ಬೆಂಗಳೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮತ್ತೆ ದ್ವಿಚಕ್ರವಾಹನಗಳ ಕಾಟ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಪೇಸ್‌ಬುಕ್‌ನಲ್ಲಿ ರಾಜೇಂದ್ರ ಪ್ರಸಾದ್ ಎನ್ನುವವರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದು, ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದ್ದಾರೆ.
ಹಾಗಾದ್ರೇ ರಾಜೇಂದ್ರ ಪ್ರಸಾದ್ ಹೇಳಿರುವುದು ಏನು? ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬೈಕುಗಳಿಗೆ ಪ್ರವೇಶವಿಲ್ಲ. ಹೆಚ್ಚು ವೇಗದಲ್ಲಿ ನಾಲ್ಕು ಚಕ್ರದ ವಾಹನಗಳು ಚಲಿಸುವುದರಿಂದ ಅಡ್ಡಾದಿಡ್ಡಿ ಬೈಕುಗಳು ಬಂದರೆ ಚಾಲಕರು ವಿಚಲಿತರಾಗಿ ಅಪಘಾತಗಳಾಗುವುದು ನಿಶ್ಚಿತ. ಈ ಹಿಂದೆಯೇ ಬಹಳ ಕಠಿಣವಾಗಿ ಬೈಕುಗಳ ಪ್ರವೇಶ ನಿಷೇಧ ಮಾಡಿ, ಹೆದ್ದಾರಿಯ ಪ್ರವೇಶಗಳಲ್ಲಿ ಕಾವಲು ಇರಿಸಲಾಗಿತ್ತು. ಆದ್ರೆ ಕೆಲವರು ಹುಚ್ಚು ಸಾಹಸ ಮಾಡುವ ಧಾವಂತದಲ್ಲಿ ಹೆದ್ದಾರಿಯ ಮಧ್ಯೆ ನುಗ್ಗುವುದು ನಿಂತಿಲ್ಲ.
ಈ ಚಿತ್ರದಲ್ಲಿ ಕಾಣುತ್ತಿರುವ ಬೈಕು ಸವಾರ, ತನ್ನ ಬೈಕಿನ ನಂಬರ್ ಪ್ಲೇಟ್ ಕಾಣದಂತೆ ಮುಚ್ಚಿ ವಿಪರೀತ ವೇಗವಾಗಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾನೆ. ಅನಧಿಕೃತ ಪ್ರವೇಶ, ನಿಯಮ ಮೀರಿದ ವೇಗ, ನಂಬರ್ ಪ್ಲೇಟ್ ಮುಚ್ಚಿಡುವುದು… ಹೀಗೆ ಸಾಲು ಸಾಲು ನಿಯಮಗಳ ಉಲ್ಲಂಘನೆ. ಚೂರು ಹೆಚ್ಚುಕಮ್ಮಿಯಾದರೆ ಇವನಿಂದಾಗಿ ಸಾರ್ವಜನಿಕರ ಆಸ್ತಿ ಮತ್ತು ಪ್ರಾಣಕ್ಕೆ ಕುತ್ತು. ಇಂತಹ ಉಲ್ಲಂಘನೆಗಳು ಖುಷಿಯ ವಿಚಾರವಾಗಬಾರದು, ಇದು ವಿಕೃತವಾದ ಮನಸ್ಥಿತಿ.
ಪೋಟೋ, ಮಾಹಿತಿ ಕೃಪೆ: ರಾಜೇಂದ್ರ ಪ್ರಸಾದ್ ಫೇಸ್‌ಬುಕ್ ಖಾತೆ








