ವಡೋದರಾ: ಗುಜರಾತ್’ನ ವಡೋದರಾ ನಗರದ ಹೊರವಲಯದಲ್ಲಿರುವ ಹರ್ನಿ ಸರೋವರದಲ್ಲಿ ಗುರುವಾರ ದೋಣಿ ಪಲ್ಟಿಯಾಗಿ ಕನಿಷ್ಠ 16 ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ. ದೋಣಿಯಲ್ಲಿ 27 ವಿದ್ಯಾರ್ಥಿಗಳು ಪಿಕ್ನಿಕ್’ಗೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 10 ಮಕ್ಕಳನ್ನ ರಕ್ಷಿಸಲಾಗಿದೆ.
ಪ್ರಸ್ತುತ, ಉಳಿದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
#WATCH | Gujarat: Visuals from SSG Hospital in Vadodara after a boat carrying children capsized in Harni Motnath Lake. pic.twitter.com/xBWOmxVWZp
— ANI (@ANI) January 18, 2024
ಟ್ವೀಟ್ ಮೂಳಕ ದುಃಖ ವ್ಯಕ್ತ ಪಡೆಸಿದ ಪ್ರಧಾನಿ ಮೋದಿ, “ಅಪಘಾತದ ನಂತ್ರ, ವಡೋದರಾದ ಹರ್ನಿ ಸರೋವರದಲ್ಲಿ ದೋಣಿ ಮಗುಚಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ಕಚೇರಿ 2 ಲಕ್ಷ ರೂ.ಗಳ ಪರಿಹಾರವನ್ನ ಘೋಷಿಸಿದೆ. ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ” ಎಂದು ಹೇಳಿದ್ದಾರೆ.
Distressed by the loss of lives due to a boat capsizing at the Harni lake in Vadodara. My thoughts are with the bereaved families in this hour of grief. May the injured recover soon. The local administration is providing all possible assistance to those affected.
An ex-gratia…
— PMO India (@PMOIndia) January 18, 2024
ಮೃತರ ಕುಟುಂಬಗಳಿಗೆ PMNRFನಿಂದ ತಲಾ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುವುದು.