ವಡೋದರಾ : ಗುಜರಾತ್ನ ವಡೋದರಾದಲ್ಲಿ ದೋಣಿಯೊಂದು ಪಲ್ಟಿಯಾಗಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾಹ್ನ ಹರ್ನಿ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಮೃತರಲ್ಲಿ ಕನಿಷ್ಠ ಹತ್ತು ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದ್ದಾರೆ. ದೋಣಿಯಲ್ಲಿದ್ದ ಇತರ 15 ಜನರನ್ನ ರಕ್ಷಿಸಲಾಗಿದೆ. ಈ ಮಕ್ಕಳೆಲ್ಲ ಸನ್ರೈಸ್ ಶಾಲೆಯವರು. ಅಪಘಾತದ ಪ್ರತ್ಯಕ್ಷದರ್ಶಿಗಳ ಪ್ರಕಾರ, ದೋಣಿ ಸವಾರಿ ಮಾಡುವಾಗ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ.
ಸನ್ರೈಸ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನ ಗುರುವಾರ ಪಿಕ್ನಿಕ್ಗೆ ಕರೆದುಕೊಂಡು ಹೋಗಲಾಗಿತ್ತು. ಪಿಕ್ನಿಕ್’ಗೆ ತೆರಳಿದ ಬಾಲಕಿ ನ್ಯಾನ್ಸಿಯ ತಾಯಿ ನಿರಾಲಿಬೆನ್ ಮಾಚಿ, ತನ್ನ ಮಗಳು 2ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಶಾಲಾ ವಿಹಾರಕ್ಕೆಂದು ಇತರ ಮಕ್ಕಳೊಂದಿಗೆ ಹರಣಿ ವಾಟರ್ ಪಾರ್ಕ್ ಮತ್ತು ಕೆರೆಗೆ ಬೆಳಗ್ಗೆ 8 ಗಂಟೆಗೆ ತೆರಳಿದ್ದರು. ಸಂಜೆ ಮಕ್ಕಳ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ ಎಂದು ಕರೆ ಬಂತು.
ದೋಣಿಯಲ್ಲಿ ಶಾಲಾ ಮಕ್ಕಳ ತಂಡವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ 23 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಇದ್ದರು. ಸಮತೋಲನ ತಪ್ಪಿ ಬೋಟ್ ಪಲ್ಟಿಯಾಗಿದೆ. ಯಾವ ಮಕ್ಕಳೂ ಲೈಫ್ ಜಾಕೆಟ್ ಧರಿಸಿರಲಿಲ್ಲ. ಮಕ್ಕಳಿಗೆ ಈಜು ಬಾರದೇ ಇದ್ದುದರಿಂದ ನೀರಿನಲ್ಲಿ ಮುಳುಗತೊಡಗಿದರು. ಸ್ಥಳದಲ್ಲಿದ್ದವರು ಮಕ್ಕಳನ್ನ ರಕ್ಷಿಸಲು ಹರಸಾಹಸ ಪಟ್ಟರು. ಅಷ್ಟರಲ್ಲಿ ಆಡಳಿತ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸಲು ಪ್ರಾರಂಭಿಸಿದರು.
BREAKING : ಆಸ್ಟ್ರೇಲಿಯನ್ ಓಪನ್ ‘ಟೆನಿಸ್ ಟೂರ್ನಿ’ಯಿಂದ ವಿಶ್ವದ ನಂ.3 ಆಟಗಾರ್ತಿ ‘ಎಲೆನಾ ರೈಬಾಕಿನ’ ಔಟ್
BREAKING : ಗುಜರಾತ್ ವಡೋದರಾ ಸರೋವರದಲ್ಲಿ ದೋಣಿ ಮುಳುಗಡೆ : 6 ಮಕ್ಕಳು ಸಾವು, 21 ಮಕ್ಕಳು ನಾಪತ್ತೆ
‘NPS’ ನಿಯಮ ಬದಲಿಸಿದ ಸರ್ಕಾರ : ಭಾಗಶಃ ಹಿಂಪಡೆಯಲು ಅವಕಾಶ, ಫೆ.1ರಿಂದ ‘ಹೊಸ ರೂಲ್ಸ್’ ಜಾರಿ