ನವದೆಹಲಿ : ಮೆಟಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಾಟ್ಸಾಪ್ 2023ರ ಡಿಸೆಂಬರ್ನಲ್ಲಿ ದೇಶದಲ್ಲಿ 69 ಲಕ್ಷಕ್ಕೂ ಹೆಚ್ಚು ‘ಕೆಟ್ಟ ಖಾತೆಗಳನ್ನ’ ನಿಷೇಧಿಸಿದೆ. ಹೊಸ ಐಟಿ ನಿಯಮಗಳು 2021ಕ್ಕೆ ಅನುಸಾರವಾಗಿ ಕಂಪನಿಯು ಈ ಮಾಹಿತಿಯನ್ನು ನೀಡಿದೆ. ಡಿಸೆಂಬರ್ 1-31ರ ನಡುವೆ 6,9,34,000 ಖಾತೆಗಳನ್ನು ನಿಷೇಧಿಸಿದೆ.
ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು, ಈ ಖಾತೆಗಳಲ್ಲಿ ಸುಮಾರು 16,58,000ನ್ನ ಸಕ್ರಿಯವಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ತನ್ನ ಮಾಸಿಕ ಅನುಸರಣಾ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಡಿಸೆಂಬರ್ನಲ್ಲಿ ದೇಶದಲ್ಲಿ ದಾಖಲೆಯ 16,366 ದೂರು ವರದಿಗಳನ್ನ ಸ್ವೀಕರಿಸಿದೆ.
“ಅಕೌಂಟ್ಸ್ ಆಕ್ಷನ್ಡ್” ಎಂಬುದು ವರದಿಯ ಆಧಾರದ ಮೇಲೆ ವಾಟ್ಸಾಪ್ ಪರಿಹಾರ ಕ್ರಮಗಳನ್ನ ತೆಗೆದುಕೊಂಡ ವರದಿಗಳನ್ನ ಸೂಚಿಸುತ್ತದೆ, ಮತ್ತು ಕ್ರಮ ತೆಗೆದುಕೊಳ್ಳುವುದು ಎಂದರೆ ಖಾತೆಯನ್ನ ನಿಷೇಧಿಸುವುದು ಅಥವಾ ಈಗಾಗಲೇ ನಿಷೇಧಿಸಲಾದ ಖಾತೆಯನ್ನ ಪುನಃಸ್ಥಾಪಿಸುವುದು.
ಭ್ರಷ್ಟಾಚಾರ ಕುರಿತು ಮಾಹಿತಿ ನೀಡುವುದ್ರಿಂದ ‘CBI’ಗೆ ‘RTI ಕಾಯ್ದೆ’ ಸಂಪೂರ್ಣ ವಿನಾಯಿತಿ ನೀಡುವುದಿಲ್ಲ: ಹೈಕೋರ್ಟ್
ಅಯೋಧ್ಯೆ ರಾಮ ಮಂದಿರ ಕುರಿತ ಬಿಬಿಸಿಯ ‘ಪಕ್ಷಪಾತದ ಪ್ರಸಾರ’ಕ್ಕೆ ಬ್ರಿಟಿಷ್ ಸಂಸದ ‘ಬಾಬ್ ಬ್ಲ್ಯಾಕ್ಬರ್ನ್’ ಖಂಡನೆ
ಪ್ರಾಣವನ್ನೇ ಪಣಕ್ಕಿಟ್ಟು ‘ಗರ್ಭಿಣಿ’ ರಕ್ಷಿಸಿದ ಹೆಮ್ಮೆಯ ಯೋಧರು, ಮೈ ಕೊರೆಯುವ ಚಳಿಯಲ್ಲಿ ಸಾಹಸ, ವಿಡಿಯೋ ವೈರಲ್