ಬೆಂಗಳೂರು: ನಗರದಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದೆ. ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ರೂಪೇನ ಅಗ್ರಹಾರ ಬಸ್ ನಿಲ್ದಾಣದ ಬಳಿಯಲ್ಲಿ ಆಟೋಗೆ ಬೈಕ್ ತಾಗಿ ಕೆಳಗೆ ಬಿದ್ದಂತ ಬೈಕ್ ಸವಾರನ ಮೇಲೆಯೇ ಬಿಎಂಟಿಸಿ ಬಸ್ ಹರಿದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಸೈಯದ್ ಜಾಫರ್ ಹುಸೇನ್(33) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಂದಾಪುರದಿಂದ ಬನಶಂಕರಿ ಮಾರ್ಗವಾಗಿ ಬಸ್ ತೆರಳುತ್ತಿತ್ತು. 21ನೇ ಡಿಪೋಗೇ ಸೇರಿದಂತೆ ಬಿಎಂಟಿಸಿ ಬಸ್ ಕೆಎ 57, ಎಫ್ 5778 ಸಂಖ್ಯೆಯದ್ದಾಗಿತ್ತು. ಆಟೋಗೆ ಬೈಕ್ ತಗುಲಿ ಕೆಳಗೆ ಬಿದ್ದ ಸವಾರನ ಮೇಲೆಯೇ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಿದೇಶಿ ವ್ಯಾಸಂಗ’ದ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: ಆ.17ರಂದು ಬೆಂಗಳೂರಲ್ಲಿ ‘ಅಧ್ಯಯನ ಮೇಳ’ ಆಯೋಜನೆ
64,197 ರೈಲ್ವೆ ಹುದ್ದೆಗಳಿಗೆ 1.87 ಕೋಟಿ ಅರ್ಜಿಗಳು ಸಲ್ಲಿಕೆ: ರೈಲ್ವೆ ಸಚಿವಾಲಯದ ಅಂಕಿ ಅಂಶಗಳು