ತಿರುವನಂತಪುರ: ಒಮಿಕ್ರಾನ್ ಭೀತಿ ( Omicron Variant ) ಒಂದೆಡೆಯಾದ್ರೇ.. ಕೊರೋನಾ ಪ್ರಕರಣಗಳ ( Coronavirus ) ಸಂಖ್ಯೆಯಲ್ಲಿ ಹೆಚ್ಚಳ ಆತಂಕದ ಶಾಕ್ ಮತ್ತೊಂದೆಡೆ. ಇದರ ನಡುವೆ ಕೇರಳದಲ್ಲಿ ಕೊರೋನಾ ಜೊತೆ ಜೊತೆಗೆ ಈಗ ಹಕ್ಕಿ ಜ್ವರದ ಹೆಚ್ಚಾಗಿದ್ದು, ಅಲ್ಲಾಪುಜಾದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿಜ್ವರ ( bird flu ) ಹೆಚ್ಚಾಗಿ, ಸರ್ಕಾರ ಕೋಳಿ, ಬಾತುಕೋಳಿ, ಮೊಟ್ಟೆಗಳನ್ನು ನಾಶ ಮಾಡೋದಕ್ಕೆ ಸೂಚಿಸಿದೆ.
ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದ ಟೆಕ್ಕಿ ಆತ್ಮಹತ್ಯೆಗೆ ಶರಣು: ಡೆತ್ ನೋಟ್ ನಲ್ಲಿ ಏನ್ ಬರೆದಿದ್ದಾರೆ ಗೊತ್ತಾ.?
ಕೇರಳದ ಅಲ್ಲಾಪುಜಾದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರದ ( bird flu in Allapuzha’s Kuttanad region in Kerala ) ಹೊಸ ಪ್ರಕರಣಗಳನ್ನು ದೃಢಪಡಿಸಿವೆ. ಬಾಧಿತ ಪ್ರದೇಶಗಳಲ್ಲಿ ಕೋಳಿಗಳು ಮತ್ತು ಬಾತುಕೋಳಿಗಳನ್ನು ( hens and ducks ) ಕೊಲ್ಲಲು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ರಚಿಸಲಾಗಿದೆ.
MLC Election: ಮಂಡ್ಯದಲ್ಲಿ ಮತದಾನ ಆರಂಭಕ್ಕೂ ಮುನ್ನವೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ.!
ಅಲಪ್ಪುಳ ಜಿಲ್ಲೆಯ ತಕಾಜಿ ಪಂಚಾಯತ್ ಕುಟ್ಟನಾಡ್ ಪ್ರದೇಶದಲ್ಲಿ ರೈತನೊಬ್ಬ ಸಾಕಿದ್ದಂತ ಸಾವಿರಾರು ಬಾತುಕೋಳಿಗಳು ಸತ್ತನಂತರ ಮಾದರಿಗಳನ್ನು ಭೋಪಾಲ್ ನ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗ ಸಂಸ್ಥೆಗೆ ( Bhopal’s National Institute of High Security Animal Disease ) ಕಳುಹಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಬಾತುಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿರೋದಾಗಿ ದೃಢಪಟ್ಟಿದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಕೋಳಿ, ಬಾತುಕೋಳಿಗಳನ್ನು ನಾಶ ಮಾಡೋದಕ್ಕೆ ಜಿಲ್ಲಾಡಳಿತ ಸೂಚಿಸಿದೆ.
ಇದೇನ್ ಮನೆಯೋ ಅಥವಾ ಪೊಲೀಸ್ ಠಾಣೆಯೋ.? ‘ಪೊಲೀಸ್ ಠಾಣೆ’ಯಲ್ಲೇ ‘ತಂದೆಯ ಹುಟ್ಟುಹಬ್ಬ’ ಆಚರಿಸಿದ ಇನ್ಸ್ ಪೆಕ್ಟರ್.!
ಪ್ರಕರಣಗಳು ಪತ್ತೆಯಾದ ಕೇಂದ್ರಬಿಂದುವಿನ ಒಂದು ಕಿ.ಮೀ ಪ್ರದೇಶದಲ್ಲಿ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು ಮತ್ತು ಇತರ ಪಕ್ಷಿಗಳನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ.
ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಕೇಂದ್ರ ಬಿಂದುವಿನ 12 ಕಿ.ಮೀ ಸುತ್ತಳತೆಯಲ್ಲಿ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು, ಗೊಬ್ಬರ ಮತ್ತು ಇತರ ಕೋಳಿಗಳ ಚಲನೆಯ ಮೇಲೆ ನಿರ್ಬಂಧವನ್ನು ಹೇರಲಾಗಿದೆ. ಈ ವರ್ಷ ಕೇರಳದಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವುದು ಇದು ಎರಡನೇ ಬಾರಿ.