ಯಾದಗಿರಿ: ಜಿಲ್ಲೆಯಲ್ಲಿ 26ನೇ ವಯಸ್ಸಿಗೆ ಆಡಂಬರದ ಜೀವನ ಸಾಕಾದಂತ ಯುವತಿಯೊಬ್ಬಳು, ಐಷಾರಾಮಿ ಜೀವನ ತ್ಯಜಿಸಿ, ಸನ್ಯಾಸತ್ವವನ್ನು ಸ್ವೀಕರಿಸಿದಂತ ಘಟನೆ ನಡೆದಿದೆ.
ನರೇಂದ್ರ ಗಾಂಧಿ ಹಾಗೂ ಸಂಗೀತಾ ಗಾಂಧಿ ಅವರ ಪುತ್ರಿಯೇ ಸನ್ಯಾಸತ್ವ ಸ್ವೀಕಾರ ಮಾಡಿರುವಂತ 26 ವರ್ಷದ ನಿಖಿತಾ ಆಗಿದ್ದಾರೆ. ಯಾದಗಿರಿಯ ಜೈನ್ ಬಡಾವಣೆಯ ನಿವಾಸಿಯಾಗಿರುವಂತ ನಿಖಿತಾ ಕೋಟ್ಯಧೀಶರ ಪುತ್ರಿ.
ನರೇಂದ್ರ ಗಾಂಧಿ ಅವರು ಕೋಟ್ಯಾಧೀಶರಾಗಿದ್ದು, ಅವರ ಪುತ್ರಿಯೇ ನಿಖಿತಾ ಇಂದು ಅದೆಲ್ಲವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸುವ ಮೂಲಕ ಐಷಾರಾಮಿ ಜೀವನವನ್ನು ತ್ಯಜಿಸಿದ್ದಾರೆ.
ಇಂದು ಅದ್ಧೂರಿ ಮೆರವಣಿಗೆಯ ಮೂಲಕ ಜೈನಮಂದಿರಕ್ಕೆ ಪುತ್ರಿ ನಿಖಿತಾರನ್ನು ಅವರ ತಂದೆ ನರೇಂದ್ರ ಗಾಂಧಿ ಹಾಗೂ ತಾಯಿ ಸಂಗೀತಾ ಗಾಂಧಿ ಕರೆದೊಯ್ದರು. ಅಲ್ಲಿ ಶಾಸ್ತ್ರೋಕ್ತವಾಗಿ ಹೊಸ ಬಟ್ಟೆ ಸೇರಿದಂತೆ ಸಾಕಷ್ಟು ವಸ್ತುಗಳನ್ನು ದಾನ ಮಾಡಿದರು. ಆ ಬಳಿ ಸನ್ಯಾಸತ್ವವನ್ನು ಸ್ವೀಕರಿಸಿದರು.