Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜಕೀಯ ವೈಷಮ್ಯ ಮರೆತ ನಾಯಕರು: ರಾಹುಲ್ ಗಾಂಧಿ ಬಳಿ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!

12/04/2026 7:49 AM

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ

12/04/2026 7:48 AM

BIG NEWS : ಮತದಾನ, ಚುನಾವಣೆ ಸ್ಪರ್ಧೆ ಮೂಲಭೂತ ಹಕ್ಕಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

12/04/2026 7:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ
KARNATAKA

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ

By kannadanewsnow5712/04/2026 7:48 AM

ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದಿಂದಲೇ ಆಯ್ದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ‘ದ್ವಿಭಾಷಾ ಮಾಧ್ಯಮ’ ನೀತಿಯನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ.

ಈ ಹೊಸ ನೀತಿಯ ಅನ್ವಯ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇನ್ಮುಂದೆ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲಿಯೂ ಪಾಠ ಪ್ರವಚನಗಳು ನಡೆಯಲಿವೆ.

ಶಿಕ್ಷಕರಿಗೆ ತೀವ್ರತರದ ತರಬೇತಿ

ದ್ವಿಭಾಷಾ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ರಾಜ್ಯದ ಸುಮಾರು 1,55,950 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಮಾಧ್ಯಮ ಬೋಧನೆಯ ತರಬೇತಿಯನ್ನು ನೀಡಲು ಸರ್ಕಾರ ಚಾಲನೆ ನೀಡಿದೆ. ಈ ತರಬೇತಿಯು ಒಟ್ಟು ಮೂರು ಹಂತಗಳಲ್ಲಿ ನಡೆಯಲಿದ್ದು, ಶಿಕ್ಷಕರು ಮಕ್ಕಳಿಗೆ ಇಂಗ್ಲಿಷ್ನಲ್ಲಿ ಸುಲಭವಾಗಿ ಪಾಠ ಮಾಡುವ ಕೌಶಲವನ್ನು ಇಲ್ಲಿ ಕಲಿಯಲಿದ್ದಾರೆ.

ತರಬೇತಿಯ ಹಂತಗಳು:
ಮೊದಲ ಹಂತ: ಪ್ರತಿ ಜಿಲ್ಲೆಯ ಡಯಟ್ನಿಂದ (DIET) ಒಬ್ಬರು ನೋಡಲ್ ಅಧಿಕಾರಿಯಂತೆ ರಾಜ್ಯದ ಒಟ್ಟು 385 ಸಂಪನ್ಮೂಲ ವ್ಯಕ್ತಿಗಳಿಗೆ (MRP) ಬೆಂಗಳೂರಿನ ಪ್ರತಿಷ್ಠಿತ ‘ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ ದಕ್ಷಿಣ ಭಾರತ’ (RIE-SI) ವತಿಯಿಂದ ತರಬೇತಿ ನೀಡಲಾಗುತ್ತದೆ.

ಎರಡನೇ ಹಂತ: ಈ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಪ್ರತಿ ತಾಲೂಕಿನ ತಲಾ 15 ಸಂಪನ್ಮೂಲ ವ್ಯಕ್ತಿಗಳಂತೆ ರಾಜ್ಯದ ಒಟ್ಟು 3,060 ಶಿಕ್ಷಕರಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಿದ್ದಾರೆ.

ಮೂರನೇ ಹಂತ: ಅಂತಿಮವಾಗಿ ದ್ವಿಭಾಷಾ ಮಾಧ್ಯಮ ಜಾರಿಗೆ ಬರುವ ಶಾಲೆಗಳ ಎಲ್ಲಾ ಶಿಕ್ಷಕರಿಗೆ ಈ ತರಬೇತಿಯನ್ನು ತಲುಪಿಸಲಾಗುತ್ತದೆ.

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸುವ ಗುರಿ
ಈ ಹಿಂದೆ ಎಸ್ಎಸ್ಎಲ್ಸಿಯಲ್ಲಿ ಹಿಂದಿ ಭಾಷೆಯ ಅಂಕಗಳನ್ನು ಕೈಬಿಟ್ಟ ಸರ್ಕಾರದ ನಿರ್ಧಾರಕ್ಕೆ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಅವರನ್ನು ಜಾಗತಿಕ ಸ್ಪರ್ಧೆಗೆ ಸಿದ್ಧಪಡಿಸಲು ಈ ದ್ವಿಭಾಷಾ ನೀತಿಯನ್ನು ಘೋಷಿಸಿದ್ದಾರೆ. ಇದು ಮಕ್ಕಳ ಭವಿಷ್ಯ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದು ಶಿಕ್ಷಣ ಇಲಾಖೆ ಆಶಯ ವ್ಯಕ್ತಪಡಿಸಿದೆ.

'Bilingual policy' to be implemented in government schools in 15 districts of the state from this year itself
Share. Facebook Twitter LinkedIn WhatsApp Email

Related Posts

ರಾಜ್ಯದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಸರ್ಕಾರಿ ಕಾಲೇಜುಗಳಲ್ಲಿ ಈ ವರ್ಷ ಶುಲ್ಕ ಹೆಚ್ಚಳವಿಲ್ಲ.!

12/04/2026 7:28 AM1 Min Read

ಕರ್ನಾಟಕ SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಪಾಸ್ ಆಗಲು 173 ಅಂಕ ಪಡೆಯೋದು ಕಡ್ಡಾಯ

12/04/2026 7:18 AM1 Min Read

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

12/04/2026 7:15 AM2 Mins Read
Recent News

ರಾಜಕೀಯ ವೈಷಮ್ಯ ಮರೆತ ನಾಯಕರು: ರಾಹುಲ್ ಗಾಂಧಿ ಬಳಿ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!

12/04/2026 7:49 AM

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ

12/04/2026 7:48 AM

BIG NEWS : ಮತದಾನ, ಚುನಾವಣೆ ಸ್ಪರ್ಧೆ ಮೂಲಭೂತ ಹಕ್ಕಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

12/04/2026 7:41 AM

BREAKING : ಬಿಹಾರದಲ್ಲಿ ಘೋರ ದುರಂತ : ಟ್ರಕ್ ಗೆ ಬಸ್ ಡಿಕ್ಕಿಯಾಗಿ 13 ಮಂದಿ ಸಾವು.!

12/04/2026 7:35 AM
State News
KARNATAKA

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ

By kannadanewsnow5712/04/2026 7:48 AM KARNATAKA 1 Min Read

ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದಿಂದಲೇ ಆಯ್ದ 15 ಜಿಲ್ಲೆಗಳ…

ರಾಜ್ಯದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಸರ್ಕಾರಿ ಕಾಲೇಜುಗಳಲ್ಲಿ ಈ ವರ್ಷ ಶುಲ್ಕ ಹೆಚ್ಚಳವಿಲ್ಲ.!

12/04/2026 7:28 AM

ಕರ್ನಾಟಕ SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಪಾಸ್ ಆಗಲು 173 ಅಂಕ ಪಡೆಯೋದು ಕಡ್ಡಾಯ

12/04/2026 7:18 AM

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

12/04/2026 7:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.