ಬಿಲಾಸ್ಪುರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ೧೧ ಕ್ಕೆ ಏರಿದೆ ಮತ್ತು ಗಾಯಗೊಂಡವರ ಸಂಖ್ಯೆ ೨೦ ಕ್ಕೆ ಏರಿದೆ. ಛತ್ತೀಸ್ ಗಢದ ಬಿಲಾಸ್ಪುರ ನಿಲ್ದಾಣದ ಬಳಿ ಮಂಗಳವಾರ ಪ್ರಯಾಣಿಕರ ರೈಲು ಕೆಂಪು ಸಿಗ್ನಲ್ ಜಿಗಿದು ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಸಂಜೆ 4 ಗಂಟೆ ಸುಮಾರಿಗೆ ಮೆಮು (ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಪ್ರಯಾಣಿಕರ ರೈಲು ನೆರೆಯ ಕೊರ್ಬಾ ಜಿಲ್ಲೆಯ ಗೆವ್ರಾದಿಂದ ಬಿಲಾಸ್ಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಕ್ಕಿಯ ಪರಿಣಾಮವು ಎಷ್ಟು ತೀವ್ರವಾಗಿತ್ತೆಂದರೆ, ಪ್ರಯಾಣಿಕರ ರೈಲಿನ ಬೋಗಿ ಸರಕು ರೈಲಿನ ವ್ಯಾಗನ್ ಮೇಲೆ ಕೊನೆಗೊಂಡಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿಲಾಸ್ಪುರ ರೈಲು ಅಪಘಾತ: ವಿಷ್ಣು ದೇವ್ ಸಾಯಿ
ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಬಿಲಾಸ್ಪುರ ರೈಲು ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ., ಗಾಯಗೊಂಡವರಿಗೆ 50,000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ








