ಬೆಂಗಳೂರು: ಬಿಜೆಪಿ ಶಾಸಕ ಭೈರತಿ ಬಸವರಾಜ ಬಂಧನಕ್ಕೆ ಸಿಐಡಿ ಪೊಲೀಸರು ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಇದೇ ಪ್ರಕರಣದಲ್ಲಿ 20ನೇ ಆರೋಪಿಯಾಗಿರುವಂತ ಅಜಿತ್ ಅವರಿಗೆ ನೀಡಿದ್ದಂತ ಮಧ್ಯಂತರ ಜಾಮೀನು ತೆರವುಗೊಳಿಸಿರುವಂತ ಕೋರ್ಟ್, ಶರಣಾಗುವಂತೆ ಆದೇಶ ಮಾಡಿದೆ.
ಇಂದು ಬೆಂಗಳೂರಿನ 82ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಯಿತು. ಬಿಕ್ಲು ಶಿವ ಕೊಲೆ ಕೇಸಲ್ಲಿ ಆರೋಪಿ ಅಜಿತ್ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಜಾಮೀನು ಅರ್ಜಿ ವಜಾಗೊಳಿಸಿ ತಕ್ಷಣ ಶರಣಾಗಲು ಸೂಚಿಸಲಾಗಿದೆ. 82ನೇ ಸಿಸಿಹೆಚ್ ನ್ಯಾಯಾಲಯ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಆದೇಶಿಸಿದ್ದಾರೆ.
ಈ ಹಿನ್ನಲೆಯಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 20ನೇ ಆರೋಪಿಯಾಗಿರುವಂತ ಅಜಿತ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಕೀಲನೆಂಬ ಕಾರಣಕ್ಕೆ ಬಂಧಿಸಿದ್ದಾರೆಂದು ಅಜಿತ್ ವಾದಿಸಿದ್ದರು. ಹೀಗಾಗಿ ಮಧ್ಯಂತರ ಜಾಮೀನನ್ನು ಕೋರ್ಟ್ ಮಂಜೂರು ಮಾಡಿತ್ತು. ಆದರೇ ಈಗ ಮಧ್ಯಂತರ ಜಾಮೀನು ತೆರವುಗೊಳಿಸಿ, ಶರಣಾಗಲು ಸೂಚಿಸಿದೆ.
ಗ್ರಾಮಾಭಿವೃದ್ಧಿಗೆ ವಿಬಿ-ಜಿ ರಾಮ್ ಜಿ ಕಾಯಿದೆ ಸಹಕಾರಿ: ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ್
BREAKING: ಬಿಕ್ಲು ಶಿವ ಕೊಲೆ ಕೇಸಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು ಅರೆಸ್ಟ್







