ಶಿವಮೊಗ್ಗ: ಜನವರಿ 15, 2025ರಂದು ನಡೆಯುವಂತ ಸಾಗರ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಬಿಂದು.ಬಿ ಅವರನ್ನು ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯ್ಕೆ ಮಾಡಿರುವುದಾಗಿ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಗರ ತಾಲೂಕು ಘಟಕವು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಸಾಗರ ತಾಲೂಕು ಮಟ್ಟದ 13ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜನವರಿ 15, 2025 ರಂದು ಸಾಗರದ ನಗರಸಭಾ ಆವರಣದಲ್ಲಿ ನಡೆಸಲು ನಿರ್ಧರಿಸಿದೆ ಎಂದು ಹೇಳಿದೆ.
ಜನವರಿ.4, 2025ರಂದು ಪೂರ್ವಭಾವಿಯಾಗಿ ಸಭೆಯನ್ನು ನಡೆಸಲಾಯಿತು. ಸೇವಾ ಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ನಡೆದಂತ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಭೆಯಲ್ಲಿ, ಬಿಂದು.ಬಿ ಅವರನ್ನು ಸಾಗರ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳದನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದೆ.
ಸೃಜನಶೀಲ ಬರವಣಿಗೆ, ಸಂದರ್ಶನ,ಮಾತುಗಾರಿಕೆ ಹಾಗೂ ವಿದ್ಯಾರ್ಥಿಯ ಈವರೆಗಿನ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಳ ಆಧಾರದ ಮೇಲೆ ಬಿಂದು.ಬಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದಿದೆ.
ಸಾಗರ ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಪೈಕಿ ಆವಿನಹಳ್ಳಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಬಿಂದು.ಬಿ ಇವರು ಸಾಗರ ತಾಲೂಕು ಮಟ್ಟದ 13ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದೆ.
ಬಿಂದು.ಬಿ ಇವರು ಆವಿನಹಳ್ಳಿಯ ಬಸವರಾಜ್ ಬಿ.ಕೆ ಹಾಗೂ ಬನಶಂಕರಿ ಇವರ ಪುತ್ರಿಯಾಗಿದ್ದಾರೆ. ಬಸವರಾಜ ಅವರು ವೃತ್ತಿಯಲ್ಲಿ ಆಟೋ ಚಾಲಕರು. ತಾಯಿ ಬನಶಂಕರಿ ಅವರು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಪ್ರಾಥಮಿಕ ಶಾಲಾ ಹಂತದಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಿಂದು ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿರುತ್ತಾರೆ. ಹಲವಾರು ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ. ರೇಡಿಯೋ ಶಿವಮೊಗ್ಗದಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಎಂಬುದಾಗಿ ಮಾಹಿತಿ ನೀಡಿದೆ.
ವರದಿ: ಉಮೇಶ್ ಮೊಗವೀರ, ಸಾಗರ
BREAKING: ವಂಚನೆ ಕೇಸಲ್ಲಿ ಐಶ್ವರ್ಯ ಗೌಡಗೆ ಹೈಕೋರ್ಟ್ ಜಾಮೀನು ಮಂಜೂರು
GOOD NEWS: ರಾಜ್ಯದ ಜನತೆಗೆ ಗುಡ್ ನ್ಯೂಸ್: ಫೆ.10ರೊಳಗೆ ‘ಖಾತಾ’ ನೀಡುವ ಪ್ರಕ್ರಿಯೆ ಪೂರ್ಣ- ಸಿಎಂ ಸಿದ್ಧರಾಮಯ್ಯ