ನವದೆಹಲಿ: ಸ್ಟ್ರೀಟ್ ಫುಡ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಜನರು ಸುಲಭವಾಗಿ ಸಿಗಬಹುದಾದ ಆಹಾರಗಳನ್ನು ಇಷ್ಟಪಡುತ್ತಾರೆ ಏಕೆಂದರೆ ಅವು ರುಚಿಯಲ್ಲಿ ಅತ್ಯುತ್ತಮವಾಗಿವೆ ಎನ್ನುವ ಕಾರಣಕ್ಕೆ. ಪ್ರತಿ ನಗರ ಮತ್ತು ಸಣ್ಣ ಜಿಲ್ಲೆಗಳು ತಮ್ಮದೇ ಆದ ಬೀದಿ ಆಹಾರಗಳನ್ನು ಹೊಂದಿವೆ, ಇದು ಈ ಸ್ಥಳಗಳ ರುಚಿಯನ್ನು ಪ್ರತಿನಿಧಿಸುತ್ತದೆ.
ವಡಾ ಪಾವ್, ಗೋಲ್ ಗಪ್ಪೆ, ಚಾಟ್, ಚೋಲೆ ಭಾತುರೆ ಮತ್ತು ದೋಸೆಗಳು ಕೆಲವು ಸಾಮಾನ್ಯ ವಿಧಗಳಾಗಿವೆ. ಅವು ನಿಜವಾಗಿಯೂ ರುಚಿಕರವಾಗಿದ್ದರೂ, ಈ ಮಳಿಗೆಗಳಲ್ಲಿ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ನೈರ್ಮಲ್ಯ. ಈಗ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅಲ್ಲಿ ವ್ಯಕ್ತಿಯೊಬ್ಬರು ಆರೋಗ್ಯಕರವಲ್ಲದ ಸ್ಥಳದಲ್ಲಿ ತಯಾರು ಮಾಡಿದ ಆಹಾರದ ವಿಡಿಯೋ ಈಗ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿಒಬ್ಬ ವ್ಯಕ್ತಿಯು ಬಾಣಲೆಯಲ್ಲಿ ಪೂರಿಗಳನ್ನು ತೇಲಿಸುತ್ತಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ದೊಡ್ಡ ಇಲಿಗಳು ಆರಾಮವಾಗಿ ತಿರುಗಾಡುವುದನ್ನು ಕಾಣಬಹುದಾಗಿದೆ. . ಪುರಿ ಹಿಟ್ಟನ್ನು ಇಟ್ಟಿದ್ದ ಪಾತ್ರೆಯ ಮೇಲೆ ಒಂದು ಇಲಿ ಚಲಿಸುತ್ತಿರುವುದು ಕಂಡುಬಂದಿದೆ. ಈಗ ಈ ವಿಡಿಯೋ ವೈರಲ್ ಆಗಿದೆ.
Please, always check the kitchen of weddings, or local food distribution system, don’t let it become a common sight. This is alarming. pic.twitter.com/LI5JzfcHql
— Chirag Barjatya (@chiragbarjatyaa) January 1, 2024