ಕೊಪ್ಪಳ: ದಲಿತ ಮಹಿಳೆ ಮೃತಪಟ್ಟಿದ್ದಾರೆ. ಬಡ ಕುಟುಂಬದ ತಾಯಿ ಮೃತಪಟ್ಟರೂ, ಶಿಶುಗಳ ಸಾವಾದರೂ ಮಾನವೀಯತೆ ಮೆರೆದಿಲ್ಲ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಆರೋಪಿಸಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಡೂರು ಗ್ರಾಮದ ಬಾಣಂತಿ ಶ್ರೀಮತಿ ರೇಣುಕಾ ಹಿರೇಮನಿ ಎಂಬ ಸಂತ್ರಸ್ತೆ ಮನೆಗೆ ರಾಜ್ಯ ಸತ್ಯ ಶೋಧನಾ ಸಮಿತಿಯ ತಂಡ ಭೇಟಿ ಮಾಡಿ ಸಂತ್ರಸ್ತೆಯ ಗಂಡ ಹಾಗೂ ಕುಟುಂಬಸ್ಥರಿಂದ ಮನೆಯ ವಿವರ ಪಡೆಯಿತು. ಇದೇವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರು, ಸಚಿವರು ಮನೆಗೆ ಭೇಟಿ ನೀಡಲಿಲ್ಲ ಎಂದು ಆಕ್ಷೇಪಿಸಿದರು.
ಕಲ್ಯಾಣ ಕರ್ನಾಟಕದಲ್ಲಿ 2 ವರ್ಷದಲ್ಲಿ 300 ಬಾಣಂತಿಯರ ಸಾವು ಸಂಭವಿಸಿದೆ. 2,500- 3 ಸಾವಿರ ಶಿಶುಗಳು ಸಾವನ್ನಪ್ಪಿವೆ. ಇದಕ್ಕೆಲ್ಲ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆಕ್ಷೇಪಿಸಿದರು. ಕಳಪೆ ಔಷಧಿಯೂ ಇನ್ನೊಂದು ಕಾರಣ ಎಂದು ಟೀಕಿಸಿದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ ಅವರು ಮಾತನಾಡಿ, ಪಿಎಚ್‍ಸಿಗಳಲ್ಲಿ ಶೇ 50ಕ್ಕೂ ಹೆಚ್ಚು ಸಿಬ್ಬಂದಿಗಳ ಕೊರತೆ ಇದೆ. ವೈದ್ಯಕೀಯ ಇಲಾಖೆಯಿಂದ ಸ್ಥಳೀಯವಾಗಿ ನಿಲ್ಲುವಂತೆ ಸೂಚನೆ ಇದ್ದರೂ ಅದೇ ಜಾಗದಲ್ಲಿ ನಿಲ್ಲುತ್ತಿಲ್ಲ ಎಂದು ದೂರಿದರು.
ಕೇಂದ್ರ ಸರಕಾರದ ಮಾತೃವಂದನಾ, ಜನನಿ ಸುರಕ್ಷಾ ಯೋಜನೆ- ಇವುಗಳನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ ಎಂದು ಆರೋಪಿಸಿದರು. ಕಳಪೆ ಗುಣಮಟ್ಟದ ಔಷಧಿ ಸರಬರಾಜಾಗುತ್ತಿದೆ ಎಂದು ಟೀಕಿಸಿದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮುಖಂಡ ಡಾ. ಬಸವರಾಜ್ ಕ್ಯಾವಟರ್, ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ್, ಎಂಎಲ್‍ಸಿ ಹೇಮಲತಾ ನಾಯಕ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ್, ಜಿಲ್ಲಾ ಉಪಾಧ್ಯಕ್ಷೆ ಡಾ. ಅರುಣಾ, ಮಹಿಳಾ ಮೋರ್ಚಾ ರಾಜ್ಯ ಖಜಾಂಚಿ ಶ್ರೀಮತಿ ವಿಜಯಲಕ್ಷ್ಮೀ ಕರೂರು, ವೈದ್ಯಕೀಯ ಪ್ರಕೋಷ್ಠದ ಡಾ. ಲಕ್ಷ್ಮಣ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಇದ್ದರು. ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಮಹಿಳಾ ಮೋರ್ಚಾ ಪದಾಧಿಕಾರಿಗಳು, ವೈದ್ಯಕೀಯ ಪ್ರಕೋಷ್ಠದ ಪ್ರತಿನಿಧಿಗಳೂ ಭಾಗವಹಿಸಿದ್ದರು.
‘ಸಾಹಿತಿ ನಾ.ಡಿಸೋಜ’ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ‘ಶಾಸಕ ಗೋಪಾಲಕೃಷ್ಣ ಬೇಳೂರು’
BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS