನಾಂಕ 25.03.2024ರ ವಿಜಯವಾಣಿ ಪತ್ರಿಕೆಯ ಪುಟ ಸಂಖ್ಯೆ 7ಸಿ ರಲ್ಲಿ ವರದಿಯಾಗಿರುವಂತೆ ಭಾನುವಾರ ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ “10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ದೊರೆಯಬೇಕಿತ್ತು ಯುವಕರು ಉದ್ಯೋಗ ನೀಡಿ ಎಂದರೆ ಪಕೋಡ ಮಾರಲು ಹೋಗಿ ಎನ್ನುತ್ತಾರೆ ಎಂದು ಹೇಳಿದೆ.
ಇದರಿಗೆ ಚುನವಣೆಯಲ್ಲಿ ಮತ ಕೇಳಲು ನಾಚಿಕೆಯಾಗಬೇಕು “ವಿದ್ಯಾರ್ಥಿಗಳು, ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಿರಿ” ಎಂದು ನಮ್ಮ ಪಕ್ಷದ ಮತದಾರರ ವಿರುದ್ಧ ಪ್ರಚೋದನಾತ್ಮಕ ಮಾತುಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಯುವ ಮತದಾರರ ಮೇಲೆ ಎತ್ತಿ ಕಟ್ಟಿ ಮತ್ತು ದ್ವೇಷ ಭಾವನೆ ಮೂಡುವಂತೆ ಮಾಡಿ ಮತದಾರರಿಗೆ ಹಲ್ಲೆ ಮಾಡುವಂತೆ ಪ್ರಚೋದಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಇಂತಹ ಹೇಳಿಕೆಗಳಿಂದ ಯುವ ಮತದಾರರು ಆಂತಕಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಮತ್ತು ಮತದಾನದಿಂದ ದೂರ ಉಳಿಯುವ ಸಂಭವವು ಹೆಚ್ಚಿರುತ್ತದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ. ಆದ ಕಾರಣ ನೀವು ಸದರಿ ಸಚಿವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಂಡು ಅವರನ್ನು ಚುನಾವಣಾ ಪ್ರಕ್ರಿಯೆಯಿಂದ ಹಾಗೂ ಕಾಂಗ್ರೆಸ್ ಪಕ್ಷದ ಪರ ಚುನಾವಣಪಚಾರದಿಂದ ನಿರ್ಭಂಧಿಸಬೇಕೆಂದು ಆಗ್ರಹಿಸಿದ್ದಾರೆ.
‘ಸಚಿವರ ಕಪಾಳ’ಕ್ಕೆ ಜನತೆ ‘ಲೋಕಸಭಾ ಚುನಾವಣೆ’ಯಲ್ಲಿ ಬಾರಿಸುವುದು ಶತಸಿದ್ಧ – BJP
BREAKING: ಯಾದಗಿರಿಯಲ್ಲಿ ‘SSLC ಪರೀಕ್ಷೆ’ಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ: ಓರ್ವ ‘ಶಿಕ್ಷಕ ಅಮಾನತು’